ನೂತನ ವರ್ಷಕ್ಕೆ ಹೊಸ ನಿಯಮಗಳು – ಯಾವುದದು?

ನೂತನ‌ ವರ್ಷ ಪ್ರಾರಂಭವಾದರೆ ಸಾಕು, ಹೊಸ ಹೊಸ ನಿಯಮಗಳು ಜಾರಿಯಾಗುತ್ತದೆ. ಇನ್ನೂ ಕಳೆದ ವರ್ಷಕ್ಕೆ ಡೆಡ್ ಲೈನ್ ಕೊಟ್ಟ ದಿನಾಂಕವನ್ನು ಮುಂದೂಡಿದವರಿಗೆ ಈ ವರ್ಷ ಭಾರೀ ಬರೆ ಬೀಳಲಿದೆ. ಹಾಗಾದ್ರೆ ಹೊಸ ವರ್ಷದಡಿ ಯಾವ್ಯಾವ ವಿಚಾರಗಳಲ್ಲಿ ಪ್ರಮುಖ ನಿಯಮಗಳ ಬದಲಾವಣೆಯಾಗುತ್ತಿದೆ ಎಂಬುದರ ಕುರಿತು ನಾವಿಲ್ಲಿ ಗಮನಹರಿಸೋಣ!

BankingPublish

1) ಐಟಿಆರ್ ಸಲ್ಲಿಕೆ :- 2022-23ರ ವರ್ಷದ ಐಟಿಆರ್ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನಾಂಕ ಆಗಿತ್ತು. ಈ ದಿವಸದ ಒಳಗೆ ಐಟಿಆರ್ ಸಲ್ಲಿಸದೇ ಇರುವವರ ಮೇಲೆ ಸೆಕ್ಷನ್ 234F ನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಲೇಟ್ ಆಗಿ ಐಟಿಆರ್ ಸಲ್ಲಿಸುವವರು ರೂ. 5 ಸಾವಿರ ದಂಡ ಪಾವತಿಸಬೇಕಾಗುತ್ತದೆ.

2) ಬ್ಯಾಂಕ್ ಲಾಕರ್ ಅಗ್ರಿಮೆಂಟ್ :- ಬ್ಯಾಂಕ್ ಗಳಲ್ಲಿ ಲಾಕರ್ ಹೊಂದಿರುವವರು ಹೊಸ ಅಗ್ರಿಮೆಂಟ್ ಗೆ ಸೈನ್ ಹಾಕಬೇಕು. ಬ್ಯಾಂಕ್ ಲಾಕರ್ ನಿಯಮವನ್ನು ಪರಿಷ್ಕರಿಸಲಾಗಿದೆ. ಈ ಬಗ್ಗೆ ಲಾಕರ್ ಹೊಂದಿರುವ ಗ್ರಾಹಕರಿಗೆ SMS ಮೂಲಕ ವಿಷಯ ತಲುಪಿರುತ್ತದೆ. ಗ್ರಾಹಕರು ಲಾಕರ್ ಅಗ್ರಿಮೆಂಟ್ ಗೆ ಸೈನ್ ಮಾಡಬೇಕು.

3) ಹೊಸ ಸಿಮ್ ಖರೀದಿಗೆ KYC ಕಡ್ಡಾಯ :- ಒಬ್ಬರೇ ವ್ಯಕ್ತಿ ಹೆಚ್ಚು ಸಿಮ್ ಗಳನ್ನು ಖರೀದಿ ಮಾಡಿ, ಮೋಸ ಮಾಡುತ್ತಿರುವ ಕಾರಣ ಇನ್ನು ಮುಂದೆ ಸಿಮ್ ಖರೀದಿ ಮಾಡುವುದಕ್ಕೆ KYC ಮಾಡಿಸುವುದು ಕಡ್ಡಾಯವಾಗಿರುತ್ತದೆ. E-KYC ಮಾಡಿಸುವುದು ಟೆಲಿಕಾಂ ಕಂಪನಿಗಳು ಮಾತ್ರ. ಇಂದಿನಿಂದ ಹೊಸ ಸಿಮ್ ಖರೀದಿ ಮಾಡುವವರು ಈ ನಿಯಮ ಪಾಲಿಸಬೇಕು.

4) ನಾಮಿನಿ ಸೇರ್ಪಡೆ ಕಡ್ಡಾಯ :- ಮುಂದಿನ ದಿನಗಳಲ್ಲಿ ಡಿಮ್ಯಾಟ್ ಅಕೌಂಟ್ ಹೊಂದಿರುವವರು ತಮ್ಮ ಖಾತೆಗೆ ನಾಮಿನಿಯನ್ನು ಕಡ್ಡಾಯಗೊಳಿಸಬೇಕು. ಈ ಒಂದು ಪ್ರಕ್ರಿಯೆಯನ್ನು ಮೂರು ತಿಂಗಳಿಗೆ ವಿಸ್ತರಿಸಲಾಗಿದೆ.

5) ಆಕ್ಟಿವ್ ಇಲ್ಲದ UPI ID ಗಳನ್ನು ಕ್ಲೋಸ್ ಮಾಡಲಾಗುತ್ತದೆ :- ಕಾರ್ಪೊರೇಶನ್ ಆಫ್ ಇಂಡಿಯಾ ಇದೀಗ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಒಂದು ವೇಳೆ ಹೆಚ್ಚು ಕಾಲದಿಂದ ಬಳಸದೇ ಇರುವ ಯುಪಿಐ ಐಡಿಗಳನ್ನು ಕ್ಲೋಸ್ ಮಾಡಲಾಗುತ್ತದೆ.

6) ಪಿಎಮ್ ಉಜ್ವಲಾ ಯೋಜನೆಗೆ ಕೊನೆಯ ದಿನಾಂಕ :- ಪಿಎಮ್ ಉಜ್ವಲಾ ಯೋಜನೆಯ ಮೂಲಕ ಜನರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಕೊಡಲಾಗುತ್ತಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹತ್ತಿರದಲ್ಲಿದ್ದು, ಆಸಕ್ತರು ಬೇಗ ಅರ್ಜಿ ಸಲ್ಲಿಸಿ.

You might also like
Leave A Reply

Your email address will not be published.