ಗೃಹರಕ್ಷಕ ಪೋಸ್ಟ್ ಗೆ ಅರ್ಜಿ ಆಹ್ವಾನ: ಜನವರಿ 5 ಕೊನೆ ದಿನ

ಬೆಂಗಳೂರು ನಗರ ಜಿಲ್ಲೆಯಲ್ಲಿ ಗೃಹ ರಕ್ಷಕದಳ, ಬೆಂಗಳೂರು ಉತ್ತರ ಜಿಲ್ಲೆ ವತಿಯಿಂದ ಖಾಲಿ ಇರುವ ಗೃಹರಕ್ಷಕ ಸ್ಥಾನಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು, ಇದೇ 5 ರಂದು ಅರ್ಜಿ ಪಡೆದುಕೊಳ್ಳಲು ಕೊನೆಯ ದಿನಾಂಕವಾಗಿದೆ ಎಂದು ಬೆಂಗಳೂರು ಉತ್ತರ ಜಿಲ್ಲಾ ಹೋಮ್ ಗಾರ್ಡ್ಸ್ ಕಮಾಂಡೆಂಟ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೀವಿನ್ನೂ ಅರ್ಜಿ ಪಡೆದುಕೊಂಡಿಲ್ವಾ? ತಡ ಬೇಡ, ಇಂದೇ ಅರ್ಜಿ ಸಲ್ಲಿಸಿ!

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು:

  • ಎಸ್.ಎಸ್.ಎಲ್.ಸಿ (SSLC) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, 19 ವರ್ಷ ವಯಸ್ಸು ತುಂಬಿರಬೇಕು.
  • ಉತ್ತಮ ಆರೋಗ್ಯ ಮತ್ತು ದೇಹದಾರ್ಢ್ಯತೆ ಹೊಂದಿರಬೇಕು.
  • ಕಂಪ್ಯೂಟರ್ ಟೈಪಿಂಗ್ (ಕನ್ನಡ ಮತ್ತು ಇಂಗ್ಲೀಷ್) ಗೊತ್ತಿರಬೇಕು.
  • ಡ್ರೈವರ್ಸ್, ಅಡುಗೆ ಭಟ್ಟರು, ಕಾರ್ಪೆಂಟರ್, ಎಲೆಕ್ಟ್ರೀಷಿಯನ್, ಪೈಂಟರ್ ಮತ್ತು ಪ್ಲಂಬರ್ ಹೀಗೆ ಇತ್ಯಾದಿ ಕೌಶಲ್ಯಗಳ ತರಬೇತಿ ಹೊಂದಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು.

Home Guard

ಕಚೇರಿಯಲ್ಲಿ ಉಚಿತವಾಗಿ ಅರ್ಜಿ ವಿತರಣೆ!

ಆಸಕ್ತರು ಅರ್ಜಿ ನಮೂನೆಗಳನ್ನು ಸಮಾದೇಷ್ಟರವರ ಕಚೇರಿ, ಗೃಹರಕ್ಷಕ ದಳ, ಬೆಂಗಳೂರು ಉತ್ತರ ಜಿಲ್ಲೆ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಅಗ್ನಿಶಾಮಕ ಠಾಣೆ ಪಕ್ಕ, ರಾಜಾಜಿನಗರ, ಬೆಂಗಳೂರು-560010ಅರ್ಜಿಗಳನ್ನು ಜನವರಿ 5 ರವರೆಗೆ ಮಧ್ಯಾಹ್ನ 2.30ರಿಂದ 5.00 ಗಂಟೆಯವರೆಗೆ ಉಚಿತವಾಗಿ ವಿತರಿಸಲಾಗುವುದು.ಅರ್ಜಿಯನ್ನು ಪಡೆಯುವ ಸಂದರ್ಭದಲ್ಲಿ ಜನ್ಮ ದಿನಾಂಕವುಳ್ಳ ಶಾಲೆಯ ಒರಿಜಿನಲ್ ಟಿ.ಸಿ ಅಥವಾ ಒರಿಜಿನಲ್ ಅಂಕಪಟ್ಟಿ ಹಾಜರುಪಡಿಸಿ ಅರ್ಜಿ ಪಡೆಯಬಹುದು.

ಸಂಪರ್ಕಿಸಬೇಕಾದ ವಿಳಾಸ:

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಮಾದೇಷ್ಟರವರ ಕಚೇರಿ, ಗೃಹರಕ್ಷಕ ದಳ, ಬೆಂಗಳೂರು ಉತ್ತರ ಜಿಲ್ಲೆ, ವೆಸ್ಟ್ ಆಫ್ ಕಾರ್ಡ್ ರೋಡ್, ರಾಜಾಜಿನಗರ, ಬೆಂಗಳೂರು-560010 ಅಥವಾ ದೂರವಾಣಿ ಸಂಖ್ಯೆ 080-23142542 ಅನ್ನು ಸಂಪರ್ಕಿಸಬಹುದು.

You might also like
Leave A Reply

Your email address will not be published.