ವಿಚ್ಚೇದನಕ್ಕೆ ಮುಂದಾದ್ರಾ ನಯನತಾರಾ-ವಿಘ್ನೇಶ್‌ ಜೋಡಿ? – ನಯನತಾರಾ ಈಗೆ ಮಾಡಿದ್ದಾರ್ರೂ ಯಾಕೆ?

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಬಗೆಗಿನ ಶಾಕಿಂಗ್ ನ್ಯೂಸ್ʼವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ನಯನತಾರಾ- ವಿಘ್ನೇಶ್ ಶಿವನ್ ಡಿವೋರ್ಸ್ ಆಗಲಿದ್ದಾರೆ ಎಂಬ ಸುದ್ದಿ ಹರಡಿದ್ದು, ಇದರಲ್ಲಿ ಎಷ್ಟು ಹುರುಳಿದೆ ಎಂಬುದನ್ನು ಕಾದು ನೋಡಬೇಕಿದೆ!

ತಮಿಳಿನ ಬೆಸ್ಟ್ ಕಪಲ್ ಆಗಿ ಗುರುತಿಸಿಕೊಂಡಿದ್ದ ನಯನತಾರಾ ಮತ್ತು ವಿಘ್ನೇಶ್ ಶಿವನ್ ಬಾಳಲ್ಲಿ ಬಿರುಗಾಳಿ ಬೀಸಿದೆಯಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ. ಅದಕ್ಕೆಲ್ಲಾ ಕಾರಣ ನಟಿ ನಯನತಾರಾ ಅವರು ಪತಿ ವಿಘ್ನೇಶ್ರನ್ನು ಅನ್ ಫಾಲೋ ಮಾಡಿರುವುದು.

Nayantara-Vignesh couple ready for divorce? - Why did Nayantara do this?

ಪತ್ನಿಯನ್ನು ವಿಘ್ನೇಶ್ ಫಾಲೋ ಮಾಡ್ತಿದ್ದಾರೆ. ಆದರೆ ನಯನತಾರಾ ಅನ್ ಫಾಲೋ ಮಾಡಿ ಫುಲ್ ಸೈಲೆಂಟ್ ಆಗುವುದರೊಂದಿಗೆ, ‘ಕಣ್ಣಲ್ಲಿ ನೀರು ಬರುತ್ತಿದ್ದರೂ ಇದು ನನಗೆ ಸಿಕ್ಕಿತು’ ಎಂದು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದೊಂದು ಕಾರಣದಿಂದ ಇವರಿಬ್ಬರ ನಡುವೆ ಇದೀಗ ಬಿರುಕು ಮೂಡಿದ್ದು, ಡಿವೋರ್ಸ್ʼಗೆ ಈ ಜೋಡಿ ಮುಂದಾಗಿದೆ ಎಂದೇ ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜನಾ? ಎಂಬುದನ್ನು ಕಾದುನೋಡಬೇಕಿದೆ.

Nayantara-Vignesh couple ready for divorce? - Why did Nayantara do this?

ಹಲವು ವರ್ಷಗಳು ಪ್ರೀತಿಸಿ, ಕಳೆದ ವರ್ಷ ಜೂನ್ʼನಲ್ಲಿ ನಯನತಾರಾ- ವಿಘ್ನೇಶ್ ಶಿವನ್ ಅದ್ಧೂರಿಯಾಗಿ ಮದುವೆಯಾದರು. ಬಳಿಕ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದರು. ಖುಷಿ ಖುಷಿಯಿಂದ ಬದುಕುತ್ತಿದ್ದ ಈ ಜೋಡಿ ಈಗ ಬೇರೇ ಆಗ್ತಾರೆ ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗ್ತಿದ್ದಂತೆ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ಈ ಸುದ್ದಿ ಸುಳ್ಳಾಗಲಿ ಎಂದು ನಯನತಾರಾ ಅಭಿಮಾನಿಗಳು ಆಶಿಸುತ್ತಿದ್ದಾರೆ.

You might also like
Leave A Reply

Your email address will not be published.