ಅಭ್ಯರ್ಥಿಗಳ ಪ್ರತಿ ಪೈಸೆ ವೆಚ್ಚದ ಮೇಲೂ ಹದ್ದಿನ ಕಣ್ಣು – ಪ್ರತೀ ಖರ್ಚಿಗೂ ರೇಟ್‌ ಫಿಕ್ಸ್‌

ಲೋಕಸಭೆ ಚುನಾವಣೆಯ ಕಾವು ಹತ್ತುತ್ತಿದ್ದಾಗೆ ಅತ್ತ ಚುನಾವಣಾ ಆಯೋಗ ಪೈಸೆ ಪೈಸೆಗೂ ಲೆಕ್ಕಚಾರ ಹಾಕಲು ಆರಂಭಿಸಿದೆ. ನಮ್ ಜನನೋ ಈ ಎಲೆಕ್ಷನ್ ಬಂದ್ರೆ ಸಾಕು ಅಷ್ಟೋ ಇಷ್ಟೋ ಎಷ್ಟೋ ಬರುತ್ತೋ ಅಂತ ಕಾಯೋರೆ ಜಾಸ್ತಿ. ಈ ಮದ್ಯಪಾನ ಸೇವಕರಿಗೆ ಬಾಟಲ್ ಚಿಂತೆಯಾದರೆ, ಮನೆ ಹಣ್ಮಕ್ಳಿಗೆ ಕುಕ್ಕರ್, ಪಾತ್ರೆ, ಒಂದಷ್ಟು ಹಣದ ನಿರೀಕ್ಷೆಯಂತು ಇದ್ದೆ ಇರುತ್ತೆ. ಅದ್ಕು ಕಲ್ಲು ಬಿತ್ತ? ಚುನಾವಣಾ ಆಯೋಗ ಮಾಡಿದ್ದೇನು? ಈ ಸ್ಟೋರಿ ಓದಿ..

ಹೌದು! ಲೋಕಸಭೆ ಚುನಾವಣೆಯ ಅಭ್ಯರ್ಥಿಗಳು ಮಾಡುವ ಪ್ರತಿ ವೆಚ್ಚದ ಮೇಲೆ ಚುನಾವಣೆ ಆಯೋಗ ಇದೀಗ ಹದ್ದಿನ ಕಣ್ಣಿಟ್ಟಿದೆ. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪ್ರತಿ ಪೈಸೆ ಹಣಕ್ಕೂ ಲೆಕ್ಕ ಹಾಕುತ್ತಿರುವ ಆಯೋಗ ರ್ಯಾಲಿ, ಸಭೆಗಳಲ್ಲೂ ಕೂಡ ನಿಗಾ ವಹಿಸಿದೆ.

ಚುನಾವಣೆ ಪ್ರಚಾರಕ್ಕಾಗಿ ಅಭ್ಯರ್ಥಿಗಳ ನೇತೃತ್ವದಲ್ಲಿ ಸಭೆ ರ್ಯಾಲಿ, ಸಮಾವೇಶ ನಡೆಸಲಾಗುತ್ತದೆ. ಈ ಬಗ್ಗೆ ಮೊದಲೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವ ಅಭ್ಯರ್ಥಿಗಳು ಅನುಮತಿ ಪಡೆಯುತ್ತಾರೆ. ಆದರೆ, ಅನುಮತಿ ಪಡೆದಷ್ಟು ಹಣ ವ್ಯಯಿಸಲಾಗಿದೆಯೇ ಎಂಬ ಬಗ್ಗೆ ಆಯೋಗದಿಂದ ಲೆಕ್ಕ ತಾಳೆ ಹಾಕಲಾಗುತ್ತಿದೆ.

ಅಂದರೆ ಪ್ರಚಾರದ ವೇಳೆ ನಡೆಸುವ ಸಮಾವೇಶದಲ್ಲಿ ನೀಡುವ ಚಹಾ, ಉಪಾಹಾರ, ಊಟ, ಅದರಲ್ಲೂ ಸಸ್ಯಾಹಾರಿ ಊಟಕ್ಕಾದರೆ ಇಷ್ಟು, ಮಾಂಸಾಹಾರಿ ಊಟಕ್ಕಾದರೆ ಇಷ್ಚು ಎಂದು ಪೈಸೆ ಪೈಸೆ ಲೆಕ್ಕಾಚಾರ ಹಾಕಲಿದೆಯಂತೆ ಚುನಾವಣೆ ಆಯೋಗ! ಶಾಮಿಯಾನದಿಂದ ಹಿಡಿದು ನೀರಿನ ಬಾಟಲಿವರೆಗಿನ ಲೆಕ್ಕವನ್ನೂ ಅಭ್ಯರ್ಥಿ ವೆಚ್ಚಕ್ಕೆ ಸೇರಿಸಲಾಗುತ್ತದೆ.

Eagle eye on every penny spent by candidates – rate fix for every spend

ಯಾವುದ್ದಕ್ಕೆ ಎಷ್ಟು ಬೆಲೆ?

