ಉಗ್ರ ಸಂಘಟನೆ ಸೇರಲು ತೆರಳಿದ ಕೇರಳದ ಇಸ್ಲಾಂ – ಅಫ್ಘಾನಿಸ್ತಾನದಲ್ಲಿ ಬಂಧನ.

ಇಸ್ಲಾಮಿಕ್ ಸ್ಟೇಟ್ ಆಫ್ ಖೊರಾಸನ್ ಪ್ರಾಂತ್ಯಕ್ಕೆ ಸೇರಲು ತೆರಳುತ್ತಿದ್ದ ಕೇರಳ ಮೂಲದ ಸನೌಲ್ ಇಸ್ಲಾಂ ಎಂಬ ಭಯೋತ್ಪಾದಕನನ್ನು ಆಫ್ಘಾನಿಸ್ತಾನದಲ್ಲಿ ಬಂಧನ ಮಾಡಲಾಗಿದ್ದು ಪ್ರಸ್ತುತ ಕಂದಹಾರ್ ಜೈಲಿನಲ್ಲಿದ್ದಾನೆ. ಅಫ್ಘಾನ್ ಗುಪ್ತಚರ ಸಂಸ್ಥೆಗಳ ತನಿಖೆಯ ನಂತರ ಇಸ್ಲಾಂನನ್ನು ಬಂಧಿಸಲಾಗಿದೆ, ತನಿಖಾಧಿಕಾರಿಗಳ ಪ್ರಕಾರ ಕಜಕಿಸ್ತಾನ್ ಮೂಲಕ ಅಫ್ಘಾನಿಸ್ತಾನವನ್ನು ತಲುಪಿದ ಈತ ಐಎಸ್‌ಕೆಪಿ ಯನ್ನು ಸೇರುವುದು ಆತನ ಉದ್ದೇಶವಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ.

ISKP ಜೊತೆಗಿನ ಸಂಪರ್ಕದ ಕುರಿತು ತಿಳಿದ ನಂತರ ತನಿಖಾ ಅಧಿಕಾರಿಗಳು ಮೇಲಿಂದ ಮೇಲೆ ಪ್ರಶ್ನಿಸಲಾಗಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಅಥವಾ ಕಂದಹಾರಗೆ ಭೇಟಿ ನೀಡಿದ ಉದ್ದೇಶವನ್ನು ವಿವರಿಸಲು ಸನೌಲ್‌ಗೆ ಸಾಧ್ಯವಾಗಲಿಲ್ಲ. ಅಫ್ಘಾನ್ ಮಧ್ಯಂತರ ಸರ್ಕಾರದ ಗುಪ್ತಚರ ಜನರಲ್ ಡೈರೆಕ್ಟರ್ ತನಿಖೆಯನ್ನು ಆರಂಭಿಸಿ ಹೆಚ್ಚಿನ ಮಾಹಿತಿಗಾಗಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ‌. ಇನ್ನು ಮೂಲಗಳ ಪ್ರಕಾರ ಇಸ್ಲಾಂ ಈಗಾಗಲೇ ISKP ಜೊತೆಗಿನ ಸಂಪರ್ಕವನ್ನು ಒಪ್ಪಿಕೊಂಡಿದ್ದು ಭಾರತದ ಅಧಿಕಾರಿಯೋರ್ವರ ಸೂಚನೆವರೆಗೆ ಕೆಲವು ವ್ಯಕ್ತಿಗಳನ್ನು ಭೇಟಿಯಾಗಲು ತಾನು ಕಂದಹಾರ್‌ಗೆ ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ.

Islam from Kerala who left to join a terrorist organization - Arrested in Afghanistan

ಐಸಿಸ್ ಸೇರಿದಂತೆ ಹಲವು ಇಸ್ಲಾಮಿಕ್ ಸ್ಟೇಟ್ ಸಂಘಟನೆಗಳಿಗೆ ಭಯೋತ್ಪಾದಕರನ್ನು ನೇಮಿಸಿಕೊಳ್ಳುವ ಹಾಟ್ ಸ್ಪಾಟ್ ಆಗಿ ಕೇರಳ ಹೊರಹೊಮ್ಮಿರುವುದು ತೀರಾ ಹೊಸ ವಿಚಾರವೇನು ಅಲ್ಲ. ಇನ್ನು, ಅಫ್ಘಾನಿಸ್ತಾನದ ಅಧಿಕಾರಿಗಳ ಪ್ರಕಾರ 2014 ರಿಂದ ಇಲ್ಲಿಯವರೆಗೆ ISKPಯೊಂದಿಗೆ ಸಂಪರ್ಕ ಹೊಂದಿರುವ ಸುಮಾರು 11 ಜನ ಭಾರತೀಯರು ಕೊಲ್ಲಲ್ಪಟ್ಟಿದ್ದು ಅದರಲ್ಲಿ ಹೆಚ್ಚಿನವರು ಕೇರಳದ ಮೂಲದವರೇ ಆಗಿದ್ದರು ಎನ್ನುವುದು ವಿಪರ್ಯಾಸ.

You might also like
Leave A Reply

Your email address will not be published.