ಸುಸ್ಥಿರ ಭವಿಷ್ಯಕ್ಕಾಗಿ “ಇವಿ” ಯ ಕೊಡುಗೆಗಳೇನು!

ರಾಬರ್ಟ್ ಆಂಡರ್ಸನ್ ಎಂಬ ಬ್ರಿಟಿಷ್ ಸಂಶೋಧಕರು 1835 ರಲ್ಲಿ ಉದ್ಯಮ ಸಮ್ಮೇಳನದಲ್ಲಿ ಮೊದಲ ಎಲೆಕ್ಟ್ರಿಕ್ ವಾಹನವನ್ನು ಪ್ರದರ್ಶಿಸಿದರು ಎಂದು ಹೇಳಲಾಗುತ್ತದೆ. ಇವಿ (ಇಲೆಕ್ಟ್ರಿಕಲ್ ವೆಹಿಕಲ್) ಎಂದರೆ, ವಾಹನಕ್ಕೆ ಅಳವಡಿಸಲಾದ ಬ್ಯಾಟರಿಗಳನ್ನು ಚಾರ್ಜ್ ಮಾಡುವ ಮೂಲಕ ಮಾಲಿನ್ಯರಹಿತವಾಗಿ ಚಲಾಯಿಸಬಹುದಾದ ವಾಹನ. ಇಲೆಕ್ಟ್ರಿಕ್ ವಾಹನಗಳಿಗೆ ಶಕ್ತಿ ನೀಡಲು ವಿದ್ಯುತ್ ಅಥವಾ ನವೀಕರಿಸಬಹುದಾದ ಶಕ್ತಿಯನ್ನು ಬಳಸಲಾಗುತ್ತದೆ. ಇದು ಇಲೆಕ್ಟ್ರಿಕ್ ವಾಹನದ ಪ್ರಮುಖ ಪ್ರಯೋಜನಗಳಲ್ಲಿ ಒಂದಾಗಿದೆ.

ವಾಹನಗಳ ಬಳಕೆ ಸೇರಿದಂತೆ ಇನ್ನಿತರೆ ಚಟುವಟಿಕೆಗಳ ಪರಿಣಾಮ ಪರಿಸರ ಮಾಲಿನ್ಯ ಹೆಚ್ಚುತ್ತಾ ಸಾಗಿದ್ದು, ವಾಹನಗಳಿಂದ ಬಿಡುಗಡೆಯಾಗುತ್ತಿರುವ ಕಾರ್ಬನ್ ಡೈ ಆಕ್ಸೈಡ್ ನಿಂದ ಪರಿಸರಕ್ಕೆ ಹಾನಿ ತಪ್ಪಿದ್ದಲ್ಲ ಎಂಬುದು ನಮಗೆಲ್ಲರಿಗೂ ಗೊತ್ತೇ ಇದೆ. ಆದರೆ, ಈ ವಿದ್ಯುತ್ ಚಾಲಿತ ವಾಹನಗಳು ಪರಿಸರಸ್ನೇಹಿಯಾಗಿರುವುದಲ್ಲದೇ ಆರ್ಥಿಕವಾಗಿಯೂ ಸಹಾಯಕಾರಿಯಾಗಿವೆ. ಲೀಥಿಯಂ ಐಯಾನ್ ಬ್ಯಾಟರಿಗಳನ್ನು ಚಾರ್ಜ್ ಮಾಡಿಕೊಳ್ಳುವ ಮೂಲಕ ಮತ್ತೊಮ್ಮೆ ಬಳಸಿಕೊಳ್ಳಬಹುದಾದ ವಿಶಿಷ್ಟ ತಂತ್ರಜ್ಞಾನವನ್ನು ಹೊಂದಿದ್ದು, ಪೆಟ್ರೋಲ್, ಡೀಸೆಲ್ʼಗೆ ಬಳಸುವ ಹಣವನ್ನು ಉಳಿತಾಯ ಮಾಡುತ್ತದೆ. ಇಂಧನ ವಾಹನಗಳಿಗೆ ಹೋಲಿಸಿದರೆ ಇಲೆಕ್ಟ್ರಿಕ್ ವಾಹನಗಳು ಪರಿಸರದ ಸುರಕ್ಷತೆಯ ದೃಷ್ಟಿಯಲ್ಲಿ ತುಂಬಾ ಉತ್ತಮವಾಗಿಯೂ ಇವೆ.

ಕಳೆದ ಹಲವು ದಶಕಗಳಲ್ಲಿ ಫಾಸಿಲ್ ಇಂಧನಗಳ ವಾಹನಗಳ ಬಳಕೆ ಹೆಚ್ಚಾಗಿದ್ದು, ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಅಧಿಕವಾಗಿದೆ. ಹಾಗಾಗಿ, ಪರಿಸರದ ಸಂರಕ್ಷಣೆಗಾಗಿ ಇವಿ ಬಳಕೆಯು ಉತ್ತಮವಾಗಿರುವುದರಿಂದ ಇವಿ ಸ್ಕೂಟರ್, ಇವಿ ಆಟೋ ರಿಕ್ಷಾಗಳು, ಇವಿ ಬಸ್ ಹೀಗೆ ಇವಿ ಬಳಕೆಯತ್ತ ನಾಗರಿಕರು ಹೆಚ್ಚಿನ ಒಲವು ತೋರುತ್ತಿದ್ದಾರೆ.

