ಕೆ.ಎಂ.ಎಫ್ ನಲ್ಲಿ ಕೋಟಿ ಲೀಟರ್ ಹಾಲು ಉತ್ಪಾದನೆ – ಸಾಧನೆಯನ್ನು ಶ್ಲಾಘಿಸಿದ ಸಿಎಂ ಹೇಳಿದ್ದೇನು?

ಕರ್ನಾಟಕ ಹಾಲು ಒಕ್ಕೂಟ (ಕೆ.ಎಂ.ಎಫ್) ವು ಇದೇ ಮೊದಲ ಬಾರಿಗೆ ಒಂದು ಕೋಟಿ ಲೀಟರ್ ಹಾಲು ಸಂಗ್ರಹಿಸಿ ನೂತನ ದಾಖಲೆ ಬರೆದಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 10 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಳವಾಗಿದ್ದು, ಈ ಸಾಧನೆಗೆ ಸಿಎಂ ಸಿದ್ದರಾಮಯ್ಯ ಕೆ.ಎಂ.ಎಫ್ ನ್ನು ಶ್ಲಾಘಿಸಿದ್ದಾರೆ.

ಕೆಎಂಎಫ್ ನ ಈ ಸಾಧನೆಗೆ ನಡೆದ ಸಂಭ್ರಮಾಚರಣೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿ, ಗೋಪೂಜೆ ಸಲ್ಲಿಸಿದರು ಹಾಗೂ ಸಾಧನೆಯ ಹಿಂದಿನ ಶಕ್ತಿಯಾಗಿರುವ ನಾಡಿನ ಹೈನುಗಾರಿಕಾ ರೈತ ಕುಟುಂಬಗಳಿಗೆ ವರ್ಗಕ್ಕೆ ಧನ್ಯವಾದವನ್ನು ಅರ್ಪಿಸಿದರು.

ನಂದಿನಿ ಡೈರಿ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ಕೆ.ಎಂ.ಎಫ್, ಪ್ರತಿದಿನ ರೈತರಿಂದ ಕೋಟಿ ಲೀಟರ್ ಹಾಲು ಸಂಗ್ರಹಿಸುವ ಮೈಲಿಗಲ್ಲನ್ನು ಸಾಧಿಸಿದ್ದು ಅಮೋಘ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇದೇ ವೇಳೆ ವಿಪಕ್ಷಗಳ ಹೇಳಿಕೆಗಳನ್ನು ಟೀಕಿಸಿದ ಸಿದ್ದರಾಮಯ್ಯ, ಕರ್ನಾಟಕ ಸರ್ಕಾರ ಹಾಲಿನ ದರ ಹೆಚ್ಚಿಸಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಬಿಜೆಪಿ ನಾಯಕರು ಈ ವಿಷಯದ ಬಗ್ಗೆ ಸುಳ್ಳುಗಳನ್ನು ಹರಡುತ್ತಿದ್ದಾರೆ. ಏಕೆಂದರೆ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ರಾಜ್ಯದಲ್ಲಿ ಈ ಸಾಧನೆ, ಹೈನುಗಾರಿಕೆಗೆ ಜನತೆ ತೋರುತ್ತಿರುವ ಹೆಚ್ಚಿನ ಒಲವಿಗೆ ಕೈಗನ್ನಡಿಯಾಗಿದ್ದು, ಇನ್ನಷ್ಟು ಹೆಚ್ಚಿನ ಮಟ್ಟದಲ್ಲಿ ಹೈನುಗಾರಿಕಾ ಕೃಷಿ ಮಾಡುವಂತಾಗಲಿ ಹಾಗೂ ಸರ್ಕಾರ ಈ ಬಗ್ಗೆ ಹೆಚ್ಚಿನ ಬೆಂಬಲ ನೀಡಲಿ ಎನ್ನುವುದೇ ಹಲವರ ಆಶಯ.

You might also like
Leave A Reply

Your email address will not be published.