• ಸಮಾವೇಶಗಳಲ್ಲಿ ಕೊಡುವ ಕಪ್ ಟೀಗೆ 10 ರೂ.
• ಕಾರ್ಯಕರ್ತರು, ಮುಖಂಡರು ಧರಿಸುವ ಬ್ಯಾಡ್ಜ್ಗೆ 17 ರೂ.
• ಜನರಿಗೆ ಉಪಾಹಾರ ವಿತರಿಸಿದರೆ ಪ್ಲೇಟ್ ಇಡ್ಲಿ, ವಡಾಗೆ 50 ರೂ.
• ನೀರು ಹಾಕಲು ಬಳಸುವ ಜಗ್ ಖರೀದಿಸಿದರೆ 200 ರೂ.
• ಬಾಡಿಗೆಗೆ ತಂದಿದ್ದರೆ 10 ರೂ.
• ಶಾಖಾಹಾರಿ ಊಟಕ್ಕೆ 80 ರೂ.
• ಮಾಂಸಾಹಾರಿ ಊಟಕ್ಕೆ 150 ರೂ.
• ಮುಖಂಡರಿಗೆ ನೀಡಲಾಗುವ ಬೊಕ್ಕೆಗೆ 350 ರೂ.

ಶಾಮಿಯಾನದಿಂದ ಹಿಡಿದು ವೇದಿಕೆ ಮೇಲೆ ಅಳವಡಿಸುವ ಬೆಡ್ ಶೀಟ್’ವರೆಗೆ ಪ್ರತಿಯೊಂದು ವಸ್ತುವಿಗೆ ಇಷ್ಟು ಹಣ ಎಂಬ ಲಿಸ್ಟ್ ಅಧಿಕಾರಿಗಳ ಕೈಯಲ್ಲಿದೆ. ಹೀಗಾಗಿ ಎಲ್ಲೂ ಅಭ್ಯರ್ಥಿ ತಪ್ಪು ಲೆಕ್ಕಾಚಾರ ಕೊಟ್ಟು ತಪ್ಪಿಸಿಕೊಳ್ಳುವ ಹಾಗೆಯೇ ಇಲ್ಲ.

ವಿಚಕ್ಷಣ ತಂಡದಿಂದ ಪರಿಶೀಲನೆ:

ರಾಜಕೀಯ ಪಕ್ಷಗಳ ಮುಖಂಡರು, ಅಭ್ಯರ್ಥಿಗಳು ಪ್ರಚಾರ ಸಭೆ ನಡೆಸಲು ಚುನಾವಣಾಧಿಕಾರಿಯಿಂದ ಅನುಮತಿ ಪಡೆಯುತ್ತಾರೆ. ಈ ಸಭೆಗಳಿಗೆ ತೆರಳುವ ವಿಡಿಯೋ ವಿಚಕ್ಷಣ ತಂಡ ವೇದಿಕೆ ಮೇಲೆ ಹಾಗೂ ಎದುರಿರುವ ಪ್ರತಿ ವಸ್ತುವಿನ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತದೆ. ಈ ಮಾಹಿತಿಯನ್ನು ವೆಚ್ಚ ಪರಿಶೀಲನೆ ಅಧಿಕಾರಿಗಳ ತಂಡಕ್ಕೆ ಸಿಡಿ ಹಾಗೂ ದಾಖಲೆಯಲ್ಲಿ ನೀಡುತ್ತದೆ.

ಅಭ್ಯರ್ಥಿಗಳು ಸಭೆಯಲ್ಲಿ ಮಾಡಿದ ವೆಚ್ಚದ ಲಿಸ್ಟ್ ಕೊಡುತ್ತಾರೆ. ಎರಡೂ ವರದಿಗಳನ್ನು ಅಧಿಕಾರಿಗಳು ಪರಿಶೀಲಿಸಿ ಹೆಚ್ಚಿನ ಮೊತ್ತದ ಪಟ್ಟಿಯನ್ನು ವೆಚ್ಚಕ್ಕೆ ಪರಿಗಣಿಸುತ್ತಾರೆ. ಹೀಗಾಗಿ ಹಣ ಖರ್ಚು ಮಾಡುವಾಗ ಅಭ್ಯರ್ಥಿಗಳು ಎಚ್ಚರ ವಹಿಸಲೇಬೇಕು.

ಈ ಬಗ್ಗೆ ಮಾತನಾಡಿರುವ ಬಾಗಲಕೋಟೆ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಕೆ ಎಂ ಜಾನಕಿ, ವಿಡಿಯೋ ವಿಚಕ್ಷಣಾ ತಂಡ, ವೆಚ್ಚ ನಿಗಾ ತಂಡದ ಅಧಿಕಾರಿಗಳು ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾ ವಹಿಸಿದ್ದಾರೆ. ಸಭೆ, ಸಮಾರಂಭಗಳ ಪ್ರತಿ ವಸ್ತುವಿಗೂ ಲೆಕ್ಕ ಇಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

You might also like
Leave A Reply

Your email address will not be published.