ಆಮಿಷದ ಮತಾಂತರಕ್ಕೆ ಯತ್ನ – ಆರೋಪಿಗಳ ಬಂಧನ

ಮೊದಲೆಲ್ಲಾ ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಕೇಳಿ ಬರುತ್ತಿದ್ದ ಮತಾಂತರದ ಸುದ್ದಿಗಳು ಈಗ ಹಳ್ಳಿಯ ಕಡೆಯಿಂದಲೂ ಕೇಳುವಂತಾಗಿದ್ದು ದುಃಖದ ಸಂಗತಿಯಾಗಿದೆ. ಬ್ರಿಟಿಷರ ಕಾಲದಲ್ಲಿ ಮತಾಂತರಕ್ಕೆ ಆಮಿಷಗಳನ್ನು ತೋರಿಸಿ ಅಂದರೆ ಬಡವರಿಗೆ ಅಥವಾ ಮಧ್ಯಮ ವರ್ಗದ ಜನರ, ಅವರ ಕಷ್ಟಗಳನ್ನು ಗುರಾಣಿಯಾಗಿ ಬಳಸಿಕೊಂಡು ಹಣದ ವ್ಯಾಮೋಹ ತೋರಿಸಿ ಮತಾಂತರ ಮಾಡಿರುವ ಘಟನೆಗಳು ತುಂಬಾ ಇವೆ. ಈಗ ಈ ಸಾಂಕ್ರಾಮಿಕ ರೋಗವು ಹಳ್ಳಿ ಹಳ್ಳಿಗಳಿಗೂ ಹಬ್ಬಿದ್ದು ಮಾತ್ರ ಯೋಚಿಸಲೇಬೇಕಾದ ವಿಷಯವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮತಾಂತರ ಕಾರ್ಯಕ್ಕೆ ಕೈ ಹಾಕಿ ತಂಡವೊಂದು ಸಿಕ್ಕಿಬಿದ್ದಿದೆ. ಹೌದು, ಸಾರ್ವಜನಿಕರನ್ನು ಒತ್ತಾಯಪೂರ್ವಕವಾಗಿ ಮತಾಂತರ ಮಾಡಲು ಎತ್ನಿಸಿದ ತಂಡವನ್ನು ಸ್ಥಳೀಯರ ಸಹಕಾರದೊಂದಿಗೆ ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿಸಿದ ಆರೋಪಿಗಳ ಹೆಸರು ಹೀಗಿದೆ ಪರಮೇಶ್ವರ ನಾಯ್ಕ, ಸುನೀತಾ ನಾಯ್ಕ, ಧನಂಜಯ ಶಿವಣ್ಣ, ಶಾಲಿನಿರಾಣಿ, ಕುಮಾರ್ ಲಮಾಣಿ, ಮತ್ತು ತಾರಾ ಲಮಾಣಿ.

Attempted conversion by luring - Arrest of accused

ಆದರ್ಶ ನಾಯ್ಕ ಎನ್ನುವ ವ್ಯಕ್ತಿಯ ಪ್ರಕಾರ ಆರೋಪಿಗಳು ಅವರ ಮನೆಗೆ ಪ್ರವೇಶಿಸಿ ಅವರನ್ನು ನೀವು ಯಾರು ಎಂದು ಪ್ರಶ್ನಿಸಲಾಗಿ ಅವರ ಗುಂಪಿನಲ್ಲಿ ಕೆಲಸವನ್ನು ತೋರಿಸಿ ನಿಮಗೆ ಆದಂತೆ ತೊಂದರೆಗಳು ಇವರಿಗೂ ಆಗಿದ್ದವು. ಆದರೆ, ಇವರು ಯೇಸುವನ್ನು ಪ್ರಾರ್ಥಿಸುತ್ತಿದ್ದರಿಂದ ಇವರಿಗೆ ಈಗ ಒಳ್ಳೆಯದಾಗಿದೆ. ನೀವು ಕೂಡ ನಿಮ್ಮ ಹಿಂದೂ ದೇವರ ಫೋಟೋವನ್ನು ಪೂಜಿಸುವುದನ್ನು ಬಿಟ್ಟು ಯೇಸುವನ್ನು ಪೂಜೆ ಮಾಡಲು ಆರಂಭಿಸಿ ನಿಮಗೂ ಒಳ್ಳೆಯದಾಗುತ್ತದೆ. ನಿಮ್ಮ ಮನೆಯಲ್ಲಿರುವ ದೇವರುಗಳ ಫೋಟೋಗಳನ್ನು ತೆಗೆದುಹಾಕಿ ಹಾಗೂ ನಾವು ಪುಸ್ತಕದಿಂದ ಹೇಳುವ ಪ್ರಾರ್ಥನೆಯನ್ನು ಪುನರುಚ್ಛರಿಸಿ ಆ ಮೂಲಕ ಹಿಂದೂ ಧರ್ಮದಿಂದ ಯೇಸುವಿನ ಧರ್ಮಕ್ಕೆ ಬನ್ನಿ ಎಂದು ಹೇಳಿದ್ದಾರೆ ಎಂಬುದಾಗಿ ಆದರ್ಶ ನಾಯ್ಕ ಅವರು ಪೊಲೀಸ್ ಪೊಲೀಸರಿಗೆ ನೀಡಿದ ದೂರಿನಿಂದ ತಿಳಿದಿದೆ ಎಂದು ಅಲ್ಲಿನ‌ ಸುದ್ದಿ ಪತ್ರಿಕೆಯೊಂದು ವರದಿ ಮಾಡಿದೆ.

You might also like
Leave A Reply

Your email address will not be published.