ನಾಳೆ ಹೊರಬೀಳಲಿದೆ ಪಂಚರಾಜ್ಯ ಚುನಾವಣಾ ಫಲಿತಾಂಶ: ಬಿಜೆಪಿಗಿದೆಯೇ ಇಷ್ಟೊಂದು ಸವಾಲುಗಳು.

2023ರ ನವೆಂಬರ್‌ ನಲ್ಲಿ ನಡೆದ 5 ರಾಜ್ಯಗಳ ಚುನಾವಣೆಯು ರಾಷ್ಟ್ರ ರಾಜಕಾರಣದ ಮೇಲೆ ಹಾಗೂ 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯ ಮೇಲೆ ಹೇಗೆ ಪರಿಣಾಮ ಬಿರುತ್ತದೆ ಎನ್ನುವುದರ ಬಗ್ಗೆ ವಿಶ್ಲೇಷಣೆ ಮಾಡುವ ಚಿಕ್ಕ ಪ್ರಯತ್ನ. ನಾನು ಪಂಚರಾಜ್ಯ ಚುನಾವಣೆಯಲ್ಲಿ ಒಂದಾದ ಮಿಜೋರಾಂ ಬಗ್ಗೆ ಮಾತಾಡೋಕೆ ಹೋಗೊದಿಲ್ಲ. ಕಾರಣ, ರಾಷ್ಟ್ರದ ರಾಜಕಾರಣದಲ್ಲಿ ಆ ರಾಜ್ಯದ ಪ್ರಭಾವ ಅಷ್ಟೊಂದು ಬೀರೋದಿಲ್ಲ ಎಂಬ ಕಾರಣಕ್ಕೆ ಇನ್ನುಳಿದ 4 ರಾಜ್ಯಗಳಾದ ತೆಲಂಗಾಣ, ಮಧ್ಯಪ್ರದೇಶ, ಚತ್ತೀಸ್ ಘಡ ಹಾಗೂ ರಾಜಸ್ತಾನದ ಬಗ್ಗೆ ಪ್ರಸ್ತುತ ಮೂರು ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ, ಬಿಆರ್‌ಎಸ್‌ ಪಕ್ಷಗಳು ಹೇಗೆ ಚುನಾವಣೆಯಲ್ಲಿ ಗೆಲ್ಲಬಹುದು ಎಂಬುದರ ಬಗ್ಗೆ ಮಾತನಾಡ್ತೀನಿ. ನನ್ನ ಈ ಒಂದು ವಿಶ್ಲೇಷಣೆಯ ಪ್ರಕಾರ, ಈ 4 ರಾಜ್ಯಗಳಲ್ಲಿ ಕಾಂಗ್ರೆಸ್‌ 2 ರಾಜ್ಯಗಳಲ್ಲಿ ಗೆಲ್ಬಹುದು. ಬಿಜೆಪಿ 1 ಬಿಆರ್‌ಎಸ್‌ 1 ರಾಜ್ಯಗಳಲ್ಲಿ ಗೆಲ್ಬಹುದು. ಇದನ್ನು ಇನ್ನೂ ಅಳವಾಗಿ ನೋಡುವುದಾದರೆ, ಮೊದಲಿಗೆ ಈ 5ರಲ್ಲಿ 4 ರಾಜ್ಯಗಳ ಚುನಾವಣೆಯಿಂದ ಮುಂಬರುವ 2024ರ ಚುನಾವಣೆಯ ಮೇಲೆ ಅಂತಹ ಪರಿಣಾಮವೇನು ಬೀರುವುದಿಲ್ಲ ಎಂದು ಹೇಳಬಹುದು. ಏಕೆಂದರೆ, 2018ರ ಚುನಾವಣೆಯನ್ನು ನೋಡುವುದಾದರೆ ಚುನಾವಣೆಗೂ ಮುಂಚೆ ಬಿಜೆಪಿ 3 ಬಿಆರ್‌ಎಸ್‌ 1 ಕಾಂಗ್ರೆಸ್‌ 0. ಆದರೆ, ಚುನಾವಣೆ ನಡೆದ ನಂತರ ಬಿಜೆಪಿ 0, ಬಿಆರ್‌ಎಸ್‌ 1, ಕಾಂಗ್ರೆಸ್‌ 3 ಅಲ್ಲಿಗೆ ಬಿಜೆಪಿಗೆ ಇದು 0-4ರ ಸೋಲು ಮತ್ತು ಕಾಂಗ್ರೆಸ್‌ ಗೆ 3-1ರ ಗೆಲುವು, ಆದರೆ 2019ರ ಲೋಕಸಭಾ ಚುನಾವಣೆಯ ಮೇಲೆ 2018ರ ಚುನಾವಣೆಯ ಫಲಿತಾಂಶ ಅಂತಹದೇನು ಪರಿಣಾಮ ಬೀರಲಿಲ್ಲ. ಆದ್ದರಿಂದ 2023ರ ಚುನಾವಣೆಯ ಫಲಿತಾಂಶವು ಕೇವಲ ಅಲ್ಲಿನ ರಾಜ್ಯಗಳ ಮೇಲೆ ಪರಿಣಾಮ ಬೀರಿದೆ. ಮುಂದೆ ನಡೆಯುವ 2024ರ ಚುನಾವಣೆಯ ಮೇಲೆ ಅಷ್ಟೇನು ಪರಿಣಾಮ ಬೀರುವುದಿಲ್ಲ.

