ಬಿಸಿಲ ಬೇಗೆಗೆ ಕಂಗಾಲಾದ ಜನತೆ – ಈ ಜಿಲ್ಲೆಗಳಲ್ಲಿ ದಾಖಲೆ ಬರೆದ ಉಷ್ಟಾಂಶ

ಉಂಟಾಗಿರುವ ಬರಗಾಲದಿಂದ ಬಿಸಿಲಿನ ತಾಪ ರಾಜ್ಯದ ಜನತೆಗೆ ಬರೆ ಹಾಕುತ್ತಿದೆ. ಮೇ.1 ರಂದು ರಾಜ್ಯದ 25 ಜಿಲ್ಲೆಗಳಲ್ಲಿ ಬರೋಬ್ಬರಿ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ರಾಯಚೂರು, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಅಂದರೆ 46 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬಂದಿದೆ.

ರಾಜ್ಯದಲ್ಲಿ ಈಗಾಗಲೇ ಕಳೆದ ವರ್ಷದ ಮಳೆಯಿಲ್ಲದೇ ಬರಗಾಲ ಎದುರಿಸಿರುವುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರವೇ. ಬರದಿಂದ ಬೇಸತ್ತಿರುವ ರಾಜ್ಯದ ಜನತೆಗೆ ಈ ವರ್ಷದ ಮಳೆಗಾಲ ಆರಂಭಕ್ಕೂ ಮುನ್ನವೇ ನೆತ್ತರನ್ನು ಸುಡುವ ಬೇಸಿಗೆ ಆರಂಭವಾಗಿದೆ.

ನಮ್ಮ ರಾಜ್ಯದ 29 ಜಿಲ್ಲೆಗಳ ಪೈಕಿ 25 ಜಿಲ್ಲೆಗಳಲ್ಲಿಯೂ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಉಳಿದಂತೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಹಾಗೂ ಗುಡ್ಡಗಾಡು ಪ್ರದೇಶವಾದ ಕೊಡಗು ಜಿಲ್ಲೆಯಲ್ಲಿ ಮಾತ್ರ 40 ಡಿಗ್ರಿ ಸೆಲ್ಸಿಯಸ್‌ನಿಂದ ಕಡಿಮೆ ಉಷ್ಣಾಂಶವಿದೆ.

People suffering from heatstroke - a record number heat in these districts

ಇನ್ನು ರಾಜ್ಯದಲ್ಲಿ ಸರ್ವಕಾಲಕ್ಕೂ ಸಮಶೀತೋಷ್ಣವನ್ನು ಹೊಂದಿರುತ್ತಿದ್ದ ಬೆಂಗಳೂರು ನಗರ ಜಿಲ್ಲೆಯ ಹೊರಭಾಗ ಕೆಂಗೇರಿಯಲ್ಲಿ ಶೇ.41 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗುವ ಮೂಲಕ ಕಳೆದ ನಾಲ್ಕು ದಶಕಗಳ ಹಿಂದೆ ದಾಖಲೆಉಯೊಂದನ್ನು ಸರಿಗಟ್ಟಿದಂತಾಗಿದೆ.

ಉಳಿದಂತೆ ಬೆಂಗಳೂರು ನಗರದ ನೆರೆಹೊರೆ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ 40.6, ರಾಮನಗರ 42, ಕೋಲಾರ 43, ಚಿಕ್ಕಬಳ್ಳಾಪುರ 41 ಡಿಡ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿರುವ ವರದಿಯಾಗಿದೆ.

You might also like
Leave A Reply

Your email address will not be published.