ವಿದ್ಯುತ್ ಬಿಲ್ ಕಡಿತ, ಗೃಹ ಜ್ಯೋತಿ ಅನುಷ್ಠಾನ – ಗ್ರಾಹಕರಿಗೆ ನಿರಂತರ ಬೆಳಕಿನ ಪ್ರಯೋಜನ

ವಿದ್ಯುತ್ ಗ್ರಾಹಕರಿಗಾಗಿ ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಆ ಯೋಜನೆಗಳಲ್ಲಿ ಗೃಹ ಜ್ಯೋತಿ ಯೋಜನೆ ಪ್ರಮುಖವಾದದ್ದು. ಗ್ರಾಹಕರ ಸ್ಥಾವರಗಳ ವಿದ್ಯುತ್ ಬಳಕೆಯ ಪ್ರಮಾಣವನ್ನಾಧರಿಸಿ, 200 ಯೂನಿಟ್’ಗಿಂತ ಕಡಿಮೆ ವಿದ್ಯುತ್ ಬಳಸುವ ಗ್ರಾಹಕರಿಗೆ ಅವರ ಮಾಸಿಕ ಸರಾಸರಿಯ ಮೇಲೆ 10 ಯೂನಿಟ್’ಗಳಷ್ಟು ಹೆಚ್ಚಿನ ಬಳಕೆಗೂ ಶೂನ್ಯ ಬಿಲ್ ನೀಡಿ ಗ್ರಾಹಕರ ವಿದ್ಯುತ್ ಬಿಲ್ ಅನ್ನು ಸರ್ಕಾರವೇ ಭರಿಸುತ್ತಿದೆ.

ಈ ನಡುವೆ ವಿದ್ಯುತ್ ಬಳಕೆಯ ಮೊತ್ತದ ವಿವರಗಳನ್ನು ಬಿಲ್’ನಲ್ಲಿ ನಮೂದಿಸಲಾಗಿದ್ದು, ನಿಗದಿತ ದರ ಹಾಗೂ ವಿದ್ಯುತ್ ಬಳಕೆಯ ದರದ ಕುರಿತು ಸಂಪೂರ್ಣ ವಿವರಗಳನ್ನು ನಮೂದಿಸಲಾಗಿರುತ್ತದೆ. ಗೃಹ ಜ್ಯೋತಿ ಸಬ್ಸಿಡಿಯ ವಿವರಗಳನ್ನು ಹಾಗೂ ಅರ್ಹ ಯೂನಿಟ್’ಗಳ ವಿವರಗಳನ್ನು ಸವಿವರವಾಗಿ ನಮೂದಿಸಲಾಗುತ್ತಿದ್ದು, ವಿದ್ಯುತ್ ಬಿಲ್’ನ ಹಿಂಭಾಗದಲ್ಲಿ ಆಯಾ ಜಕಾತಿಗನುಗುಣವಾದ ದರಗಳ ವಿವರಗಳನ್ನು ನಮೂದಿಸಲಾಗುತ್ತಿದೆ.

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ವಿದ್ಯುತ್ ದರವನ್ನು ಕಡಿಮೆಗೊಳಿಸಿ ಆದೇಶವನ್ನು ಬಿಡುಗಡೆಗೊಳಿಸಿದ್ದು, ಕಳೆದ 15 ವರ್ಷಗಳಲ್ಲೇ ಮೊದಲ ಬಾರಿಗೆ ಗ್ರಾಹಕರಿಗೆ ಅನುಕೂಲವಾಗುವಂತೆ ವಿದ್ಯುತ್ ದರವನ್ನು ಕಡಿತಗೊಳಿಸಲಾಗಿದೆ. ಚಾ.ವಿ.ಸ.ನಿ.ನಿ ವ್ಯಾಪ್ತಿಯಲ್ಲಿ 100 ಯೂನಿಟ್’ಗಳಿಗಿಂತ ಹೆಚ್ಚು ವಿದ್ಯುತ್ ಬಳಸುವ ಗ್ರಾಹಕರಿಗೆ ಈ ವಿದ್ಯುತ್ ದರದ ಪರಿಷ್ಕರಣಾ ಆದೇಶ ಅನ್ವಯವಾಗಲಿದ್ದು, ಗ್ರಾಹಕರಿಗೆ ವಿದ್ಯುತ್ ಬಿಲ್ ಮೊತ್ತದ ಮೇಲಿನ ಹೊರೆ ತಪ್ಪಲಿದೆ.

Electricity bill reduction, implementation of gruha jyoti - benefit of continuous lighting for consumers

ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆಯ ಜೊತೆಗೆ, ಗ್ರಾಹಕರಿಗೆ ಅನುಕೂಲವಾಗುವಂತೆ ವಿದ್ಯುತ್ ಬಿಲ್ ದರವನ್ನು ಕಡಿತಗೊಳಿಸಿದ್ದು ಹಾಗೂ ಗ್ರಾಹಕರಿಗೆ ಆಕರ್ಷಕ ವಿದ್ಯುತ್ ಬಿಲ್ ರಿಯಾಯಿತಿಯನ್ನು ಘೋಷಿಸಲಾಗಿದ್ದು, ವಿದ್ಯುತ್ ಬಿಲ್ ವೆಚ್ಚದಲ್ಲಿ ಗ್ರಾಹಕರು ಉಳಿತಾಯವನ್ನು ಕಾಣುವಂತಾಗಿದೆ.

You might also like
Leave A Reply

Your email address will not be published.