ರಾಮನ ಭಕ್ತರಲ್ಲಿ ಆತಂಕ ಸೃಷ್ಟಿ ಮಾಡಿದೆ ಇ-ಮೇಲ್ – ಏನಿದು ಪ್ರಕರಣ?

550 ವರ್ಷಗಳ ನಂತರ ರಾಮಲಲ್ಲಾನ ಪ್ರತಿಷ್ಠಾಪನೆಯ ನಿಮಿತ್ತ ಅಯೋಧ್ಯೆಯ ರಾಮಮಂದಿರದಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಇಡೀ ದೇಶವೇ ಸಂಭ್ರಮಾಚರಣೆಯ ಅಂಗವಾಗಿ ಕಾತುರದಿಂದ ಕಾಯುತ್ತಿದೆ. ಈ ಮಧ್ಯೆ, ರಾಮಮಂದಿರದಲ್ಲಿ ಬಾಂಬ್ ದಾಳಿ ಮೂಲಕ ಸ್ಪೋಟಿಸುವ ಸಂದೇಶವುಳ್ಳ ಇ-ಮೇಲ್ ಡಿಸೆಂಬರ್ 27ರ ಸಂಜೆ ದೇವೇಂದ್ರ ಅವರ ಮೇಲ್ ಐಡಿಗೆ ಬಂದಿರುವುದು ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.

ಇ-ಮೇಲ್ ಕಳಿಸಿದ ವ್ಯಕ್ತಿ ಯಾರು?
ರಾಮಮಂದಿರದಲ್ಲಿ ಬಾಂಬ್ ದಾಳಿ ಬೆದರಿಕೆ ಸಂದೇಶವನ್ನು ಜುಬೈರ್ ಹುಸೇನ್ ಖಾನ್ ಎಂಬುವವನಾಗಿದ್ದು, ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಜೊತೆ ಸಂಬಂಧವಿದೆ ಎಂದು ತಾನೇ ಖುದ್ದಾಗಿ ಮೇಲ್ ಅಲ್ಲಿ ತಿಳಿಸಿದ್ದಾನೆ.

ಇ-ಮೇಲ್ ಅನ್ನು ಯಾರಿಗೆ ಕಳುಹಿಸಲಾಗಿದೆ?
ಸಂದೇಶದಲ್ಲಿ ಆಕ್ಷೇಪಾರ್ಹ ಭಾಷೆಯನ್ನು ಬಳಸಲಾಗಿದ್ದು, ಭಾರತೀಯ ಕಿಸಾನ್ ಮಂಚ್‌ನ ರಾಷ್ಟ್ರೀಯ ಅಧ್ಯಕ್ಷ ದೇವೇಂದ್ರ ತಿವಾರಿ ಅವರಿಗೆ ಕಳುಹಿಸಲಾಗಿದೆ. ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಎಸ್‌ಟಿಎಫ್ ಎಡಿಜಿ ಅಮಿತಾಬ್ ಯಶ್ ಅವರನ್ನು ಗೋಸೇವಕರು ಎಂದು ಉಲ್ಲೇಖಿಸಲಾಗಿದೆ.

ಏನೆಂದು ಸಂದೇಶ ರವಾನಿಸಿದ್ದ?

ದೇವೇಂದ್ರ ತಿವಾರಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ಈ ಬೆದರಿಕೆಯ ಸಂದೇಶ ಇದೇನು ಮೊದಲ ಬಾರಿ ಅಲ್ಲ, ಈ ಹಿಂದೆಯೂ ಸಾಕಷ್ಟು ಭಾರಿ ಬಂದಿವೆ ಎಂದು ಮಾಹಿತಿ ನೀಡಿದರು.

ಕ್ರಮಕೈಗೊಳ್ಳದ ಪೊಲೀಸರು:
ಹೌದು! ಬೆದರಿಕೆಯ ಕುರಿತು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ದೇವೇಂದ್ರ ತಿವಾರಿ ಆರೋಪಿಸಿದ್ದಾರೆ. ಪೊಲೀಸರು ತನಿಖೆಯ ಭರವಸೆ ಮಾತ್ರ ನೀಡಿದ್ದರು. ಬಳಿಕ ಮೌನ ವಹಿಸಿದ್ದರು ಎಂದು ಅವರು ದೂರಿದ್ದಾರೆ. ಇದೀಗ ರಾಮ ಮಂದಿರ, ಸಿಎಂ ಅವರನ್ನೂ ಬೆದರಿಕೆ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

You might also like
Leave A Reply

Your email address will not be published.