ಈ ಒಂದು ವಿಷಯವನ್ನು ಇನ್ನೊಂದು ಅಯಾಮದಲ್ಲಿ ನೋಡುವುದಾದರೆ, ಅಂದರೆ ಬಿಜೆಪಿ ಮತ್ತು ಕಾಂಗ್ರೆಸ್‌ ನ ದೃಷ್ಠಿಕೋನದಲ್ಲಿ ನೋಡುವುದಾದರೆ,

 

ಮೊದಲಿಗೆ ನಾವು ಬಿಜೆಪಿಯ ದೃಷ್ಠಿಯಲ್ಲಿ ವಿಶ್ಲೇಷಣೆ ಮಾಡೋಣ.

೧. ಬಿಜೆಪಿ 0-4 ರ ಅನುಪಾತದಲ್ಲಿ ಬಂದರೆ, ಅಂದರೆ 4ಕ್ಕೂ ರಾಜ್ಯಗಳಲ್ಲಿ ಬಿಜೆಪಿ ಏನಾದರು ಸೋತರೇ ಅದು ಬಿಜೆಪಿಗೆ ಬಾರಿ ದೊಡ್ಡ ಹಿನ್ನೆಡಯಾಗುವ ಸಾಧ್ಯತೆ ಇದೆ. ಇದರೊಂದಿಗೆ NDA ಒಕ್ಕೂಟದಲ್ಲಿ ಬಿಜೆಪಿಯ ಸ್ಥಾನ ದುರ್ಬಲವಾಗುವ ಸಾಧ್ಯತೆ ಹೆಚ್ಚಿದೆ.

೨. ಇನ್ನೊಂದು ಅನುಪಾತದಲ್ಲಿ ನೋಡುವುದಾದರೆ ಅಂದರೆ ಬಿಜೆಪಿ ಏನಾದರೂ ಒಂದು ರಾಜ್ಯದಲ್ಲಿ ಗೆದ್ದು ಮೂರು ರಾಜ್ಯದಲ್ಲಿ ಸೋತರೆ ಬಿಜೆಪಿಯು ಯಥಾಸ್ಥಿತಿಯಲ್ಲಿಯೇ ಇರುತ್ತದೆ. ಆದರೆ ಬಜೆಪಿ ಇನ್ನೊಬ್ಬರ ಮೇಲೆ ಅವಲಂಬಿತವಾಗುವ ಸಾಧ್ಯತೆ ಹೆಚ್ಚಿದೆ.

೩. ಬಿಜೆಪಿ ಏನಾದರೂ 2:2 ಅನುಪಾತದಲ್ಲಿ ಬಂದರೆ, ಅಂದರೆ 2 ರಾಜ್ಯದಲ್ಲಿ ಗೆದ್ದು 2 ರಾಜ್ಯದಲ್ಲಿ ಸೋತರೆ. ಇಲ್ಲಿ ಬಿಜೆಪಿಯು ತನ್ನ ರಾಜಕೀಯ ವಿರೋಧಿಗಳಿಂದ ಒಂದು ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಇದರಿಂದ ಬಿಜೆಪಿಗೆ 2024ರ ಚುನಾವಣೆಗೂ ಮುನ್ನ ಒಂದು Energy bosster ಸಿಕ್ಕಿದಂತಾಗುತ್ತದೆ.

