ರಾಮಮಂದಿರದೊಂದಿಗೆ ಫೇಮಸ್ ಆಗ್ತಿದೆ ರಾಮಫಲ ಹಣ್ಣು! ಏನಿದರ ಹಿನ್ನೆಲೆ?

ರಾಮಮಂದಿರದ ರಾಮಲಲ್ಲಾನ ಪ್ರತಿಷ್ಠಾಪನೆಯೊಂದಿಗೆ ಮಾರುಕಟ್ಟೆಯಲ್ಲೂ ಫೇಮಸ್ ಆಗುತ್ತಿದೆ ರಾಮಫಲ ಹಣ್ಣು. ವಿದೇಶಿ ಹಣ್ಣುಗಳ ಮೋಹಕ್ಕೆ ಮಾರು ಹೋಗಿರುವವರು ಇದೀಗ ಮರಳಿ ದೇಶೀಯ ಹಣ್ಣುಗಳತ್ತ ಒಲವು ತೋರಿಸುತ್ತಿರುವುದು ಸಂತಸಕರ!

ಸಾಂಪ್ರದಾಯಿಕವಾಗಿ ರೈತರು ಈ ಹಣ್ಣನ್ನು ವಾಣಿಜ್ಯ ಬೆಳೆಯಾಗಿ ಬೆಳೆಯದಿದ್ದರೂ, ತೋಟಗಳಲ್ಲಿ ಇರುವ ಒಂದೆರಡು ಮರಗಳಲ್ಲಿ ಬಿಡುವ ರಾಶಿಗಟ್ಟಲೆ ಹಣ್ಣನ್ನು ಬುಟ್ಟಿಯಲ್ಲಿ ಕಿತ್ತು ತಂದು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಮಹಾ ನಗರ ಬೆಂಗಳೂರಿನ ಹಣ್ಣಿನಂಗಡಿಗಳಿಗೂ ಕಳಿಸಿಕೊಟ್ಟು ಒಂದಿಷ್ಟು ಖರ್ಚಿಗೆ ಕಾಸು ಮಾಡಿಕೊಳ್ಳುತ್ತಾರೆ.
Ramaphala

ಶ್ರೀರಾಮಚಂದ್ರ ವನವಾಸದಲ್ಲಿ ಗೆಡ್ಡೆ, ಗೆಣಸು ಮತ್ತು ಹಣ್ಣು ಹಂಪಲನ್ನೇ ಆಹಾರವಾಗಿ ಸೇವಿಸಿ ವನವಾಸದ ಧರ್ಮ ಪಾಲಿಸಿದ್ದರು ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಅತಿ ಹೆಚ್ಚು ಚಳಿಗಾಲದಲ್ಲಿ ರಾಮಚಂದ್ರರು ಈ ಹಣ್ಣನ್ನು ಉಪಯೋಗಿಸಿದ ಕಾರಣ ರಾಮ ಇಷ್ಟಪಟ್ಟ ರಾಮಫಲ, ಸೀತೆ ಇಷ್ಟಪಟ್ಟಿದ್ದ ಸೀತಾಫಲ, ಲಕ್ಷ್ಮಣ ಫಲ, ಹನುಮ ಫಲ ಹೀಗೆ ಅವರಿಗೆ ಇಷ್ಟವಾದ ಹಣ್ಣನ್ನು ಅವರ ಹೆಸರಿನಲ್ಲೇ ನಾಮಕರಣವಾದವು ಎಂಬುದು ಐತಿಹಾಸಿಕ ಹಿನ್ನೆಲೆಯಾಗಿದೆ.

ರಾಮಫಲ ಸ್ಪಲ್ಪ ಕಾಯಿಯಾಗಿದ್ದರೂ 2 ದಿನ ಅಕ್ಕಿ, ರಾಗಿಯಲ್ಲಿ ಅಡಗಿಸಿಟ್ಟರೆ ಮಾಗುತ್ತದೆ. ಈ ಸಸ್ಯವನ್ನು ಬೆಳೆಸಿದರೆ ಉತ್ತಮ ಫಸಲು ಕೂಡ ಪಡೆಯಬಹುದು. ಮಹಾರಾಷ್ಟ್ರದ ಔರಂಗಾಬಾದ್ ಸುತ್ತಮುತ್ತ ಇದನ್ನು ಒಳ್ಳೆಯ ಬೆಳೆ ತೆಗೆದು ಮಾರಾಟ ಮಾಡುತ್ತಾರೆ. ಆದರೆ, ನಮ್ಮ ನಾಡಲ್ಲಿ ನವೆಂಬರ್, ಡಿಸೆಂಬರ್, ಜನವರಿ ಈ 3 ತಿಂಗಳು ಮಾತ್ರ ಈ ಹಣ್ಣಿನ ಸೀಜನ್ ಇರುತ್ತೆ ಎಂದು ಬಹುತೇಕರು ತಿಳಿಸಿದ್ದಾರೆ.

Rama

ಪೋಷಕಾಂಶದಲ್ಲೂ ಎತ್ತಿದ ಕೈ:

ಹೌದು! ರಾಮಫಲದಲ್ಲಿರುವ ಪೌಷ್ಠಿಕಾಂಶಗಳನ್ನು ನೀವು ತಿಳಿದರೆ ಮುಂದಿನ ದಿನಗಳಲ್ಲಿ ಈ ಹಣ್ಣು ಎಲ್ಲೆ ಕಂಡರು ಮಿಸ್ ಮಾಡದೆ ತಿಂತೀರ. ಕೇವಲ 100 ಗ್ರಾಂ ಹಣ್ಣಿನಲ್ಲಿರುವ ಪೋಷಕಾಂಶಗಳನ್ನು ಲೆಕ್ಕಹಾಕಿ ಹೇಳುವುದಾದರೆ,

1. ಶಕ್ತಿ – 101 ಕ್ಯಾಲೋರಿ
2. ಕಾರ್ಬೋಹೈಡ್ರೇಟ್ – 25 ಗ್ರಾಂ
3. ಕರಗಬಲ್ಲ ನಾರು – 2.4 ಗ್ರಾಂ
4. ಕೊಬ್ಬು – 0.6 ಗ್ರಾಂ
5. ಪ್ರೋಟಿನ್ ಬಿ – ಶೇ.1.7 ರಷ್ಟು
6. ವಿಟಮಿನ್ ಬಿ – ಶೇ.3-3 ರಷ್ಟು
7. ವಿಟಮಿನ್ ಸಿ – ಶೇ.5-3 ರಷ್ಟು
8. ಮೆಗ್ನೀಷಿಯಂ – 5
9. ಕಬ್ಬಿನಾಂಶ – ಶೇ.5 ರಷ್ಟು
10. ಪೋಸಾರಸ್ – ಶೇ.3 ರಷ್ಟು

You might also like
Leave A Reply

Your email address will not be published.