What are the contributions of "EV" for a sustainable future!

2017 ರಲ್ಲಿ ಇಲೆಕ್ಟ್ರಿಕ್ ವೆಹಿಕಲ್ (ಇವಿ) ನೀತಿಯನ್ನು ಪ್ರಾರಂಭಿಸಿದ ಭಾರತದ ಮೊದಲ ರಾಜ್ಯವಾದ ಕರ್ನಾಟಕವು ಇವಿ ಬಳಕೆಗೆ ವಿಶೇಷ ಪ್ರೋತ್ಸಾಹವನ್ನು ನೀಡುತ್ತಿದೆ. ಬಿ.ಇ.ಇ ಇವಿ ಯಾತ್ರಾ ಪೋರ್ಟಲ್ ನ ವರದಿಯ ಪ್ರಕಾರ ಕರ್ನಾಟಕದಲ್ಲಿ 5,059 ಇವಿ ಚಾರ್ಜಿಂಗ್ ಕೇಂದ್ರಗಳಿದ್ದು, ಕರ್ನಾಟಕವು ದೇಶದಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಂಡಿದೆ. ತನ್ಮೂಲಕ, ಕರ್ನಾಟಕವು ಅತಿ ಹೆಚ್ಚು ಇವಿ ಬಳಕೆದಾರರನ್ನು ಹೊಂದಿದೆ ಎಂಬುದೂ ಇದರಿಂದ ಸಾಬೀತಾಗಿದೆ. ಕೇಂದ್ರ ವಿದ್ಯುತ್ ಸಚಿವಾಲಯದ ಅಡಿಯಲ್ಲಿ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ (ಬಿಇಇ) ಅಂಕಿ-ಅಂಶಗಳ ಪ್ರಕಾರ ಮಹಾರಾಷ್ಟ್ರ (3,079), ದೆಹಲಿ (1,886), ಕೇರಳ (958), ತಮಿಳುನಾಡು (643), ಉತ್ತರ ಪ್ರದೇಶ (583) ಮತ್ತು ರಾಜಸ್ಥಾನ (500) ಕರ್ನಾಟಕದ ನಂತರದ ಸ್ಥಾನದಲ್ಲಿವೆ. ಈ ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳನ್ನು ಖಾಸಗಿ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು ಸ್ಥಾಪಿಸಿದೆ.

ಏಕೆ ಇವಿ?

ಬಹುಮುಖ್ಯವಾದ ಪ್ರಯೋಜನಗಳು ಈ ಕೆಳಗಿನಂತಿವೆ:

– ಪರಿಸರಸ್ನೇಹಿ ಹಾಗೂ ಶೂನ್ಯ ವಾಯುಮಾಲಿನ್ಯ.
– ಸುಲಭ ಚಾರ್ಜಿಂಗ್, ಸುಲಭ ನಿರ್ವಹಣೆ, ಸುಲಭ ಪ್ರಯಾಣ.
– ಅತ್ಯಂತ ಕಡಿಮೆ ಚಾರ್ಜಿಂಗ್ ದರ.

What are the contributions of "EV" for a sustainable future!

ಬೆಸ್ಕಾಂ ಇವಿ ಬಳಕೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ತನ್ನ ವ್ಯಾಪ್ತಿಯಲ್ಲಿ 320 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿದ್ದು, ಇವಿ ಬಳಕೆದಾರರು ಸುಲಭವಾಗಿ ಇವಿ ಚಾರ್ಜಿಂಗ್ ಮಾಡುವ ವ್ಯವಸ್ಥೆಯನ್ನು ಬೆಸ್ಕಾಂ ಕಲ್ಪಿಸಿದೆ.

ಇವಿ ಬಳಕೆದಾರರಿಗೆ ಚಾರ್ಜಿಂಗ್ ಮಾಡಲು ಅಥವಾ ಯಾವುದೇ ರೀತಿಯ ದೂರುಗಳನ್ನು ದಾಖಲಿಸಲು, ಇವಿ ಚಾರ್ಜಿಂಗ್ ಕೇಂದ್ರಗಳ ವಿವರಗಳಿಗಾಗಿ, ಮುಂಗಡವಾಗಿ ಸ್ಲಾಟ್ ಕಾಯ್ದಿರಿಸಲು ಬೆಸ್ಕಾಂ ಇವಿ ಮಿತ್ರ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ. ಪ್ಲೇ ಸ್ಟೋರ್ ಅಥವಾ ಆ್ಯಪಲ್ ಸ್ಟೋರ್’ಗಳಲ್ಲಿ ಇವಿ ಮಿತ್ರ ಆ್ಯಪ್ ಲಭ್ಯವಿದ್ದು, ಇವಿ ಬಳಕೆದಾರರು ಇದರ ಸಂಪೂರ್ಣ ಪ್ರಯೋಜನ ಪಡೆಯಬಹುದಾಗಿದೆ.

You might also like
Leave A Reply

Your email address will not be published.