ಇಸ್ಲಾಂಗೆ ಮತಾಂತರ – ಬೆದರಿಕೆ ಪತ್ರ ಬಂದ ಶಾಲೆಗಳೆಷ್ಟು ಗೊತ್ತಾ?

ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿರುವ ಮತಾಂಧರು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಇಲ್ಲವೇ ನೀವೆಲ್ಲರೂ ಸಾಯಲು ಸಿದ್ಧರಾಗಿ ಎಂದು ಹೇಳುವ ಮೂಲಕ ಶಾಲೆಗಳಲ್ಲಿ ಅಧ್ಯಯನ ನಡೆಸುವ ಪುಟ್ಟ ಮಕ್ಕಳನ್ನು ಹತ್ಯೆ ಮಾಡುವ ಬೆದರಿಕೆ ಹಾಕಿದ್ದಾರೆ.

ಬೆಂಗಳೂರಿನ 45 ಕ್ಕೂ ಅಧಿಕ ಶಾಲೆಗಳಿಗೆ ಒಂದೇ ಈ-ಮೇಲ್ʼನಿಂದ ಬೆದರಿಕೆ ಬಂದಿದ್ದು, ಪೋಷಕರನ್ನು ಭಯಭೀತಗೊಳಿಸಿದೆ. ಈ-ಮೇಲ್ ಬಗ್ಗೆ ಈಗಾಗಲೇ ದೂರು ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಯಾವುದೇ ಶಾಲೆಗಳಲ್ಲಿ ಬಾಂಬ್ ಪತ್ತೆಯಾಗಿಲ್ಲ ಇದು ಹುಸಿ ಕರೆ ಎಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಬಿ.ದಯಾನಂದ್ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ಶಾರೆ.

ಅಷ್ಟಕ್ಕೂ ಈ ಮೇಲ್ ಪತ್ರದಲ್ಲಿ ಇರುವುದೇನು :

“ಶಾಲೆಯ ಮೈದಾನದಲ್ಲಿ ಬಾಂಬ್ ಇಟ್ಟಿದ್ದೇವೆ. ನವೆಂಬರ್ 26ರಂದು ಅಲ್ಲಾಹನ ಮಾರ್ಗದಲ್ಲಿ ನಮ್ಮ ಹುತಾತ್ಮರು ನೂರಾರು ಮೂರ್ತಿ ಪೂಜಕರನ್ನು(ಹಿಂದೂಗಳು) ಹತ್ಯೆ ಮಾಡಿದ್ದಾರೆ. ಲಕ್ಷಾಂತರ ಕಾಫಿರರ ಕುತ್ತಿಗೆಗೆ ಕತ್ತಿ ಹಿಡಿದಿದ್ದಾರೆ. ನೂರಾರು ಮುಜಾಹಿದ್ಗಳು ಅಲ್ಲಾಹನ ಮಾರ್ಗದಲ್ಲಿ ಹೋರಾಡಲು ಸಜ್ಜಾಗಿದ್ದೇವೆ. ನೀವೆಲ್ಲರೂ ಅಲ್ಲಾಹುವಿನ ಶತ್ರುಗಳು, ನಾವು ನಿಮ್ಮನ್ನು ಹಾಗೂ ನಿಮ್ಮ ಮಕ್ಕಳನ್ನು ಹತ್ಯೆ ಮಾಡುತ್ತೇವೆ. ನೀವು ನಮ್ಮ ಗುಲಾಮರಾಗದೆ ಬೇರೆ ಆಯ್ಕೆಗಳಿಲ್ಲ. ಅಲ್ಲಾಹುವಿನ ನೈಜ ಧರ್ಮವನ್ನು ಸ್ವೀಕರಿಸಿ.

