ಪ್ರಚಾರಕ್ಕಾಗಿ ಸಾವಿನ ನಾಟಕವಾಡಿದ್ರಾ ಪೂನಂ ಪಾಂಡೆ – ಅವರ ಸಾವಿನ ಸುದ್ದಿಯ ಹಿಂದಿರುವ ಸತ್ಯಾಸತ್ಯತೆಗಳೇನು?

ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಬಾಲಿವುಡ್ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ (32 ವರ್ಷ) ಗರ್ಭಕಂಠದ ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಆದರೆ, ಅವರ ಸಾವಿನ ಕುರಿತಾದ ಹತ್ತಾರು ಗೊಂದಲಗಳು ಇದೀಗ ಸೃಷ್ಟಿಯಾಗಿದೆ. ಆ ಗೊಂದಲಗಳೇನು?

ಪೂನಂ ಪಾಂಡೆ ಸಾವಿನ ಕುರಿತಾಗಿ ಅವರ ಮ್ಯಾನೇಜರ್ ಹಾಕಿದ ಪೋಸ್ಟ್ ಒಮ್ಮೆಲೆ ಎಲ್ಲರನ್ನು ಬೆಚ್ಚಿಬೀಳಿಸಿತ್ತು‌. ಅವರ ತಂಡವು ಪಾಂಡೆ ಅವರ ಸ್ವಂತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿತ್ತು. ಇದಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅವರ ಸಾವಿನ ಕುರಿತು ಅನೇಕ ಚರ್ಚೆಗಳು ನಡೆಯುತ್ತಿದ್ದು ಅವರ ಸಾವಿನ ಕುರಿತಾಗಿ ಕೆಲವರು ಆಕೆ ಇನ್ನೂ ಸತ್ತಿಲ್ಲ ಎಂಬುದಾಗಿ ನೇರವಾಗಿ ಹೇಳಿರುವುದು ಗೊಂದಲ ಸೃಷ್ಟಿ ಮಾಡಿದೆ.

Poonam Pandey's fake death for the drama and publicity - What is the truth behind the death news?

ಪ್ರಸ್ತುತ ಪಾಂಡೆ ಅವರ ಸಾವಿನ ಸತ್ಯಾಸತ್ತತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದ್ದು, ಕೆಲವರು ಇದು ಸತ್ಯವೆಂದರೆ, ಹಲವರು ಇದು ಪ್ರಚಾರದ ಸ್ಟಂಟ್ ಎಂದು ಹಣೆಪಟ್ಟಿ ಕಟ್ಟುತ್ತಿದ್ದಾರೆ. ಯಾಕೆಂದರೆ, ಆಕೆಯ ನಿಧನದ ಕುರಿತು ಈತನಕ ಅವಳ ಕುಟುಂಬದವರ ಎಲ್ಲಿಯೂ ಹೇಳಿಕೆ ನೀಡಿಲ್ಲ.

ಪಾಂಡೆ ಡೆಡ್’ಬಾಡಿಯು ಇಲ್ಲ; ಆಕೆ ಕುಟುಂಬವು ನಾಪತ್ತೆ!?

ಪೂನಂ ಪಾಂಡೆ ತಮಗಾದ ಅನಾರೋಗ್ಯದ ಕುರಿತು ಈ ಹಿಂದೆ ಎಲ್ಲಿಯೂ ಹೇಳಿಕೊಂಡಿಲ್ಲ. ಅಲ್ಲದೇ, ಕಳೆದ ಮೂರು ದಿನಗಳ ಹಿಂದಷ್ಟೇ ತಮ್ಮ Instagram ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು ಅದರಲ್ಲಿ ಅವರು ಆರೋಗ್ಯವಾಗಿದ್ದಾರೆ. ಇದರ ಹೊರತಾಗಿ, ಅವರ ಸಾವಿನ ಸುದ್ದಿ ಹೊರಬಂದಾಗಿನಿಂದ ಅವರ ಕುಟುಂಬದ ಸದಸ್ಯರು ನಾಪತ್ತೆಯಾಗಿದ್ದಾರೆ. ಆಕೆಯ ಸಾವಿನ ಸುದ್ದಿ ಬೆನ್ನಲ್ಲೇ ಆಕೆಯ ಮೃತದೇಹ ಎಲ್ಲಿದೆ? ಯಾವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ? ಹೀಗೆ ಅನೇಕ ಪ್ರಶ್ನೆಗಳ ಬಗೆಗೆ ಇಲ್ಲಿವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಪಾಂಡೆ ಸತ್ತಿಲ್ಲ ಎಂದು open statement ನೀಡುತ್ತಿರುವವರು ಯಾರು?

1) ಹಿನ್ನೆಲೆ ಗಾಯಕ ರಾಹುಲ್ ವೈದ್ಯ ಅವರು ಪಾಮಡೆ ಅವರ ಸಾವಿನ ಬಗೆಗೆ ಅನುಮಾನ ವ್ಯಕ್ತಪಡಿಸಿದ್ದು, “ಪೂನಂ ಪಾಂಡೆ ಸತ್ತಿಲ್ಲ ಅನ್ನೊದು ನನಗೆ ಮಾತ್ರ ಅನ್ನಿಸುತ್ತಿದೆಯೇ?” ಎಂದು ಟ್ವೀಟ್ ಮಾಡಿದ್ದಾರೆ.

2) ಫ್ಯಾಷನ್ ಮತ್ತು ಚಲನಚಿತ್ರ ವಿಮರ್ಶಕ ಉಮೈರ್ ಸಂಧು ಅವರ ಟ್ವೀಟ್ ಅಂತು ಎಲ್ಲಾರನ್ನು ಅಚ್ಚರಿಗೊಳಿಸಿದೆ.
“ಪೂನಂ ಬದುಕಿದ್ದು, ಆಕೆಯ ಸಾವಿನ ಸುದ್ದಿಯನ್ನು ಆಕೆಯೇ ಆನಂದಿಸುತ್ತಿದ್ದಾರೆ”. ಅಲ್ಲದೇ ಆಕೆಯ ಸೋದರ ಸಂಬಂಧಿ ಜೊತೆ ನಾನು ಮಾತನಾಡಿದ್ದೇನೆ. ಇದು ಪೂನಂ ಅವರ ಪಬ್ಲಿಸಿಟಿ ಸ್ಟಂಟ್. ಆಕೆ ಸತ್ತಿಲ್ಲ” ಎಂದು ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ‌.

You might also like
Leave A Reply

Your email address will not be published.