ಎಷ್ಟು ಎಣಿಸಿದರೂ ಖಾಲಿಯಾಗಲಿಲ್ಲ ಹುಂಡಿಯ ಹಣ – ಹುಂಡಿಯಲ್ಲಿ ಏನೇನೆಲ್ಲಾ ಇತ್ತು ಗೊತ್ತಾ?

ಬೆಳಿಗ್ಗೆಯಿಂದ ರಾತ್ರಿವೆರೆಗೂ ನಡೆದ ಹುಂಡಿಗಳ ಎಣಿಕೆ ಕಾರ್ಯದಲ್ಲಿ ಕೋಟಿಗಳಿಗೂ ಹೆಚ್ಚು ಹಣ ಸಂಗ್ರಹವಾಗಿದ್ದು ಚಿನ್ನ, ಬೆಳ್ಳಿ, ವಿದೇಶಿ ನೋಟುಗಳು ಸಹ ಸಿಕ್ಕಿರುವುದು ಭಕ್ತಾದಿಗಳಲ್ಲಿ ಕುತೂಹಲ‌ ಮನೆಮಾಡಿದೆ. ಇದ್ನ ಓದಿದೆ ನಿಮ್ಗೆ ಯಾವುದಪ್ಪ ಈ ದೇವಾಸ್ಥಾನ ಅಂತೀರ!? ಈ ಸ್ಟೋರಿ ಓದಿ.

Male Mahadeshwara Hills Male Mahadeshwara Hills v

ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿ​ಧಿಯಲ್ಲಿ ನಿನ್ನೆ ಬೆಳಗ್ಗೆ ಇಂದ ರಾತ್ರಿವರೆಗೂ ನಡೆದ ಹುಂಡಿಗಳ ಎಣಿಕೆ ಕಾರ್ಯದಲ್ಲಿ ಕೋಟಿ ರೂಪಾಯಿಗೂ ಹೆಚ್ಚು ನಗದು ಹಣ ಸಂಗ್ರಹವಾಗಿದೆ.

ಹುಂಡಿಯಲ್ಲಿ ಸಂಗ್ರಹವಾದ ಒಟ್ಟು ಹಣ ಎಷ್ಟು?

ಭಕ್ತರು ನೀಡಿರುವ ಒಟ್ಟು ಕಾಣಿಕೆ 2,16,34,614 ರೂಪಾಯಿ ನಗದು ಆಗಿದೆ, ಇದರ ಜೊತೆಗೆ 78 ಗ್ರಾಂ ಚಿನ್ನ, 2 ಕೆಜಿ 350 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಜೊತೆಗೆ ವಿದೇಶಿ ನೋಟುಗಳು ಕಂಡುಬಂದಿರುವುದು ವಿಶೇಷನೀಯ.

Hundi count in Male Mahadeshwara Hills: Rs 2.53 crore money Collection

ವಿದೇಶಿ ನೋಟುಗಳು ಲಭ್ಯ:

ಇದರೊಂದಿಗೆ ಮಹದೇಶ್ವರ ಸ್ವಾಮಿಯ ಹಲವು ಭಕ್ತರು ಯುಎಸ್‌ಎ, ಅಪಘಾನಿಸ್ತಾನ್, ನೇಪಾಳ ಹಾಗೂ ಮಲೇಶಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ ನೆಲೆಸಿದ್ದಾರೆ‌. ವರ್ಷಕ್ಕೊಮ್ಮೆ ಬಂದು ಮಾದಪ್ಪನ ದರ್ಶನ ಪಡೆದುಹೋಗುತ್ತಾರೆ. ಹೀಗಾಗಿ ಹುಂಡಿಯಲ್ಲಿ ವಿದೇಶಿ ನೋಟುಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.

ಕಳೆದ ವರ್ಷದ ಆದಾಯ ಎಷ್ಟು!?

ಕಳೆದ ಜನೆವರಿ ತಿಂಗಳಲ್ಲಿ 2,99,00,732 ರೂಪಾಯಿ ಕಾಣಿಕೆ ಸಂಗ್ರಹವಾಗಿತ್ತು. ಆ ಪೈಕಿ 13ಲಕ್ಷ ರೂಪಾಯಿಗೂ ಹೆಚ್ಚು ಹಣ ನಾಣ್ಯಗಳ ರೂಪದಲ್ಲೇ ಕಾಣಿಕೆ ಬಂದಿತ್ತು. 102 ಗ್ರಾಂ ಚಿನ್ನ, 3 ಕೆಜಿ 155 ಗ್ರಾಂ ಬೆಳ್ಳಿ ಕಾಣಿಕೆ ಬಂದಿತ್ತು. 23 ಯುಎಸ್ಎ ಡಾಲರ್, ಕೆನಡಾದ 100 ಡಾಲರ್ ಓಮನ್ ದೇಶದ 4 ರಿಯಾಲ್ ನೋಟುಗಳು ಸಹ ಕಾಣಿಕೆ ಹುಂಡಿಯಲ್ಲಿ ಪತ್ತೆಯಾಗಿದ್ದವು.

You might also like
Leave A Reply

Your email address will not be published.