೪. ಒಂದು ವೇಳೆ ಬಿಜೆಪಿ ಏನಾದರೂ 3:1 ಅನುಪಾತದಲ್ಲಿ ಗೆದ್ದರೆ ಅಂದರೆ 3 ರಾಜ್ಯಗಳಲ್ಲಿ ಗೆದ್ದು ಒಂದು ರಾಜ್ಯದಲ್ಲಿ ಸೋತರೆ. ಇಲ್ಲಿ ಬಿಜೆಪಿಗೆ ದೊಡ್ಡ ಮಟ್ಟದ ಗೆಲುವು ಸಿಕ್ಕಂತಾಗುತ್ತದೆ ಹಾಗೆ ಮುಂಬರುವ 2024ರ ಚುನಾವಣೆಯಲ್ಲಿ ಬಿಜೆಪಿಯು ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಂತಕ್ಕೆ ತಲುಪುತ್ತದೆ.

೫. ಬಿಜೆಪಿ ಏನಾದರೂ 4:0 ಅನುಪಾತದಲ್ಲಿ ಗೆದ್ದರೆ, ಅಂದರೆ 4 ರಾಜ್ಯಗಳಲ್ಲಿ ಬಿಜೆಪಿ ಗೆದ್ದರೆ ಬಿಜೆಪಿಗೆ ವಿರೋಧಿಗಳೇ ಇಲ್ಲದಂತಾಗುತ್ತದೆ. ಅಲ್ಲಿಗೆ ಮಾಧ್ಯಮಗಳೇಲ್ಲ ಸೇರಿ 2024ರ ಚುನಾವಣೆಯಲ್ಲಿ ಬಿಜೆಪಿ ಖಂಡಿತವಾಗಿಯು ಗೆಲುವು ಸಾಧಿಸುತ್ತದೆ ಹಾಗೆ I.N.D.I.A ಒಕ್ಕೂಟದ ಮೈತ್ರಿಯು ಮುರಿದು ಬೀಳಲಿದೆ ಎಂಬ ಸುದ್ದಿಯನ್ನು ಬೀತರಿಸುವ ಕಾರ್ಯದಲ್ಲಿ ತೊಡಗುತ್ತಾರೆ.

 

ಇವಾಗ ಕಾಂಗ್ರೆಸ್‌ ಅವರ ದೃಷ್ಠಿಯಲ್ಲಿ ವಿಶ್ಲೇಷಣೆ ಮಾಡೋದಾದರೆ.

೧. ಕಾಂಗ್ರೆಸ್‌ ಏನಾದರೂ 4 ರಾಜ್ಯಗಳಲ್ಲಿ ಗೆದ್ದರೇ, ರಾಹುಲ್‌ ಗಾಂಧಿಯವರು I.N.D.I.A ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾಗಲಿದ್ದಾರೆ. ಹಾಗೆಯೇ NDA ವಿರುದ್ಧ I.N.D.I.A ಒಕ್ಕೂಟ ಸಂಪೂರ್ಣವಾಗಿ ಹೋರಾಟ ಮಾಡಲಿದೆ. 2024ರ ಚುನಾವಣೆಯು ಬಹಳ ಕುತೂಹಲಕಾರಿಯಾಗಲಿದೆ.

೨. ಒಂದು ವೇಳೆ ಕಾಂಗ್ರೆಸ್‌ ಏನಾದರೂ 3 ರಾಜ್ಯಗಳಲ್ಲಿ ಗೆದ್ದರೇ, ರಾಹುಲ್‌ ಗಾಂಧಿ ಪ್ರಧಾನಿ ಅಭ್ಯರ್ಥಿ ಆಗುತ್ತಾರೆ. I.N.D.I.A ಒಕ್ಕೂಟದಲ್ಲಿ ಕಾಂಗ್ರೆಸ್‌ ಶಕ್ತಿಶಾಲಿಯಾಗಲಿದೆ. ಇದರ ಜೊತೆ ತೆಲಂಗಾಣದಲ್ಲೂ ಕಾಂಗ್ರೆಸ್‌ ಗೆದ್ದರೆ ಅಲ್ಲಿನ ಸ್ಥಳೀಯ ಪಕ್ಷ ಅಂದರೆ ಬಿಆರ್‌ಎಸ್‌ ಪಕ್ಷ ದುರ್ಬಲವಾಗುವ ಸಾಧ್ಯತೆ ಹೆಚ್ಚಿದೆ. ಹಾಗೆ 2024ರಲ್ಲಿ NDA ವಿರುದ್ಧ I.N.D.I.A ಒಕ್ಕೂಟ ನೇರ ಹೋರಾಟ ನಡೆಯಲಿದೆ.

