ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಕೇಜ್ರಿವಾಲ್ ಪಡೆಗೆ ತೀವ್ರ ಮಖಭಂಗ

ದೆಹಲಿ ಹೈಕೋರ್ಟ್ ವಿಸ್ತರಣೆಗೆ ಮೀಸಲಿರಿಸಿರುವ ಜಾಗದಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದ್ದ ಆಮ್ ಆದ್ಮಿ ಪಾರ್ಟಿಗೆ ಸುಪ್ರೀಂ ಕೋರ್ಟ್ ಹೊಸ ಬಿಸಿ ಮುಟ್ಟಿಸಿದೆ. ಜುಲೈ 15 ರೊಳಗೆ ಜಾಗ ಬಿಟ್ಟು ಹೋಗುವಂತೆ ಆಪ್ ಗೆ ಅಪೆಕ್ಸ್ ಕೋರ್ಟ್ ಆದೇಶಿಸಿದೆ.

ಎಲ್ಲಿದೆ ಆಪ್ ಮುಖ್ಯ ಕಚೇರಿ?

ದೆಹಲಿಯ ರೂಸ್ ಅವೆನ್ಯೂ ರಸ್ತೆಯ ಸಮೀಪದಲ್ಲಿ ದೆಹಲಿ ಹೈ ಕೋರ್ಟ್ ವಿಸ್ತರಣೆಗಾಗಿ ಮೀಸಲಿರಿಸಿದ್ದ ಜಾಗದಲ್ಲಿ ಆಮ್ ಆದ್ಮಿ ಪಾರ್ಟಿಯ ಕೇಂದ್ರ ಕಚೇರಿ ಕಾರ್ಯನಿರ್ವಹಿಸುತ್ತಿತ್ತು. ದೆಹಲಿ ಸರ್ಕಾರ ಹಾಗೂ ದೆಹಲಿ ಹೈಕೋರ್ಟ್ ಗೆ ಈ ಹಿಂದೆಯೇ ಸುಪ್ರೀಂ ಕೋರ್ಟ್, ಆಪ್ ನೊಂದಿಗೆ ಸಭೆ ನಡೆಸಿ, ಅವರು ಅತಿಕ್ರಮಿಸಿದ ಹೈಕೋರ್ಟ್ ಗೆ ಮೀಸಲಿರಿಸಿದ ಜಾಗವನ್ನು ಮರಳಿ ಪಡೆಯುವಂತೆ ಸೂಚಿಸಿತ್ತು.

On the threshold of Lok Sabha elections, Kejriwal's team suffered a major setback

ಆದರೆ, ಈ ಬಗ್ಗೆ ಯಾವುದೇ ಬೆಳವಣಿಗೆಗಳಾಗದ ಕಾರಣ, ಮುಖ್ಯ ನ್ಯಾಯಮೂರ್ತಿಗಳಾದ ನ್ಯಾ.ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಜೆ ಬಿ ಪರ್ದಿವಾಲ ಹಾಗೂ ಮನೋಜ್ ಮಿಶ್ರಾ ಒಳಗೊಂಡ ನ್ಯಾಯಪೀಠವು, ಭೂ ಮತ್ತು ಅಭಿವೃದ್ಧಿ ಕಚೇರಿಗೆ ಭೇಟಿ ನೀಡಿ ಸೂಕ್ತ ಜಾಗವನ್ನು ಪಡೆದುಕೊಳ್ಳಲು ಆದೇಶಿಸಿತು. ಹಾಗೂ ಈ ವಿಚಾರವಾಗಿ ನಾಲ್ಕು ವಾರದೊಳಗಾಗಿ ಜಾಗದ ಲಭ್ಯತೆ ಕುರಿತು ವರದಿ ಸಲ್ಲಿಸುವಂತೆ ಭೂ ಮತ್ತು ಅಭಿವೃದ್ಧಿ ಕಚೇರಿಗೆ ಆದೇಶಿಸಿದೆ.

ಈ ವಿಚಾರದ ಕುರಿತು ಆಪ್ ಪರ ವಾದಿಸಿದ ವಕೀಲ ಅಭಿಷೇಕ್ ಸಿಂಘ್ವಿ, “ನಾವೂ ಕೂಡ ಆರು ಪ್ರಮುಖ ರಾಷ್ಟ್ರೀಯ ಪಕ್ಷಗಳಲ್ಲಿ ಒಂದಾಗಿದ್ದೇವೆ. ಆದರೆ, ಉಳಿದೆಲ್ಲಾ ರಾಷ್ಟ್ರೀಯ ಪಕ್ಷಗಳಿಗೆ ಸಿಗುವ ಗೌರವ ಹಾಗೂ ಜಾಗ ನಮಗೆ ದೊರಕಿಲ್ಲ. ಅವರೆಲ್ಲಾ ಉತ್ತಮ ಸ್ಥಾನಗಳಲ್ಲಿದ್ದಾರೆ, ಆದರೆ ನಮಗೆ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಏನೇ ಇರಲಿ, ಈ ನಡೆ ಆಮ್ ಆದ್ಮಿ ಪಾರ್ಟಿಗೆ ಈ ಲೋಕಸಭಾ ಚುನಾವಣಾ ಹೊಸ್ತಿಲಲ್ಲೇ ಪೆಟ್ಟು ನೀಡಿರುವುದಂತೂ ಸತ್ಯ.

You might also like
Leave A Reply

Your email address will not be published.