ಭಯೋತ್ಪಾದಕ ಪರ ಚಾನೆಲ್‌ ಅಲ್‌ ಜಜೀರಾಗೆ ನಿಷೇಧ ಹೇರಿದ ಇಸ್ರೇಲ್

ಇಸ್ರೇಲ್ ನ ಪ್ರಧಾನ ಮಂತ್ರಿ ಶ್ರೀ ಬೆಂಜಮಿನ್ ನೆತನ್ಯಾಹೂ ಅವರು ಕತಾರ್‌ನಿಂದ ಪಂಡಿಂಗ್ ಆಗುವ ಅಲ್ ಜಜೀರಾ ಚಾನಲ್ ಅನ್ನು ಇಸ್ರೇಲ್‌ನಲ್ಲಿ ಇನ್ನು ಮುಂದೆ ಪ್ರಸಾರ ಆಗದಂತೆ ಮಾಡಲು ಹೊಸದಾಗಿ ಕಾನೂನನ್ನು ಪಾಸ್ ಮಾಡಲಾಗಿದೆ. ತಮ್ಮ ಎಕ್ಸ್ ಖಾತೆಯಲ್ಲಿ ಹಿಬ್ರೂ ಭಾಷೆಯಲ್ಲಿ ಪೋಸ್ಟ್ ಮಾಡಿರುವ ಇಸ್ರೇಲ್‌ ಪ್ರಧಾನಿ ನೆತನ್ಯಾಹು ಅವರು, ‘ಅಲ್ ಜಜೀರಾ ಇಸ್ರೇಲ್‌ನ ಭದ್ರತೆಗೆ ಹಾನಿಯುಂಟುಮಾಡಿದೆ. ಅಕ್ಟೋಬರ್ 7 ರಿಂದ ಪ್ಯಾಲೆಸ್ಟೈನ್ ನಮ್ಮ ಮೇಲೆ ನಡೆಸಿದ ಹತ್ಯಾಕಾಂಡದ ಪರವಾಗಿ ಕೈಜೋಡಿಸಿತ್ತು. ಹಾಗೂ ಇಸ್ರೇಲ್‌ನ ಸೈನಿಕರ ವಿರುದ್ಧ ದಾಳಿ ಮಾಡಲು ಪ್ರಚೋದನೆ ನೀಡಿತು. ಈಗ ಹಮಾಸ್‌ನೊಂದಿಗೆ ಸಂಪರ್ಕದಲ್ಲಿರುವ ಎಲ್ಲರನ್ನೂ ಬುಡದಿಂದ ಕಿತ್ತು ಹಾಕುವ ಸಮಯ ಬಂದಿದೆ. ಇದೊಂದು ಭಯೋತ್ಪಾದಕ ಚಾನಲ್ ಆಗಿದ್ದು ಇನ್ನು ಮುಂದೆ ಇಸ್ರೇಲ್‌ನಲ್ಲಿ ಪ್ರಸಾರ ಆಗುವುದಿಲ್ಲ. ಇಸ್ರೇಲ್‌ನಲ್ಲಿ ಪ್ರಸಾರ ಆಗದಂತೆ ತಡೆಯಲು ಹೊಸ ಕಾನೂನು ಜಾರಿ ತಂದಿದ್ದು, ಅದರ ಅನುಸಾರ ಇನ್ನು ಮುಂದೆ ಇಸ್ರೇಲ್‌ನಲ್ಲಿ ಅಲ್ ಜಜೀರಾ ಚಾನೆಲ್ ಅನ್ನು ಪ್ರಸಾರ ಮಾಡಲಾಗುವುದಿಲ್ಲ ಎಂದಿದ್ದಾರೆ.

ಹಮಾಸ್ ಪರವಾಗಿ ವರದಿಗಳನ್ನು ಪ್ರಸರಣ ಮಾಡಿರುವ ಆರೋಪ ಹೊತ್ತಿರುವ ಅಲ್ ಜಜೀರಾವನ್ನು ಇಸ್ರೇಲ್‌ನಲ್ಲಿ ಪ್ರಸಾರ ಮಾಡದಂತೆ ನಿರ್ಣಯ ಕೈಗೊಂಡಿರುವ ಪ್ರಸಾರ ಮತ್ತು ಸಂವಹನ ಸಚಿವರಾದ ಶ್ಲೋಮೋ ಕರೈ ಅವರ ನಿರ್ಧಾರವನ್ನು ಒಕ್ಕೂಟದ ಇತರ ನಾಯಕರೊಡಗೂಡಿ ಸ್ವಾಗತ ಮಾಡುತ್ತೇನೆ ಎಂದಿದ್ದಾರೆ. ಸಧ್ಯಕ್ಕೆ ಮುಂದಿನ 45 ದಿನಗಳ ಕಾಲ ಇಸ್ರೇಲ್‌ನಲ್ಲಿ ಪ್ರಸಾರವಾಗದಂತೆ ಸ್ಥಗಿತಗೊಳಿಸಲಾಗುತ್ತದೆ. ಮುಂದೆ ಈ ನಿಷೇಧ ನವೀಕರಣಗೊಳ್ಳಬಹುದು. ಈ‌ ನಿಷೇಧವು ಜುಲೈ ಅಂತ್ಯದ ತನಕ ಅಥವಾ ಗಾಜಾದಲ್ಲಿ‌ಹಮಾಸ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆ ಮುಗಿಯುವ ತನಕ ಜಾರಿಯಲ್ಲಿ ಇರಬಹುದು ಎನ್ನಲಾಗುತ್ತಿದೆ.

