ರಾಮೇಶ್ವರ ಕೆಫೆಯ ಸ್ಫೋಟ ಪ್ರಕರಣ ; ಕೆಫೆಯೇ ಗುರಿಯೇ ಅಥವಾ ಮೆಜಾರಿಟಿ ಹಿಂದೂ ಗ್ರಾಹಕರೇ?

ಬೆಂಗಳೂರಿನ‌ ಬ್ರೂಕ್‌ಫೀಲ್ಡ್ ಹತ್ತಿರ ಇರುವ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ನಿನ್ನೆ ಸ್ಫೋಟಕವೊಂದು ಸಿಡಿದಿದ್ದು ಕೆಲ ಕಾಲ ಆ ಪ್ರದೇಶದಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿತು. ಸ್ಪೋಟಕ್ಕೆ ಕಡಿಮೆ ತೀವ್ರತೆ ಉಂಟು ಮಾಡುವ ಸುಧಾರಿತ ಸ್ಫೋಟ ಸಾಧನ (IED) ಬಳಸಿರುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಖಚಿತ ಪಡಿಸಿದ್ದಾರೆ. ಜನನಿಬಿಡ ಈ ಕೆಫೆಯು ಎಂದಿನಂತೆಯೆ ಗ್ರಾಹಕರಿಂದ ತುಂಬಿತ್ತು. ಇದೀಗ ರಾಮೇಶ್ವರ ಕೆಫೆಯ ಸಿಸಿಟಿವಿ‌ ಪುಟೇಜ್‌ಗಳು ಲಭ್ಯವಾಗಿದ್ದು ಸ್ಫೋಟದ ನಂತರ ಓರ್ವ ಮಹಿಳೆಯು ನೆಲದ ಮೇಲೆ ಬಿದ್ದು ಕೆಲವು ಗಂಟೆಗಳ ತನಕ ಸಹಾಯಕ್ಕಾಗಿ ಒದ್ದಾಡುತ್ತಿರುವ ದೃಶ್ಯ ಮನಕಲಕುವಂತಿದೆ.

ಸ್ಫೋಟವಾಗಿ‌ ಕೆಲವು ಗಂಟೆಗಳ ತನಕವೂ ಇದನ್ನು ಸಿಲಿಂಡರ್ ಸ್ಫೋಟವೆಂದೇ ಬಿಂಬಿಸಲು ಕೆಲವರು ಪ್ರಯತ್ನಿಸಿದರಾದರೂ ಕೊನೆಗೆ ಇದು ಬಾಂಬ್ ಎಂದೇ ಧೃಢಪಟ್ಟಿದ್ದು ಸಿಲಿಕಾನ್ ಸಿಟಿಗೆ ಉಗ್ರರ ನಂಟು ಇರಬಹುದೇ ಎಂಬ ಶಂಕೆ ಶುರುವಾಗಿದೆ.

ಸ್ಫೋಟದಿಂದಾಗಿ ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಲಿಲ್ಲ ಆದರೆ ಸ್ಫೋಟದ ಪ್ರಭಾವದಿಂದ ಅನೇಕರ ಬಟ್ಟೆಗಳು ಹರಿದವಲ್ಲದೆ ಗಾಯಗಳೂ ಆಗಿವೆ, ಸ್ಥಳವನ್ನು ಪೋಲಿಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ತೆರವುಗೊಳಿಸಿದ ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ‌ಗಾಯಗೊಂಡವರಲ್ಲಿ ಗ್ರಾಹಕರು ಮತ್ತು ಸಿಬ್ಬಂದಿಗಳು ಸೇರಿದ್ದಾರೆ, ಹೋಟೆಲ್ ಉದ್ಯೋಗಿ ಫಾರೂಕ್ (19), ಸೇರಿದಂತೆ ಅಮೆಜಾನ್ ಉದ್ಯೋಗಿ ಮೋಹನ್ (41), ನಾಗಶ್ರೀ (35), ಮೋಮಿ (30), ಬಲರಾಮ್ ಕೃಷ್ಣನ್ (31), ನವ್ಯಾ (25), ಮತ್ತು ಶ್ರೀನಿವಾಸ್ (67) ಸ್ಫೋಟದಲ್ಲಿ ಗಾಯಗೊಂಡಿಗಿದ್ದಾರೆ.‌

ಗ್ರಾಹಕರ ಸೋಗಿನಲ್ಲಿ ಬಂದ ವ್ಯಕ್ತಿಯೋರ್ವ ಕೆಫೆಯೊಳಗೆ ಬ್ಯಾಗ್ ಇಟ್ಟು ಹೋಗುತ್ತಿರುವ ದೃಶ್ಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡು ಬಂದಿರುವುದನ್ನು ಗಮನಿಸಬಹುದಾಗಿದೆ.‌ ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದಾಗಿ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರು ಮೈಸೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಬೆಂಗಳೂರು ದಕ್ಷಿಣದ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಅವರು ಕೆಫೆಯ ಮಾಲಿಕರೊಂದಿಗೆ ಮಾತನಾಡಿದ್ದು, ಗ್ರಾಹಕರು ಕೆಫೆಯಲ್ಲಿ ಬಿಟ್ಟುಹೋದ ಬಾಂಬ್‌ನಿಂದ ಸ್ಫೋಟ ಸಂಭವಿಸಿದ್ದು ಹೋಟೆಲ್‌ನಲ್ಲಿ ಯಾವುದೇ ಸಿಲಿಂಡರ್ ಸ್ಫೋಟಗೊಂಡಿದ್ದಲ್ಲ ಎಂದು ಮಾಲಿಕರು ಮಾಹಿತಿ ನೀಡಿದ್ದಾರೆ.‌ ಇದು ಬಾಂಬ್ ಪ್ರಕರಣ ಎಂದು ಸ್ಪಷ್ಟವಾಗಿ ಗೋಚರಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಈ ಹಿಂದೆ ಕೂಡಾ ಐಸಿಸ್ (Islamic State of Iraq and Siriya) ಗೆ ಸಂಬಂಧಪಟ್ಟ ಕೆಲವರನ್ನು, ಕೆಲವು ಮಾಡ್ಯುಲ್‌ಗಳನ್ನು ತಟಸ್ಥಗೊಳಿಸಲಾಗಿದ್ದು ಈ ಹಿಂದೆ ಸಕ್ರಿಯರಾಗಿದ್ದ ಏಜೆಂಟ್‌ಗಳ ಕೆಲವು ಕಾಣದ ಕೈಗಳು ಕಾರ್ಯ‌ನಿರತವಾಗಿರುವ ಶಂಕೆಯನ್ನು ಕೂಡಾ ವ್ಯಕ್ತ ಪಡಿಸಲಾಗಿದೆ.

You might also like
Leave A Reply

Your email address will not be published.