BiggBoss Season 10 : ಡ್ರೋನ್‌ ಪ್ರತಾಪ್‌ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಬಿಗ್‌ ಬಾಸ್‌ ಸೀಸನ್‌ 10 ರ (BiggBoss Season 10) ಸ್ಪರ್ಧಿ ಡ್ರೋನ್‌ ಪ್ರತಾಪ್‌ (Drone Pratap) ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಆರ್.ಆರ್‌ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿರುವ ಬಗ್ಗೆ ವರದಿಯಾಗಿದೆ.

ಮೊನ್ನೆಯಷ್ಟೇ, ವಿದ್ಯಾಶಂಕರಾನಂದ ಸ್ವಾಮೀಜಿಗಳು ಶಾಕಿಂಗ್ ಭವಿಷ್ಯ ಕೇಳಿದ ನಂತರ ಪ್ರತಾಪ್‌ ಮಾನಸಿಕವಾಗಿ ಕುಗ್ಗಿದ್ದರು. ಅಲ್ಲದೇ, ಟಾಸ್ಕ್‌ ವಿಚಾರದಲ್ಲಿ ತಮ್ಮನ್ನು ಕಡೆಗಣಿಸಿದ್ದಾರೆಂದು ಪ್ರತಾಪ್ ಬೇಸರಗೊಂಡಿದ್ದಾರೆ. ಈ ಎಲ್ಲಾ ಘಟನೆಗಳಿಂದ ಪ್ರತಾಪ್‌ (Drone Pratap) ಅಸ್ಪಸ್ಥಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರತಾಪ್‌ʼಗೆ ಪುಡ್‌ ಪಾಯ್ಸನ್‌ ಆಗಿದೆಯಾ ಎನ್ನುವ ಪ್ರಶ್ನೆಗಳು ಮೂಡಿವೆ.

ಸ್ವಾಮೀಜಿ ಹೇಳಿದ್ದ ಶಾಕಿಂಗ್‌ ಭವಿಷ್ಯವೇನು?

ನೂತನ ವರ್ಷದ ಪ್ರಯುಕ್ತ ಬಿಗ್‌ ಬಾಸ್‌ (BiggBoss Season 10) ಮನೆಗೆ ಪ್ರವೇಶಿಸಿದ್ದ ವಿದ್ಯಾಶಂಕರನಾಂದ ಸರಸ್ವತಿ ಸ್ವಾಮೀಜಿಗಳು ಪ್ರತಾಪ್‌ ಬದುಕಿನ ಕುರಿತಾಗಿ ಶಾಕಿಂಗ್‌ ಭವಿಷ್ಯ ನುಡಿದಿದ್ದರು. ಪ್ರತಾಪ್‌ ಯಶಸ್ಸು ಕಾಣಬೇಕಾದರ ಕುಟುಂಬದಿಂದ ದೂರವಿರಲೇಬೇಕು. ಕುಟುಂಬಕ್ಕೆ ಹತ್ತಿರವಿದ್ದು ಹೇಸಿಗೆ ಆಗ್ತಿಯೋ? ದೂರವಾಗಿ ದೂಫವಾಗ್ತಿಯೋ ಎನ್ನುವಂತಹ ಮಾತುಗಳನ್ನಾಡಿದ್ದರು. ಈ ಮಾತು ಕೇಳಿದ್ದ ಪ್ರತಾಪ್‌ (Drone Pratap) ಅಲ್ಲಿಯೇ ಬಿಕ್ಕಿ ಬಿಕ್ಕಿ ಹತ್ತಿದ್ದರು. ಅಲ್ಲದೇ, ಈ ಭವಿಷ್ಯದಿಂದಾಗಿ ಮಾನಸಿಕವಾಗಿ ಚಿಂತಿತರಾಗಿರುವಂತೆ ಕಾಣಿಸುತ್ತಿದ್ದರು.

ಇದನ್ನೂ ಓದಿ : BBK Season 10 : ಹತ್ತಿರವಿದ್ದು ಹೇಸಿಗೆ ಆಗ್ತಿಯಾ? ಭವಿಷ್ಯ ಕೇಳಿ ದಂಗಾದ ಡ್ರೋನ್ ಪ್ರತಾಪ್

ಪ್ರತಾಪ್‌ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಬಿಗ್‌ ಬಾಸ್‌ (BiggBoss Season 10) ಮನೆ ಖಚಿತಪಡಿಸಿದೆಯಾದರೂ, ಯಾವ ಕಾರಣಕ್ಕೆ ಅವರಿಗೆ ಅಸ್ವಸ್ಥತೆಯುಂಟಾಗಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

You might also like
Leave A Reply

Your email address will not be published.