NICL: 274 ಹುದ್ದೆಗಳಿಗೆ ಅರ್ಜಿ ಆಹ್ವಾನ, ಜನವರಿ 2 ರಿಂದ ಲಿಂಕ್ ಬಿಡುಗಡೆ

ನ್ಯಾಷನಲ್ ಇನ್ಸುರೆನ್ಸ್ ಕಂಪನಿ ಲಿಮಿಟೆಡ್ (ಎನ್ಐಸಿಎಲ್) ಅಡ್ಮಿನಿಸ್ಟ್ರೇಟಿವ್ ಆಫೀಸರ್ ಲಿಮಿಟೆಡ್ ನೇಮಕಾತಿಗೆ ಅಧಿಸೂಚನೆ ಬಿಡುಗಡೆಯಾಗಿದ್ದು, ಒಟ್ಟು 274 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಇದೇ ಜನವರಿ 2ರಂದು ಅರ್ಜಿ ಲಿಂಕ್ ಬಿಡುಗಡೆಯಾಗಲಿದ್ದು, ಹುದ್ದೆಗಳಿಗೆ ಸಂಬಂಧಿಸಿದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ವಿವರ
• ಅಡ್ಮಿನಿಸ್ಟ್ರೇಟಿವ್ ಆಫೀಸರ್ (ಎಒ)-ಸ್ಪೆಷಲಿಸ್ಟ್ : 142
• ಅಡ್ಮಿನಿಸ್ಟ್ರೇಟಿವ್ ಆಫೀಸರ್ (ಎಒ)-ಜೆನೆರಲಿಸ್ಟ್ : 132

ವಿದ್ಯಾರ್ಹತೆ ಮತ್ತು ನೇಮಕಾತಿ
ಅಭ್ಯರ್ಥಿಗಳು ಚಾರ್ಟರ್ಡ್ ಅಕೌಂಟೆಂಟ್ (ಐಸಿಎಐ) / ಕಾಸ್ಟ್ ಅಕೌಂಟಂಟ್ (ಐಸಿಡಬ್ಲ್ಯೂಎ), ಪದವಿ, ಪಿಜಿ ಪಾಸ್ ಮಾಡಿರಬೇಕು. ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡಲಾಗುತ್ತದೆ.

ವಯಸ್ಸಿನ ಅರ್ಹತೆ
• ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
• ಅಭ್ಯರ್ಥಿಗಳು ದಿನಾಂಕ 02-12-1993 ಕ್ಕಿಂತ ಮುಂಚಿತವಾಗಿ ಜನಿಸಿರಬಾರದು.
• 01-12-2002 ರ ನಂತರ ಜನಿಸಿರಬಾರದು.
• ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ
• ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ

ಪ್ರಮುಖ ದಿನಾಂಕಗಳು
• ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 02-01-2024
• ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 22-01-2024
• ಆನ್ಲೈನ್ ಪರೀಕ್ಷೆ ಫೇಸ್-1 ದಿನಾಂಕ : ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.
• ಪ್ರವೇಶ ಪತ್ರ ಬಿಡುಗಡೆ ದಿನಾಂಕ : ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.
• ಫೇಸ್-2 ಆನ್ಲೈನ್ ಪರೀಕ್ಷೆ, ಹಿಂದಿ ಆಫೀಸರ್ ಪರೀಕ್ಷೆ ದಿನಾಂಕ: ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.

ಅಪ್ಲಿಕೇಶನ್ ಶುಲ್ಕ ವಿವರ

ಎಸ್ಸಿ / ಎಸ್ಟಿ / pwd ಅಭ್ಯರ್ಥಿಗಳಿಗೆ ಇಂಟಿಮೇಷನ್ ಶುಲ್ಕ ರೂ.250.
ಉಳಿದವರಿಗೆ : ರೂ.1000.
ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬಹುದು.

ನ್ಯಾಷನಲ್ ಇನ್ಸುರೆನ್ಸ್ ಕಂಪನಿ ಲಿಮಿಟೆಡ್ ಅಧಿಕೃತ ವೆಬ್ಸೈಟ್ ವಿಳಾಸ : https://nationalinsurance.nic.co.in/en

ಎನ್ಐಸಿಎಲ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಗಳ ವೇತನ ಶ್ರೇಣಿ ರೂ.50,925 – 96,765

You might also like
Leave A Reply

Your email address will not be published.