7 ಬಾರಿಯ ಫಾರ್ಮುಲಾ-1 ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್’ಗೆ ಕನ್ನಡ ಕಲಿಸಿದ ಯುವತಿ

ಏಳು ಬಾರಿ ಫಾರ್ಮುಲಾ-1 ಚಾಂಪಿಯನ್ (Formula 1 Champion) ಪಡೆದ 35ರ ಹರೆಯದ ಲೂಯಿಸ್ ಹ್ಯಾಮಿಲ್ಟನ್ (Lewis Hamilton) ಅವರ ಬಾಯಲ್ಲಿ ಕನ್ನಡ ಪದವನ್ನು ಉಚ್ಚರಿಸುವ ಪ್ರಯತ್ನದಲ್ಲಿ ಯುವತಿಯೊಬ್ಬರು ಯಶಸ್ವಿಯಾಗಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಯಾರು ಈ ಯುವತಿ? ಏನಿದು ಘಟನೆ? ವಿಡಿಯೋದಲ್ಲಿರುವುದು ಏನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಈ ಸ್ಟೋರಿ ಓದಿ.

ಲೂಯಿಸ್ ಹ್ಯಾಮಿಲ್ಟನ್ ಅವರನ್ನು ಭೇಟಿಯಾಗಿರುವ ಯುವತಿಯೊಬ್ಬರು ಗುಡ್ ಲಕ್ ಎಂಬ ಪದವನ್ನು 44 ವಿವಿಧ ಭಾಷೆಗಳಲ್ಲಿ ಬರೆದಿರುವ ಫ್ಲಕಾರ್ಡ್ವೊಂದನ್ನು ಹ್ಯಾಮಿಲ್ಟನ್ ಗೆ ತೊರಿಸಿದ್ದಾರೆ. ಇದರಲ್ಲಿ ಕನ್ನಡದಲ್ಲೂ ಒಳ್ಳೆಯದಾಗಲಿ ಎಂಬ ಪದವನ್ನು ಬರೆಯಲ್ಲಾಗಿದ್ದು, ಈ ಪದವನ್ನು ಹ್ಯಾಮಿಲ್ಟನ್ ಬಾಯಿಯಿಂದ ಹೇಳಿಸುವಲ್ಲಿ ಯುವತಿ ಯಶಸ್ವಿಯಾಗಿದ್ದಾಳೆ.

ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ‘def not sxchidxnxnd’ ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಯಾವುದೋ ಕಟ್ಟಡದಿಂದ ಹೊರಬರುತ್ತಿರುವ ಲೂಯಿಸ್ ಹ್ಯಾಮಿಲ್ಟನ್ ರನ್ನು ಅಡ್ಡಗಟ್ಟಿರುವ ಯುವತಿ, ಗುಡ್ ಲಕ್ ಎಂಬ ಪದವನ್ನು 44 ಭಾಷೆಗಳಲ್ಲಿ ಬರೆಯಲಾಗಿರುವ ಫ್ಲಕಾರ್ಡ್ ಅನ್ನು ಹ್ಯಾಮಿಲ್ಟನ್ ಗೆ ತೋರಿಸುತ್ತಾಳೆ.

ಕನ್ನಡದಲ್ಲಿ ವಿವರಿಸಿದ ಯುವತಿ; ಓದಲು ಪ್ರಯತ್ನಿಸಿದ ಹ್ಯಾಮಿಲ್ಟನ್:

ಇದನ್ನು ನೋಡಿದ ಹ್ಯಾಮಿಲ್ಟನ್ ಆ ಫ್ಲಕಾರ್ಡ್ ಫೋಟೋವನ್ನು ತಮ್ಮ ಮೊಬೈಲ್ನಿಂದ ಸೆರೆ ಹಿಡಿದುಕೊಳ್ಳುತ್ತಾರೆ. ಅಲ್ಲದೆ ವಿವಿಧ ಭಾಷೆಗಳಲ್ಲಿ ಬರೆದಿರುವ ಆ ಪದವನ್ನು ಓದಲು ಆರಂಭಿಸುತ್ತಾರೆ. ಈ ವೇಳೆ ಕನ್ನಡದಲ್ಲಿ ಬರೆದಿರುವ ಪದದ ಬಗ್ಗೆ ಹೇಳುವ ಯುವತಿ ಇದು ನನ್ನ ಭಾಷೆ ಕನ್ನಡ, ಇಲ್ಲಿ ಒಳ್ಳೆಯದಾಗಲಿ ಎಂದು ಬರೆಯಲಾಗಿದೆ ಎಂದು ಹೇಳುತ್ತಾ ಅದರ ಅರ್ಥವನ್ನು ಆಂಗ್ಲ ಭಾಷೆಯಲ್ಲಿ ಹ್ಯಾಮಿಲ್ಟನ್ ಗೆ ವಿವರಿಸಿದ್ದಾಳೆ. ನಂತರ ಹ್ಯಾಮಿಲ್ಟನ್ ಬಾಯಿಯಲ್ಲಿ ಒಳ್ಳೆಯದಾಗಲಿ ಪದವನ್ನು ಹೇಳಿಸಿದ್ದಾಳೆ. ಒಂದೆರಡು ಬಾರಿ ಈ ಪದವನ್ನು ಹೇಳಲು ಕಷ್ಟ ಪಟ್ಟ ಹ್ಯಾಮಿಲ್ಟನ್, ಕೊನೆಗೂ ಒಳ್ಳೆಯದಾಗಲಿ ಪದವನ್ನು ಉಚ್ಚರಿಸಿ ಇದು ಕನ್ನಡದಲ್ಲಿ ನನ್ನ ಮೊದಲ ಪದ ಎಂದು ಹೇಳುತ್ತಾ ಅಲ್ಲಿಂದ ತೆರಳಿದ್ದಾರೆ.

You might also like
Leave A Reply

Your email address will not be published.