ಅಪ್ಪಾ.. ನನ್ನನ್ನು ಕ್ಷಮಿಸಿಬಿಡು – ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಪುತ್ರ

ರಕ್ತದ ಮಡುವಿನಲ್ಲಿ ಒದ್ದಾಡುತ್ತಾ ತಂದೆಗೆ ಕರೆ ಮಾಡಿ ಅಪ್ಪಾ… ನನ್ನನ್ನು ಕ್ಷಮಿಸಿಬಿಡು. ಇನ್ನು ಮುಂದೆ ನಿನ್ನ ಮಗ ತಪ್ಪು ಮಾಡುವುದಿಲ್ಲ ಎಂದು ಹೇಳುತ್ತಾ ಪುತ್ರನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.

ಬೆಂಗಳೂರಿನ ವಿಶು ಉತ್ತಪ್ಪ (19) ಆತ್ಮಹತ್ಯೆಗೆ ಶರಣಾದ ಯುವಕ. ಕೊಡುಗು ಮೂಲದ ತಮ್ಮಯ್ಯ ಎನ್ನುವವರ ಪುತ್ರನಾದ ವಿಶು ಉತ್ತಪ್ಪ, ತಂದೆ ಹೊರಗಡೆ ರೇಷನ್ ತರಲು ಹೋದ ಸಮಯದಲ್ಲಿ ತಂದೆಯ ಗನ್ʼನಿಂದ ಎಡಭಾಗದ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ವಿಶು ಉತ್ತಪ್ಪ (19)

ವಿಶು ಉತ್ತಪ್ಪ ಆರ್.ಆರ್ ಕಾಲೇಜಿನಲ್ಲಿ ಬಿಇ ಪ್ರಥಮ ವರ್ಷದಲ್ಲಿ ಅಧ್ಯಯನ ನಡೆಸುತ್ತಿದ್ದರು ಎನ್ನಲಾಗಿದೆ. ಕೊಡಗು ಮೂಲದ ತಮ್ಮಯ್ಯ ಎಂಬವರು ನೈಸ್ ಸಂಸ್ಥೆಯಲ್ಲಿ ಭದ್ರತಾ ಸಿಬ್ಬಂದಿ ಆಗಿದ್ದು, ಕಳೆದ 15 ವರ್ಷದಿಂದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಭವಾನಿನಗರದಲ್ಲಿ ಕುಟುಂಬ ಸಹಿತ ವಾಸವಿದ್ದರು. ಬುಧವಾರ ರಾತ್ರಿ 9 ಗಂಟೆಗೆ ತಮ್ಮಯ್ಯ ಮರಳಿ ಮನೆಗೆ ಬಂದಾಗ ಪುತ್ರ ವಿಶು ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ವಿಶು ಸಾವನ್ನಪ್ಪಿದ್ದಾರೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಶುವಿನ ಮೊಬೈಲ್ ಫೋನ್, ತಂದೆಯ ಡಬಲ್‌ ಬ್ಯಾರಲ್‌ ಗನ್‌ʼಅನ್ನು ಮಾದನಾಯಕನಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

You might also like
Leave A Reply

Your email address will not be published.