ರಾಜ್ಯದಲ್ಲಿ ಮುಗಿಯದ ಹಿಂದೂಗಳ ಮೇಲಿನ ದೌರ್ಜನ್ಯ – ಶಿವಮೊಗ್ಗದಲ್ಲಿ ಅನ್ಯಕೋಮಿನ ಅಪ್ರಾಪ್ತ ಯುವಕ ಮಾಡಿದ್ದೇನು?

ರಾಜ್ಯದಲ್ಲಿ ಈಗಾಗಲೇ ಸಿದ್ದರಾಮಯ್ಯ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಒಂದಿಲ್ಲೊಂದು ಕಾರಣಕ್ಕೆ ಹಿಂದೂಗಳ ಮೇಲೆ ದೌರ್ಜನ್ಯ ಜಾಸ್ತಿಯಾಗುತ್ತಲೇ ಇದೆ. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ, ಹನುಮಾನ್ ಚಾಲೀಸಾ ಹಾಕಿದ್ದಕ್ಕಾಗಿ ಬೇಕರಿಗೆ ನುಗ್ಗಿ ಹಲ್ಲೆ, ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಹೀಗೆ ಅನ್ಯಕೋಮಿನ ಯುವಕರು ಹಿಂದೂಗಳ ಮೇಲೆ ಅಟ್ಟಹಾಸ ತೋರಿಸುತ್ತಲೇ ಇದ್ದಾರೆ. ಇದೀಗ ಶಿವಮೊಗ್ಗದಲ್ಲಿ ಮತ್ತೊಂದು ಘಟನೆ ಸಂಭವಿಸಿದ್ದು, ಅಪ್ರಾಪ್ತ ಅನ್ಯಕೋಮಿನ ಯುವಕನೊಬ್ಬ 40 ವರ್ಷದ ಹಿಂದೂ ವ್ಯಕ್ತಿಗೆ ಮಟನ್ ಜಾಸ್ತಿ ಹಾಕು ಅಂತ ಕೇಳಿದ್ದಕ್ಕೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.

ಶಿವಮೊಗ್ಗದ ಗಾಡಿಕೊಪ್ಪದ ಸಮೀಪದ ಮಟನ್ ಅಂಗಡಿಯಲ್ಲಿ, 40 ವರ್ಷದ ಮಲ್ಲೇಶ್ ಎಂಬ ವ್ಯಕ್ತಿ ತನಗೆ ಮಟನ್ ಹೆಚ್ಚಿಗೆ ಹಾಕುವಂತೆ ಸಹಜವಾಗಿ ಅಂಗಡಿಯಲ್ಲಿದ್ದ ಅಪ್ರಾಪ್ತ ವಯಸ್ಕ ಹುಡುಗನಲ್ಲಿ ಕೇಳಿದ್ದಾನೆ. ಇಷ್ಟಕ್ಕೇ ಕೆರಳಿದ ಆ ಹುಡುಗ, ಹಿಡಿದ ಮಚ್ಚಿನಿಂದ ಈ 40 ವರ್ಷದ ಹಿರಿಯ ವ್ಯಕ್ತಿಗೆ ಒಮ್ಮೆಗೇ ಅಟ್ಯಾಕ್ ಮಾಡಿದ್ದಾನೆ. ಕತ್ತಿನ ಭಾಗಕ್ಕೆ ಮಚ್ಚೇಟು ಬಿದ್ದು ಅತೀವವಾಗಿ ಗಾಯಗೊಂಡ ಮಲ್ಲೇಶ್’ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Attack on Hindus continues - heathen kid swings sword at Shivmogga

ಮಚ್ಚು ಬೀಸಿದ ಅಪ್ರಾಪ್ತ ಯುವಕನನ್ನು ತುಂಗಾನಗರ ಪೊಲೀಸರು ಕೂಡಲೇ ಬಂಧಿಸಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನ್ಯಕೋಮಿನ ವಯಸ್ಕ ಯುವಕರು ರೌಡಿಸಂ, ಲವ್ ಜಿಹಾದ್ ಹಾಗೂ ಕೊಲೆ-ಸುಲಿಗೆಗಳಲ್ಲಿ ನಿರತರಾಗಿದ್ದು, ಸಿದ್ದು ಸರ್ಕಾರ ಆಡಳಿತಕ್ಕೆ ಬಂದ ಮೇಲೆ ರೌಡಿಸಂ ಜಾಲ ಮತ್ತೆ ಸಕ್ರಿಯವಾಗಿದೆ ಎನ್ನುವ ಟೀಕೆ ಕೇಳಿಬರುತ್ತಿದ್ದು, ಪೊಲೀಸ್ ಇಲಾಖೆ ಸರ್ಕಾರದ ಕೈಗೊಂಬೆಯಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಏನೇ ಇರಲಿ, ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಸಿದ್ದು ಸರ್ಕಾರಕ್ಕೆ ಮುಖಭಂಗ ತರಬೇಕು ಹಾಗೂ ಸರ್ಕಾರ ಪತನವಾಗಬೇಕು ಎಂದು ಬಹುತೇಕ ಮತದಾರರು ಅಭಿಪ್ರಾಯಪಡುತ್ತಿರುವುದಂತೂ ಸತ್ಯ.

You might also like
Leave A Reply

Your email address will not be published.