ಬೆಂಗಳೂರು-ತುಮಕೂರು ಮೆಟ್ರೋ – ಗುತ್ತಿಗೆ ಕಂಪೆನಿಗಳಿಂದ ಕಾರ್ಯಸಾಧ್ಯತಾ ವರದಿ ಸಲ್ಲಿಕೆ

ಬೆಂಗಳೂರು-ತುಮಕೂರು ಮಾರ್ಗವಾಗಿ ಮೆಟ್ರೋ ತರುವ ಯೋಜನೆಯ ಕುರಿತು ಈಗಾಗಲೇ ಭಾರಿ ಚರ್ಚೆಯಾಗಿದ್ದು, ಸಾರ್ವಜನಿಕರು ಕೂಡ ಇದು ಕನಸೋ, ನನಸೋ? ನನಸಾಗುವುದಾದರೆ ಆದಷ್ಟು ಬೇಗ ನನಸಾಗಲಿ ಎಂದು ತುದಿಗಾಲಲ್ಲಿ ನಿಂತು ಆಲೋಚಿಸುತ್ತಿದ್ದರು. ನಮ್ಮ ಮೆಟ್ರೋ ಸೇರಿದಂತೆ ಸಾರ್ವಜನಿಕರ ಕನಸು ಇದೀಗ ನನಸಾಗುವ ಸಮಯ ಬಂದಿದೆ. ಎರಡು ನಗರಗಳ ನಡುವಿನ ಮೆಟ್ರೋ ಯೋಜನೆ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದ್ದು, 52.41 ಕಿ.ಮೀ. ಮಾರ್ಗದಲ್ಲಿ, 19 ಎತ್ತರದ ನಿಲ್ದಾಣಗಳ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ.

ಮಾದಾವರ (BIEC) ನಿಲ್ದಾಣದಿಂದ ಪ್ರಾರಂಭವಾಗುವ ಮೆಟ್ರೋ ಮಾರ್ಗವು ತುಮಕೂರು ಬಸ್ ನಿಲ್ದಾಣದವರೆಗೆ ವಿಸ್ತರಿಸುವ ಗುರಿ ಹೊಂದಿದೆ. ಬಹು ನಿರೀಕ್ಷಿತ ಈ ಯೋಜನೆಯು ತುಮಕೂರು ಬೆಂಗಳೂರು ನಡುವಿನ ಸಾರಿಗೆ ಸೌಲಭ್ಯವನ್ನು ಮತ್ತಷ್ಟು ಸುಲಭವಾಗಿಸಲಿದೆ. ಈ ಸಂಬಂಧ BMRCL ಗೆ ಹಲವು ಗುತ್ತಿಗೆದಾರ ಕಂಪನಿಗಳಿಂದ ಕಾರ್ಯ ಸಾಧ್ಯತಾ ವರದಿ ಸಲ್ಲಿಕೆ ಮಾಡಿದೆ ಎಂದು ಮೆಟ್ರೋ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌವ್ಹಾಣ್ ತಿಳಿಸಿದ್ದಾರೆ.

Bangalore-Tumkur Metro - Submission of Feasibility Report by Contracting Companies

ಒಟ್ಟಾರೆಯಾಗಿ ಈ ತಿಂಗಳಾಂತ್ಯಕ್ಕೆ ವಿಸ್ತರಿತ ತುಮಕೂರು ಮಾರ್ಗಕ್ಕೆ ಹಲವು ಕಂಪನಿಗಳು ಕಾರ್ಯಸಾಧ್ಯತಾ ವರದಿ ಸಲ್ಲಿಕೆ ಮಾಡಿವೆ. ಈ ವರದಿಯ ಆಧಾರದ ಮೇಲೆ ಬಿಎಂಆರ್’ಸಿಎಲ್‌ ಅಗತ್ಯ ಬದಲಾವಣೆಗಳನ್ನ ಮಾಡಿಕೊಳ್ಳಲಿದ್ದು, ವರದಿಯನ್ನು ಸರ್ಕಾರದ ಮುಂದಿಡಲಿದೆ. ಬಳಿಕ ಸಮಗ್ರ ವರದಿ ಯೋಜನೆಗೂ ಶೀಘ್ರದಲ್ಲೇ ಮೆಟ್ರೋ ಟೆಂಡರ್ ಆಹ್ವಾನ ಮಾಡಲಿದೆ. ಹೀಗಾಗಿ ಸರ್ಕಾರ ಈ ಮಹತ್ವದ ಯೋಜನೆಗೆ ಅನುಮೋದನೆ ನೀಡಿ ಅನುದಾನ ಬಿಡುಗಡೆ ಮಾಡಲಿದೆಯಾ ಎಂದು ಕಾದು ನೋಡಬೇಕಿದೆ.

You might also like
Leave A Reply

Your email address will not be published.