ಅಣ್ಣ-ತಂಗಿಯ ಜಂಗೀಕುಸ್ತಿ : ಕಾಂಗ್ರೆಸ್ ಸೇರ್ಪಡೆಯಾದ ಸಿಎಂ ಜಗನ್ ಸಹೋದರಿ

ವೈಎಸ್ʼಆರ್ ತೆಲಂಗಾಣದ ಸಂಸ್ಥಾಪಕಿ, ಆಂಧ್ರಪ್ರದೇಶದ ಜನಪ್ರಿಯ ಮುಖ್ಯಮಂತ್ರಿಗಳಾಗಿದ್ದ ವೈ.ಎಸ್. ರಾಜಶೇಖರ ರೆಡ್ಡಿಯವರ ಮಗಳು ಹಾಗೂ ಪ್ರಸ್ತುತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿರುವ ವೈ.ಎಸ್ ಜಗನ್ ಮೋಹನ್ ಸಹೋದರಿ ವೈ.ಎಸ್.ಶರ್ಮಿಳಾ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ 2024ರ ಲೋಕಸಭಾ ಚುಣಾವಣೆಯಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಜಗನ್ ಹಾಗೂ ಶರ್ಮಿಳಾ ನಡುವೆ ಚುನಾವಣೆ ಜಂಗೀಕುಸ್ತಿ ನಡೆಯುವ ಸಂಭವವಿದೆ.

ಇಂದು ದೆಹಲಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಹಾಗೂ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಶರ್ಮಿಳಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ರಾಹುಲ್ ಗಾಂಧಿಯವರು ಪಕ್ಷದ ಶಾಲನ್ನು ಹಾಕುವ ಮೂಲಕ ಶರ್ಮಿಳಾರನ್ನು ಪಕ್ಷಕ್ಕೆ ಬರಮಾಡಿಕೊಂಡರು.

2021ರಲ್ಲಿ ಶರ್ಮಿಳಾ ಅವರು ತೆಲಂಗಾಣದಲ್ಲಿ ವೈಎಸ್.ಆರ್ ಪಕ್ಷವನ್ನು ಸ್ಥಾಪನೆ ಮಾಡಿದ್ದರು. ಶರ್ಮಿಳಾ ಅವರನ್ನು ಒಳಗೊಂಡಂತೆ ಈ ಪಕ್ಷದ ಯಾವುದೇ ಸದಸ್ಯರು ಕಳೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ವಿಜಯ ಸಾಧಿಸಿರಲಿಲ್ಲ.

ಇತ್ತೀಚೆಗಷ್ಟೇ ತೆಲಂಗಾಣ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಶರ್ಮಿಳಾ ಅವರ ವೈಎಸ್.ಆರ್ ಪಕ್ಷ ಶೂನ್ಯ ಫಲಿತಾಂಶ ಸಾಧಿಸಿತ್ತು. 119 ಸಂಖ್ಯೆ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ರೇವಂತ್ ರೆಡ್ಡಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಬರೋಬ್ಬರಿ 64 ಸೀಟುಗಳನ್ನು ಪಡೆಯುವ ಮೂಲಕ ಸರ್ಕಾರ ರಚನೆ ಮಾಡಿತ್ತು. ಇನ್ನುಳಿದಂತೆ ಬಿಆರ್.ಎಸ್ ಪಕ್ಷ 39 ಸೀಟುಗಳಲ್ಲಿ, ಬಿಜೆಪಿ 8 ಸೀಟುಗಳಲ್ಲಿ, ಎಐಎಮ್ʼಐಎಮ್ ಪಕ್ಷ 7 ಸೀಟುಗಳಲ್ಲಿ ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ವಿಜಯ ಸಾಧಿಸಿದ್ದರು.

ತೆಲಂಗಾಣದಲ್ಲಿ ತಮ್ಮ ಪಕ್ಷ ಸಾಧಿಸಿದ ಶೂನ್ಯ ಸಾಧನೆಯ ಬೆನ್ನಲ್ಲೇ, ಆಡಳಿತಾರೂಡ ಕಾಂಗ್ರೆಸ್ ಪಕ್ಷಕ್ಕೆ ಶರ್ಮಿಳಾ ಸೇರ್ಪಡೆಯಾಗಿದ್ದಾರೆ. ಲೋಕಸಭಾ ಚುಣಾವಣೆಯಲ್ಲಿ ತೆ

ys sharmila

ಲಂಗಾಣದಲ್ಲಿ ಶರ್ಮಿಳಾ ಅವರ ಪಕ್ಷ ಸೇರ್ಪಡೆಯು ಕಾಂಗ್ರೆಸ್ ಸಹಾಯಕವಾಗಬಹುದು ಎಂದು ಅಂದಾಜಿಸಲಾಗಿದೆ. ಆಂಧ್ರಪ್ರದೇಶದಲ್ಲಿಯೂ ಸಹಿತ ಸಹೋದರ ಜಗನ್ ವಿರುದ್ಧವಾಗಿ ಸಹೋದರಿ ಶರ್ಮಿಳಾ ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ಕಾಂಗ್ರೆಸ್ ಉದ್ದೇಶಿಸಿದೆ. ಈ ಮೂಲಕ ಆಂಧ್ರಪ್ರದೇಶ ಮತ್ತು ತೆಲಂಗಾಣದ ಲೋಕಸಭಾ ಚುಣಾವಣೆ ಅಣ್ಣ, ತಂಗಿಯ ಜಂಗೀಕುಸ್ತಿಗೆ ಕಾರಣವಾಗಲಿದೆ.

You might also like
Leave A Reply

Your email address will not be published.