ಚಿನ್ನದ ಪದಕ ವಿಜೇತ ಆಟಗಾರನಿಗೆ ಒಲಿದ ಬಿಜೆಪಿ ಟಿಕೆಟ್ – ಈತನಿಗೆ ಮೋದಿ ಟಿಕೆಟ್‌ ಕೊಟ್ಟದ್ದೇಕೆ? – ಇಲ್ಲಿದೆ ಕಂಪ್ಲೀಟ್‌ ವರದಿ

ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಗಳ ಹೆಸರನ್ನು ಹಂತಹಂತವಾಗಿ ಘೋಷಿಸುತ್ತಿವೆ. ಆಡಳಿತಾರೂಢ ಬಿಜೆಪಿ ಪಕ್ಷ ಮಾರ್ಚ್ 2 ರಂದು ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ವಿವಿಧ ರಾಜ್ಯಗಳ 195 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದು, ಇದರಲ್ಲಿ ಕ್ರೀಡಾ ಲೋಕದ ಯಾರಿಗಾದರೂ ಟಿಕೆಟ್ ಸಿಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಕ್ರೀಡಾಭಿಮಾನಿಗಳ ಮನಸ್ಸು ಕೇಂದ್ರೀಕೃತವಾಗಿತ್ತು. ಅಲ್ಲದೆ ಈ ಮೊದಲು ಹಲವು ಕ್ರಿಕೆಟಿಗರ ಹೆಸರುಗಳು ಚರ್ಚೆಯಾಗುತ್ತಿತ್ತು. ಇದೀಗ ಯಾರನ್ನು ಬಿಜೆಪಿ ಕಣಕ್ಕೆ ಇಳಿಸಿದೆ? ಎಂಬುದನ್ನು ತಿಳಿಯಲು ಈ ಸ್ಟೋರಿ ಓದಿ.

ಸತತ ಮೂರನೇ ಬಾರಿಗೆ ಸರ್ಕಾರ ರಚಿಸುವ ಉದ್ದೇಶದಿಂದ ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಜೆಪಿ ನಡ್ಡಾ ನೇತೃತ್ವದ ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ ಅಳೆದು ತೂಗಿ ಅರ್ಹರಿಗೆ ಟಿಕೆಟ್ ನೀಡುವ ಕೆಲಸ ಮಾಡಿದೆ. ಅಂತಹವರಲ್ಲಿ ಕ್ರೀಡಾ ಲೋಕದ ಸಾಧಕ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ದೇವೇಂದ್ರ ಝಜಾರಿಯಾ ಕೂಡ ಒಬ್ಬರು. ಇವರು ರಾಜಸ್ಥಾನದ ಚುರು ಕ್ಷೇತ್ರದಿಂದ ಟಿಕೆಟ್ ಪಡೆದಿದ್ದಾರೆ.

Gold medal winning player got BJP ticket - Why did Modi give him ticket? - Here is the complete report

ದೇವೇಂದ್ರ ಝಜಾರಿಯಾ ಸಾಧನೆ:

ರಾಜಸ್ಥಾನದ 15 ಸ್ಥಾನಗಳ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಘೋಷಿಸಿದ್ದು, 42 ವರ್ಷದ ದೇವೇಂದ್ರ ಝಜಾರಿಯಾ ಚುರು ಕ್ಷೇತ್ರದ ಟಿಕೆಟ್ ಪಡೆದಿದ್ದಾರೆ. ಝಜಾರಿಯಾ ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದಾರೆ. ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಪ್ರಮುಖ ಅಥ್ಲೀಟ್‌ಗಳಲ್ಲಿ ಒಬ್ಬರಾದ ಝಜಾರಿಯಾ ದೇಶಕ್ಕಾಗಿ ಅನೇಕ ಪದಕಗಳನ್ನು ಗೆದ್ದಿದ್ದಾರೆ.

2004ರಲ್ಲಿ ನಡೆದ ಅಥೆನ್ಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಮೊದಲ ಪದಕ ಜಯಿಸಿದ್ದ ಝಜಾರಿಯಾ, ನಂತರ ಜಾವೆಲಿನ್‌ನಲ್ಲಿ 62.15 ಮೀಟರ್‌ ದೂರ ಎಸೆದು ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದರು. ಈ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಥೆನ್ಸ್ ಮಾತ್ರವಲ್ಲದೆ 2016ರಲ್ಲಿ ನಡೆದ ರಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಮತ್ತೆ ಅದೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದರು. ಇದಲ್ಲದೆ 2020 ರಲ್ಲಿ ನಡೆದ ಟೋಕಿಯೊ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವನ್ನು ಝಜಾರಿಯಾ ಗೆದ್ದಿದ್ದಾರೆ.

You might also like
Leave A Reply

Your email address will not be published.