ಮುಖ್ಯಮಂತ್ರಿಗಳ ಒಲವು ಅಲ್ಪಸಂಖ್ಯಾತರಿಗೆ ಮಾತ್ರ ಸೀಮಿತ: ಬಿ.ವೈ. ವಿಜಯೇಂದ್ರ

ಹಿಂದೂಗಳು ಎಂದರೆ ಕೇವಲ ಲಿಂಗಾಯತ, ಬ್ರಾಹ್ಮಣ ಎಂದರ್ಥವಲ್ಲ. ದಲಿತರು, ಹಿಂದುಳಿದವರು ಸೇರಿದಂತೆ ಎಲ್ಲಾ ವರ್ಗದವರು ಹಿಂದೂಗಳೇ. ಮುಖ್ಯಮಂತ್ರಿ ಅವರ ಒಲವು ಅಲ್ಪಸಂಖ್ಯಾತರನ್ನು ಬಿಟ್ಟರೆ ಹಿಂದೂಗಳ ಕಡೆ ಇಲ್ಲ. ಹಿಂದೂಗಳಿಗೆ ಯಾವುದೇ ಆದ್ಯತೆ ನೀಡುತ್ತಿಲ್ಲ ಎಂದು ಬಿವೈ ವಿಜಯೇಂದ್ರ ಅವರು ಅಸಮಾಧಾನ ವ್ಯಕ್ತಪಡಿಸಿದರು.

ದಾವಣಗೆರೆ ಜಿಲ್ಲೆಯ ಜಮಾಪುರ ಗ್ರಾಮದಲ್ಲಿ ಬರ ಅಧ್ಯಯನ ನಡೆಸುವ ವೇಳೆ, ಗ್ರಾಮದ ರೈತರಾದ ಮರಳಪ್ಪ, ಸಿದ್ದಮ್ಮ ದಂಪತಿ ಜಮೀನಿಗೆ ಭೇಟಿ ನೀಡಿದ್ದಾರೆ. ಈ ವೇಳೆ ರೈತ ದಂಪತಿ ಕಣ್ಣೀರು ಹಾಕಿದ್ದು, ಅವರನ್ನು ಸಮಾಧಾನಪಡಿಸಿ ನಂತರ ಮಾಧ್ಯಮದವರನ್ನು ಕುರಿತು ಮಾತನಾಡಿದರು.

ರೈತರ ಜಮೀನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಣ್ಣೀರು ಹಾಕಿ, ಘೋಷಣೆ ಮಾಡಿದ್ರೆ ಸಾಲದು. ಆ ಘೋಷಣೆಗಳನ್ನು ಕಾರ್ಯರೂಪಕ್ಕೆ ತರಬೇಕು. ಮೋದಿಯವರು ಮಾಡಿದಂತೆ ನೇರವಾಗಿ ರೈತರ ಖಾತೆಗೆ ಹಣ ಜಮಾವಣೆ ಮಾಡಬೇಕು ಎಂದು ತಿಳಿಸಿದರು.

ನಾನು ಹೊಸ ವರ್ಷದ ಹಿನ್ನಲೆ ಬರ ಅಧ್ಯಯನಕ್ಕಾಗಿ ಬಂದಿರುವುದೇ ವಿನಃ ಬೂಟಾಟಿಕೆ ಮಾಡಲು ಬಂದಿಲ್ಲ. ಅಲ್ಪಸಂಖ್ಯಾತರಿಗೆ ಹತ್ತು ಸಾವಿರ ಕೋಟಿ ಕೊಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಅವರು ಘೋಷಣೆ ಮಾಡಿದ್ದು, ಹಣದ ಕೊರತೆಯಾದಾಗ ಕೇಂದ್ರದ ಕಡೆ ಕೈ ತೋರಿಸುವುದಿಲ್ಲ ಬದಲಾಗಿ ಬರದ ಬಗ್ಗೆ ಮಾತನಾಡಿದರೆ ಸಾಕು ಕೇಂದ್ರದ ಕಡೆ ಕೈ ತೋರಿಸುತ್ತಾರೆ ಎಂದು ಕಿಡಿಕಾರಿದ್ದಾರೆ.

You might also like
Leave A Reply

Your email address will not be published.