೩. ಕಾಂಗ್ರೆಸ್‌ ಏನಾದರೂ 2ರಾಜ್ಯದಲ್ಲಿ ಗೆದ್ದು 2 ರಾಜ್ಯದಲ್ಲಿ ಸೋತರೆ, ಕಾಂಗ್ರೆಸ್‌ ಯಥಾಸ್ಥಿತಿಯಲ್ಲೇ ಇರುತ್ತದೆ. ಆದರೆ ರಾಷ್ಟ್ರ ರಾಜಕಾರಣದಲ್ಲಿ ಅಂತಹ ಪರಿಣಾಮವೇನು ಬೀರುವುದಿಲ್ಲ. ಜೊತೆಗೆ ಇಲ್ಲಿ ಕಾಂಗ್ರೆಸ್‌ ಗೆ ಸ್ವಲ್ಪ positive energy ಬಂದಾಂಗಾಗುತ್ತದೆ.

೪. ಒಂದು ವೇಳೆ ಕಾಂಗ್ರೆಸ್‌ ಏನಾದರೂ 1 ರಾಜ್ಯದಲ್ಲಿ ಗೆದ್ದು 3ರಲ್ಲಿ ಸೋತರೆ, ರಾಹುಲ್‌ ಗಾಂಧಿಯವರಿಗೆ ಸ್ವಲ್ಪ ಕಷ್ಟ ಆಗುವ ಸಾಧ್ಯತೆ ಇದೆ. ಕಾಂಗ್ರೆಸ್‌ ರಾಹುಲ್ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುದಕ್ಕೆ ಬಹಳಷ್ಟು ಕಷ್ಟ ಪಡಬೇಕಾಗುತ್ತದೆ. I.N.D.I.A ಒಕ್ಕೂಟದಲ್ಲಿ ಕಾಂಗ್ರೆಸ್‌ ನ ನಾಯಕತ್ವ ದುರ್ಬಲವಾಗುವ ಸಾಧ್ಯತೆ ಹೆಚ್ಚಿದೆ.

೫. ಕಾಂಗ್ರೆಸ್‌ ಏನಾದರೂ 4 ರಾಜ್ಯಗಳನ್ನು ಸೋತರೆ, ಕಾಂಗ್ರೆಸ್‌ ಹಿಂದೆಂದೂ ಕಾಣದ ಹೀನಾಯ ಸ್ಥಿತಿಗೆ ತಲುಪುತ್ತದೆ. ರಾಹುಲ್‌ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗುವುದಿರಲ್ಲಿ I.N.D.I.A ಒಕ್ಕೂಟವು 2024ರ ವರೆಗೆ ಉಳಿಯುವುದೇ ಕಷ್ಟವಾಗುತ್ತದೆ. ಇದರೊಂದಿಗೆ ಬಿಆರ್‌ಎಸ್‌ ತೆಲಂಗಾಣದಲ್ಲಿ ತನ್ನ ಪ್ರಾಬಲ್ಯವನ್ನು ಇನ್ನಷ್ಟು ಬಲಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ.

ಈ ಎಲ್ಲಾ ಅಂಶಗಳನ್ನು ಗಮನಿಸಿ ನೋಡಿದಾಗ ನಮಗೆ ಅರ್ಥವಾಗುವುದು ಈ ಚುನಾವಣೆಯ ಫಲಿತಾಂಶದಿಂದ 2024ರ ಲೋಕಸಭಾ ಚುನಾವಣೆಗೆ ಯಾವ ರೀತಿಯ ಪರಿಣಾಮ ಬಿರುವುದಿಲ್ಲವೆಂದು.

You might also like
Leave A Reply

Your email address will not be published.