Israel bans pro-terrorist channel Al Jazeera

ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿದ ಅಲ್ ಜಜೀರಾ, ‘ಇಸ್ರೇಲ್ ತನ್ನ ದಾಳಿಯನ್ನು ಸಮರ್ಥಿಸಿಕೊಳ್ಳಲು ಅಲ್ ಜಜೀರಾವನ್ನು ಶಾಂತಗೊಳಿಸುವ ಒಂದು ಪ್ರಕ್ರಿಯೆ ಇದು ಎಂದು ಕರೆದಿದೆ. ನಿನ್ನೆ ಅಂದರೆ ಏಪ್ರಿಲ್ ಒಂದರಂದು ಇಸ್ರೇಲ್‌ನ ಸೆನೆಟ್ ಈ ಕಾನೂನನ್ನು ಅಂಗೀಕಾರ ಮಾಡಿತು. ವಿದೇಶಿ ಸುದ್ದಿ ಸಂಸ್ಥೆಗಳು ದೇಶದ ಸ್ವಾಯತ್ತತೆಗೆ ಧಕ್ಕೆ ತರುವ ಕೆಲಸ ಮಾಡಿದಲ್ಲಿ ಅಥವಾ ರಾಷ್ಟ್ರೀಯ ಭದ್ರತೆಗೆ ಹಾನಿಯುಂಟು ಮಾಡುವ ಯಾವುದೇ ಕೆಲಸ ಮಾಡಿದಲ್ಲಿ ಅದನ್ನು ನಿಷೇಧಿಸುವ ಅಧಿಕಾರವನ್ನು ಸರ್ಕಾರ ಹೊಂದಿದೆ.

ಈ ಕಾನೂನು ಸೆನೆಟ್‌ನಲ್ಲಿ ಅಂಗೀಕಾರದ ಬಳಿಕ ಮಾತನಾಡಿದ ಸಚಿವ ಶ್ಲೋಮೋ ಕರ್ಹಿ ಯವರು, ಅಲ್ ಜಜೀರಾ ಚಾನೆಲ್ ಅನ್ನು ಶೀಘ್ರದಲ್ಲೇ ಪೂರ್ತಿಯಾಗಿ ಮುಚ್ಚಲಾಗುವುದು. ಇಸ್ರೇಲ್‌ʼನಲ್ಲಿ ಇದ್ದುಕೊಂಡು ಹಮಾಸ್‌ಅನ್ನು ಪ್ರತಿಪಾದಿಸುವ ಯಾರೇ ಆಗಲಿ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹೊಂದಿರಲು ಸಾಧ್ಯವಿಲ್ಲ. ಇಸ್ರೇಲ್‌ನ ಭದ್ರತೆ ಹಾಗೂ ಸೈನಿಕರಿಗೆ ಪತ್ರಿಕಾ ಸ್ವಾತಂತ್ರ್ಯದ ಹೆಸರಲ್ಲಿ ಹಾನಿಯುಂಟುಮಾಡಲು ನಾವು ಬಿಡುವುದಿಲ್ಲ ಎಂದಿದ್ದಾರೆ.

ಕಳೆದ ಅಕ್ಟೋಬರ್ 7 ನೇ ತಾರೀಖಿನಂದು ಹಮಾಸ್ ಭಯೋತ್ಪಾದಕರು ಏಕಕಾಲಕ್ಕೆ ಇಸ್ರೇಲ್ ಮೇಲೆ 5,000 ರಾಕೆಟ್‌ಗಳನ್ನು ಉಡಾಯಿಸುವ ಮೂಲಕ ದಾಳಿ ಆರಂಭಿಸಿತು. ಆ ದಾಳಿಯಲ್ಲಿ ವಿದೇಶಿ ಪ್ರಜೆಗಳು, ಮಕ್ಕಳು, ಮಹಿಳೆಯರು ಸೇರಿದಂತೆ ಸುಮಾರು 1,300 ಜನ ಮೃತ ಪಟ್ಟಿದ್ದರು. 200 ಕ್ಕೂ ಹೆಚ್ಚು ಜನರನ್ನು ಅಪಹರಿಸಿ ಗಾಜಾಗೆ ಕರೆದೊಯ್ಯಲಾಗಿತ್ತು. ದಾಳಿಗೆ ಪ್ರತಿಯಾಗಿ ಇಸ್ರೇಲ್ ಕೂಡಾ ಪ್ರತಿದಾಳಿ ಮಾಡಿತು. ಇಂದಿಗೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಬರೋಬ್ಬರಿ 178 ನೇ ದಿನಕ್ಕೆ ಕಾಲಿಟ್ಟಿದೆ.

You might also like
Leave A Reply

Your email address will not be published.