ಕರ್ನಾಟಕ ಲೋಕಸೇವಾ ಆಯೋಗ (KPSC) ವು ಸ್ವೀಕರಿಸಿದ ವಿವಿಧ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿ ಪ್ರಸ್ತಾವನೆ – ಯಾವ ಹಂತದಲ್ಲಿವೆ ಓದಿ

ಕರ್ನಾಟಕ ರಾಜ್ಯ ಸರ್ಕಾರಿ ಹುದ್ದೆಗಳ ಆಕಾಂಕ್ಷಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿರುವವರಿಗೆ ಈ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದ್ದು, ಮಿಸ್ ಮಾಡದೇ ಓದಿ.

ಪಶು ಸಂಗೋಪನೆ ಮತ್ತು ಪಶು ವೈದ್ಯಸೇವಾ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಜಲ ಸಂಪನ್ಮೂಲ ಇಲಾಖೆ, ಅಂತರ್ಜಲ ನಿರ್ದೇಶನಾಲಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಒಟ್ಟು 9 ಇಲಾಖೆ ನೇಮಕ ಪ್ರಸ್ತಾವನೆಗಳಿಗೆ ಮೀಸಲಾತಿ ವರ್ಗೀಕರಣ ಮತ್ತು ಅರ್ಹತೆ ವಿವರಗಳನ್ನು ಸರಿಪಡಿಸಿ ನೀಡುವಂತೆ ಇಲಾಖೆಯನ್ನು ಕೋರಿ ಕೆಪಿಎಸ್‌ಸಿ ಪತ್ರ ಹೊರಡಿಸಿದೆ. ಕೆಲವು ಹುದ್ದೆಗೆ ಕರಡು ಅಧಿಸೂಚನೆ ಸಿದ್ಧಪಡಿಸಿ ಆಯೋಗದ ಅನುಮೋದನೆ ಕೋರಿ ಕಡತಗಳನ್ನು ರವಾನಿಸಲಾಗಿದೆ.

1) ಸಾರಿಗೆ ಇಲಾಖೆ

ಈ ಇಲಾಖೆಯಲ್ಲಿ 76 ಮೋಟಾರು ವಾಹನ ನಿರೀಕ್ಷಕ ಹುದ್ದೆಗಳಿಗೆ ಆಯೋಗದ ವೆಬ್‌ಸೈಟ್‌ನ ಸೆಕ್ಯೂರಿಟಿ ಆಡಿಟ್‌ಗಾಗಿ ವರ್ಕ್‌ ಆರ್ಡರ್‌ ಅನ್ನು ಆಡಳಿತ ಶಾಖೆಯಿಂದ ನೀಡಲಾಗಿದೆ.

Transport Department

2) ಜಲಸಂಪನ್ಮೂಲ ಇಲಾಖೆ:

ಸಿವಿಲ್, ಮೆಕ್ಯಾನಿಕಲ್ ಕಿರಿಯ ಇಂಜಿನಿಯರ್ 300 ಹುದ್ದೆಗಳಿಗೆ ಆಯೋಗದ ಹೊಸ ತಂತ್ರಾಂಶದ ಮೂಲಕ ಪ್ರಸ್ತಾವನೆ ಸಲ್ಲಿಸಲು ಕೋರಲಾಗಿದೆ.

Department of Water Resources

3) ಬಿಬಿಎಂಪಿ:

ಸ್ಟಾಫ್‌ ನರ್ಸ್‌, ಎಇ ಹುದ್ದೆಗಳು, ಪೌರಾಡಳಿತ ನಿರ್ದೇಶನಾಲಯದ ಎಇ, ಕಿರಿಯ ಆರೋಗ್ಯ ನಿರೀಕ್ಷಕರು, ನೀರು ಸರಬರಾಜುದಾರರು, ಸಹಾಯಕ ನೀರು ಸರಬರಾಜುದಾರರು, ಕಿರಿಯ ಇಂಜಿನಿಯರ್ ಹುದ್ದೆಗಳು, ಲೆಕ್ಕಿಗರು, ಕರವಸೂಲಿಗಾರರು, ಮುಖ್ಯಾಧಿಕಾರಿ ಶ್ರೇಣಿ-2, ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು ಹುದ್ದೆಗಳ ನೇಮಕ ಪ್ರಸ್ತಾವನೆಯು ಪರಿಶೀಲನೆಯ ಹಂತದಲ್ಲಿದೆ.

BBMP

4) ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯ:

ಮುಖ್ಯ ವಿದ್ಯುತ್ ಪರಿವೀಕ್ಷಕರ ಕಚೇರಿ, ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ವಿವಿಧ ಹುದ್ದೆಗಳ ನೇಮಕ ಪ್ರಸ್ತಾವನೆಗಳಿಗೆ ಹಲವು ಸ್ಪಷ್ಟನೆಗಳನ್ನು ಕೇಳಲಾಗಿದೆ.ಹಾಗೂ ಶೀಘ್ರಲಿಪಿಗಾರರ ಹುದ್ದೆಗಳಿಗೆ ಹಲವು ಇಲಾಖೆಗಳ ಪ್ರಸ್ತಾವನೆ ಸ್ವೀಕೃತವಾಗುತ್ತಿರುವ ಕಾರಣ, ಒಟ್ಟಿಗೆ ಪರಿಶೀಲನೆ ನಡೆಸಿ ಅಧಿಸೂಚಿಸಲು ಕಾಯಲಾಗುತ್ತಿದೆ.

Directorate of Industry and Commerce

5) ಪೌರಾಡಳಿತ ನಿರ್ದೇಶನಾಲಯ:

ಹಲವು ಪದನಾಮಗಳ ಅಧಿಕ ಹುದ್ದೆಗಳಿದ್ದು, ಪ್ರಸ್ತಾವನೆಗಳು ಸಹ ವಿವಿಧ ಹಂತದಲ್ಲಿವೆ.

Directorate of Municipal Administration

 

You might also like
Leave A Reply

Your email address will not be published.