ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಶಿವ ಸಮ್ಮಾನ್ ಪ್ರಶಸ್ತಿ

ಛತ್ರಪತಿ ಶಿವಾಜಿ ಮಹಾರಾಜ್ ಮನೆತನದ ಪರವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ‘ಶಿವ ಸಮ್ಮಾನ್’ ಪ್ರಶಸ್ತಿಯನ್ನು ಪ್ರಧಾನ ‌ಮಾಡಲಾಗುವುದು. ಮರಾಠ ರಾಜ ಛತ್ರಪತಿ ಶಿವಾಜಿ ಮಹರಾಜರ 13 ನೇ ವಂಶಸ್ಥರಾದ, ಬಿಜೆಪಿ ಸಂಸದ ಛತ್ರಪತಿ ಉದಯನರಾಜೇ ಭೋಂಸ್ಲೆ ಈ ನಿರ್ಧಾರವನ್ನು ಪ್ರಕಟ ಮಾಡಿದ್ದಾರೆ.

ಈ ಪ್ರಶಸ್ತಿಯನ್ನು ಫೆಬ್ರವರಿ 19 ರಂದು ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನದಂದು ಪ್ರಧಾನ ಮಾಡಲಿದ್ದು, ಉದಯನ ರಾಜೇ ಭೋಂಸ್ಲೆಯವರು ಸಮಾರಂಭ ನಡೆಯುವ ಸತಾರಾ ಸೈನಿಕ ಶಾಲೆಯ ಮೈದಾನವನ್ನು ಜಿಲ್ಲಾಡಳಿತದೊಂದಿಗೆ ಹೋಗಿ ಪರಿಶೀಲನೆ ನಡೆಸಿದರು. ‌

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಈ ಪ್ರಶಸ್ತಿ ಸಿಗುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಮಹಾರಾಷ್ಟ್ರದ ಪೂರ್ವ ಮುಖ್ಯಮಂತ್ರಿ ಶ್ರೀ ದೇವೆಂದ್ರ ಫಡ್ನವಿಸ್ ಅವರು, ಇದು ಎಲ್ಲಾ ಶಿವ ಭಕ್ತರಿಗೆ ಹೆಮ್ಮೆಯ ಮತ್ತು ಸಂತೋಷದ ಕ್ಷಣವಾಗಿದೆ. ಭಾರತದ ಶ್ರೇಷ್ಠ ಮತ್ತು ಆದರ್ಶ ಛತ್ರಪತಿ ಶಿವಾಜಿ ಮಾಹಾರಜರ ಹೆಸರಿನಲ್ಲಿ ನೀಡುವ ಈ ಪ್ರಶಸ್ತಿ ಈ ಬಾರಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಿಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಈ ಕುರಿತು ಮಹಾರಾಷ್ಟ್ರದ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬಬಾಂಕುಲೆ ಅವರು ಪ್ರತಿಕ್ರಿಯೆ ನೀಡಿದ್ದು, ಛತ್ರಪತಿ ಶಿವಾಜಿ ಮನೆತನಕ್ಕೆ ಸೇರಿದವರು ಈ ಪ್ರಶಸ್ತಿಯನ್ನು ಪ್ರಧಾನಮಂತ್ರಿ ನರೇಂದ್ರಮೋದಿಯವರಿಗೆ ನೀಡುತ್ತಿರುವುದು ನಿಜಕ್ಕೂ ಸಂತೋಷದ ಸುದ್ದಿಯಾಗಿದೆ‌. ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕಾಗಿ ರಾಜಮನೆತನಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.

ಇನ್ನು ಇತ್ತೀಚಿಗೆ ಮಹಾರಾಷ್ಟ್ರದ ಕಾಲೇಜೊಂದರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್‌ ಖಾನ್ ಅನ್ನು ಸಾಯಿಸುವ ದೃಶ್ಯವನ್ನು ತೋರಿಸಿದ್ದಕ್ಕಾಗಿ ಮುಸ್ಲಿಂ ವಿದ್ಯಾರ್ಥಿಗಳ ಗುಂಪೊಂದು ಕ್ಷಮೆಯಾಚಿಸುವಂತೆ ಪಟ್ಟು ಹಿಡಿದ ಪ್ರಕರಣ ದಾಖಲಾಗಿದ್ದು ಮಾತ್ರ ವಿಷಾದನೀಯವಾಗಿದೆ.

You might also like
Leave A Reply

Your email address will not be published.