ಬಿಸ್ಮಿಲ್ಲಾಹ್, ನಾವು ಇಡೀ ಭಾರತದಲ್ಲಿ ಅಲ್ಲಾಹನ ನೈಜ ಧರ್ಮವನ್ನು ಎಲ್ಲೆಡೆ ಪ್ರಸಾರ ಮಾಡಲಿದ್ದೇವೆ. ನಾವು ನಿಮ್ಮ ಮೇಲೆ ದಾಳಿಕೋರರನ್ನು ಕಳಿಸಿದ್ದು, ನಿಮ್ಮನ್ನು ಮುಗಿಸಲು ಬರುತ್ತಿದ್ದೇವೆ. ಬಿಸ್ಮಿಲ್ಲಾಹ್, ನಾಳೆ ಪ್ರಪಂಚದಾದ್ಯಂತ ಸಾವಿರಾರು ಝಿಯೋನಿಸ್ಟ್ಗಳು ಸಾಯಲಿದ್ದಾರೆ. ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಇಸ್ಲಾಂನ ಅರಿತವಾದ ಖಡ್ಗಕ್ಕೆ ಸಿಲುಕಿ ಸಾಯಿರಿ. ಅಲ್ಲಾಹು ಅಕ್ಬರ್.”

Bangalore News

ಇದಿಷ್ಟು ಪತ್ರದಲ್ಲಿರುವ ಸಾರಾಂಶ. ಈ ಪತ್ರದ ಮೂಲಕ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಇಲ್ಲವೇ ಸಾಯಲು ಸಿದ್ಧರಾಗಿ ಎಂಬುವ ಬೆದರಿಕೆ ಹಾಕಲಾಗಿದೆ. ಇಸ್ಲಾಂ ಮತಾಂತರದ ಬೆದರಿಕೆ ಪುಟ್ಟ ಮಕ್ಕಳ ಮೇಲೂ ಆಗುತ್ತಿರುವುದು ವಿಷಾಧನೀಯ. ಮಕ್ಕಳ ಹಸನ್ಮುಖ ಸಂತೋಷವನ್ನು ಕಸಿದು ಭಯದ ವಾತಾವರಣ ಬಿತ್ತುವ ಇಂತಹ ದುಷ್ಕೃತ್ಯಕ್ಕೆ ಪೊಲೀಸ್‌ ಇಲಾಖೆ ತಡೆಹಾಕಬೇಕಿದೆ.

ಸಾಮಾನ್ಯವಾಗಿ ಶಾಲೆಗಳಿಗೆ ಬೆದರಿಕೆ ಹಾಕುವ ವಿಷಯಗಳು ಇಲ್ಲಿಯವರೆಗೆ ಸಣ್ಣ-ಪುಟ್ಟ ವಿಷಯಗಳಾಗಿರುತ್ತಿದ್ದವು. ಆದರೆ, ಪ್ರಸ್ತುತ ಬಂದಿರುವ ಬೆದರಿಕೆಯನ್ನು ಸಾಮಾನ್ಯ ವಿಷಯದಂತೆ ತಿರಸ್ಕರಿಸುವ ಹಾಗಿಲ್ಲ. ಇಸ್ಲಾಂ ಧರ್ಮದ ಹೆಸರಿನಲ್ಲಿ ಬಂದಿರುವ ಈ ಪತ್ರ, ಹಿಂದೂಗಳನ್ನು ಬೆದರಿಕೆಯಲ್ಲಿರಿಸುವ ತಂತ್ರವಾಗಿದೆ. ಪೊಲೀಸರು ಶೀಘ್ರವೇ ತನಿಖೆ ನಡೆಸಿ ಈ ಪತ್ರದ ಹಿಂದಿರುವ ಉದ್ದೇಶವನ್ನು ಬಹಿರಂಗಪಡಿಸಬೇಕಿದೆ. ಕಳೆದ ವರ್ಷವೂ 30 ಶಾಲೆಗಳಿಗೆ ಏಕಕಾಲಕ್ಕೆ ಬಾಂಬ್ ಬೆದರಿಕೆಯ ಈ ಮೇಲ್‌ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

You might also like
1 Comment
  1. ತೇಜ ತಿಮ್ಮಪ್ಪ says

    ಅಂಕಣ ತುಂಬಾ ಚೆನ್ನಾಗಿದೆ.

Leave A Reply

Your email address will not be published.