ತೈವಾನ್‌ನಲ್ಲಿ 7.4 ತೀವ್ರತೆಯ ಭೂಕಂಪ : ಜಪಾನಿನ ಓಕಿನಾವದಲ್ಲಿ ಸುನಾಮಿಯ ಎಚ್ಚರಿಕೆ

ಏಪ್ರಿಲ್ 3 ರಂದು ತೈವಾನ್‌ನ ಪೂರ್ವ ಕರಾವಳಿ ಪ್ರದೇಶದಲ್ಲಿ ರಿಕ್ಟರ್ ಮಾಪಕದ ಪ್ರಕಾರ 7.4 ಅಳತೆಯ ಪ್ರಬಲ ಭೂಕಂಪವು ಅಪ್ಪಳಿಸಿದೆ. ಭೂಕಂಪದ ಕೇಂದ್ರ ಬಿಂದುವಯ ಫೆಸಿಫಿಕ್ ಮಹಾಸಾಗರದ ಹುವಾಲಿಯನ್ ಕೌಂಟಿ ಹಾಲ್‌ನಿಂದ 25 ಕಿ.ಮಿ. ದಕ್ಷಿಣ ಆಗ್ನೇಯಕ್ಕೆ 15.5 ಕಿ.ಮಿ. ಆಳದಲ್ಲಿದೆ ಎಂದು ಭೂಕಂಪ ನಿರ್ವಹಣಾ ಕೇಂದ್ರ ಹೇಳಿದೆ. ಇನ್ನು ಎಕ್ಸ್‌ನಲ್ಲಿ ಅಮೆರಿಕಾದ ಜಿಯೋಲಾಜಿಕಲ್ ಸರ್ವೆ ಪೋಸ್ಟ್ ಮಾಡಿರುವ ಪ್ರಕಾರ (USGS), ಇದೊಂದು ಗಮನಾರ್ಹ ಭೂಕಂಪವಾಗಿದ್ದು ಪ್ರಾಥಮಿಕ ಮಾಹಿತಿಯ ಪ್ರಕಾರ, M 6.5, – 11km North east of hualien city, Taiwan. ಎಂದು ಬರೆದುಕೊಂಡಿದ್ದಾರೆ. ನಂತರ ಸಾಮಾಜಿಕ ಜಾಲತಾಣದ ತುಂಬೆಲ್ಲಾ ಭೂಕಂಪದ ದೃಶ್ಯಗಳೇ ತುಂಬಿದ್ದವು.‌

ಭೂಕಂಪದ ನಂತರ ತೈಪೆ, ತೈಚುಂಗ್ ಮತ್ತು ಕಾಹ್ಸಿಯುಂಗ್ ಪ್ರಾಂತ್ಯದಲ್ಲಿ ಮೆಟ್ರೋಗಳನ್ನು ಸ್ಥಗಿತಗೊಳಿಸಲಾಗಿದ್ದು, ನೈರುತ್ಯ ಜಪಾನ್‌ನ ಮಿಯಾಕೊಜಿಮಾ ಮತ್ತು ಯೆಯೆಮಾ ಪ್ರದೇಶದ ಕರಾವಳಿ ತೀರಗಳು ಹಾಗೂ ಓಕಿನಾವಾ ಪ್ರಿಫೆಕ್ಟರ್‌ನ ಓಕಿನಾವಾ ಮುಖ್ಯದ್ವೀಪಕ್ಕೆ ಸುನಾಮಿ ಎಚ್ಚರಿಕೆಯನ್ನು ಘೋಷಿಸಲಾಗಿದೆ‌. ಈ ಪ್ರದೇಶದ ನಿವಾಸಿಗಳು ತಕ್ಷಣವೇ ಬೇರೆ ಸುರಕ್ಷಿತ ಜಾಗಕ್ಕೆ ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ಒತ್ತಾಯಿಸಿದ್ದಾರೆ.

ಈಶಾನ್ಯದಲ್ಲಿರುವ ಇಲಾನ್ ಕೌಂಟಿ ಮತ್ತು ಉತ್ತರದಲ್ಲಿರುವ ಮಿಯಾಲಿ ಕೌಂಟಿಯಲ್ಲಿ 5+ ತೀವ್ರತೆಯ ಮಟ್ಟ ವರದಿಯಾಗಿದೆ. ಆದರೆ ತೈಪೆ ಸಿಟಿ, ನ್ಯೂ ತೈಪೆ ಸಿಟಿ, ಟಾಯುವನ್ ಸಿಟಿ ಮತ್ತು ಉತ್ತರದ ಹ್ಸಿಂಚು ಕೌಂಟಿ, ತೈಚುಂಗ್ ಸಿಟಿ, ಚಾಂಗ್ವಾ ಕೌಂಟಿಯಲ್ಲಿ 5- ತೈವಾನ್ ಕೌಂಟಿಯ ಕೇಂದ್ರ ಹವಾಮಾನ ಸಂಸ್ಥೆ ಹೇಳಿದೆ.

ಮೂಲಗಳ ಪ್ರಕಾರ, ಜಪಾನಿನ ಸ್ಥಳೀಯ ಸಮಯ ಬೆಳಗ್ಗೆ 9.18 ಕ್ಕೆ ಯೋನಾಗುನಿ ದ್ವೀಪದಲ್ಲಿ 30- ಸೆಂಟಿಮೀಟರ್ ಸುನಾಮಿ ದಾಖಲಾಗಿದೆ. ಸುನಾಮಿಯ ಅಲೆಗಳು 3 ಮೀಟರ್ ಎತ್ತರಕ್ಕೆ ಅಪ್ಪಳಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಇನ್ನು ಜಪಾನಿನ ಮಿಯಾಕೋಜಿಮಾ- ಯಾಯಾಮಾ ಪ್ರದೇಶದಲ್ಲಿ ಬೆಳಿಗ್ಗೆ 9.30 ರ ವೇಳೆಗೆ ಸುನಾಮಿಯನ್ನು ನಿರೀಕ್ಷಿಸಲಾಗಿದ್ದಯ ಇದಕ್ಕೆ ಪ್ರತಿಕ್ರಿಯೆಯಾಗಿ ಜಪಾನ್ ಹವಮಾನ ಸಂಸ್ಥೆಯು ಮಿಯಾಕೊಜಿಮಾ ಮತ್ತುಒಕಿನಾವಾ ದ್ವೀಪಗಳ ನಿವಾಸಿಗಳಿಗೆ ಎಚ್ಚರಿಯನ್ನು ನೀಡಿದೆ.

You might also like
Leave A Reply

Your email address will not be published.