ರೈತರ ಕಲ್ಯಾಣವೇ ಮೊದಲ ಆದ್ಯತೆ – ಚಾ.ವಿ.ಸ.ನಿ.ನಿ ಯಿಂದ ರೈತರ ಕೃಷಿ ಪಂಪ್’ಸೆಟ್’ಗಳಿಗೆ ನಿರಂತರ ವಿದ್ಯುತ್ ಪೂರೈಕೆಯ ಭರವಸೆ.

ಕೃಷಿ ಕಾರ್ಯಗಳಿಗೆ ನೀರಾವರಿಯೇ ಪ್ರಧಾನ. ತೆಂಗು, ಅಡಿಕೆ, ಭತ್ತ, ಧಾನ್ಯ, ಕಬ್ಬು ಮುಂತಾದ ಬಹುತೇಕ ಎಲ್ಲಾ ಬೆಳೆಗಳಿಗೆ ಸಮರ್ಪಕ ನೀರಾವರಿಯಿದ್ದಲ್ಲಿ ಮಾತ್ರ ಉತ್ತಮ ಇಳುವರಿ ಬರಲು ಸಾಧ್ಯ. ಆ ನಿಟ್ಟಿನಲ್ಲಿ ರೈತರು ನೀರಾವರಿಗೆ ಬಹಳಷ್ಟು ಮಹತ್ವ ನೀಡಬೇಕಾಗುತ್ತದೆ.

ಭಾರತ ಕೃಷಿ ಪ್ರಧಾನ ದೇಶವಾಗಿರುವಂತೆಯೇ, ರಾಜ್ಯದಲ್ಲಿಯೂ ಕೂಡ ಬಹಳಷ್ಟು ಜಿಲ್ಲೆಗಳಲ್ಲಿ ಕೃಷಿಯನ್ನೇ ಅವಲಂಬಿಸಲಾಗಿದೆ. ಅದರಲ್ಲಿಯೂ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ವಿವಿಧ ರೀತಿಯ ಬೆಳೆಗಳಾದ ಕಬ್ಬು, ಭತ್ತ, ಕಾಫಿ, ಚಹಾ, ಅಡಿಕೆ, ತೆಂಗು ಮುಂತಾದ ಬೆಳೆಗಳನ್ನೇ ರೈತರು ಅವಲಂಬಿಸಿದ್ದಾರೆ. ಈ ಪ್ರಮುಖ ಐದು ಜಿಲ್ಲೆಗಳ ರೈತರ ನೀರಾವರಿಗಾಗಿ ವಿದ್ಯುತ್ ಅನ್ನು ಸಮರ್ಪಕವಾಗಿ ಪೂರೈಸುವ ಜವಾಬ್ದಾರಿಯನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಚಾ.ವಿ.ಸ.ನಿ.ನಿ) ಯು ನಿರ್ವಹಿಸುತ್ತಿದೆ.

ಕೃಷಿ ಪಂಪ್’ಸೆಟ್’ಗಳಿಗೆ ಕೇವಲ ನಿರಂತರ ವಿದ್ಯುತ್ ಪೂರೈಕೆಯಷ್ಟೇ ಅಲ್ಲದೆ, ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆ ಕೂಡ ಅತ್ಯವಶ್ಯ. ಯಾವುದೇ ಸಂದರ್ಭಗಳಲ್ಲಿ ವಿದ್ಯುತ್ ವೋಲ್ಟೇಜ್’ನಲ್ಲಿ ಏರಿಳಿಕೆಯಾದರೆ, ಕೃಷಿ ಪಂಪ್’ಸೆಟ್’ಗಳು ವಿಫಲಗೊಂಡು ರೈತರ ನೀರಾವರಿಗೆ ತೊಂದರೆಯಾಗುವುದನ್ನು ಮನಗಂಡು, ರೈತರ ನೀರಾವರಿಗೆ ಯಾವುದೇ ರೀತಿಯ ಅಡಚಣೆಯಾಗದಂತೆ ನೋಡಿಕೊಳ್ಳಲು ವಿದ್ಯುತ್ ನಿಗಮವು ಶ್ರಮಿಸುತ್ತಿದೆ.

Welfare of Farmers First Priority - Assurance of continuous power supply to Farmers Agricultural Pump'sets by C.V.S.N.I.

ಚಾ.ವಿ.ಸ.ನಿ.ನಿ ವ್ಯಾಪ್ತಿಯಲ್ಲಿ 4.8 ಲಕ್ಷಕ್ಕೂ ಅಧಿಕ ಕೃಷಿ ಪಂಪ್’ಸೆಟ್’ಗಳಿವೆ. 0.2 ಹೆಚ್.ಪಿ ಯಿಂದ ಆರಂಭಿಸಿ, 10-15 ಹೆಚ್.ಪಿ ಗಿಂತಲೂ ಅಧಿಕ ಸಾಮರ್ಥ್ಯದ ಕೃಷಿ ಪಂಪ್’ಸೆಟ್’ಗಳಿಗೆ ನಿರಂತರ ವಿದ್ಯುತ್ ಪೂರೈಸುವುದು ಸವಾಲಿನ ಕೆಲಸವೇ ಆಗಿದೆ. ಆದರೆ, ರೈತರ ಕೃಷಿ ಚಟುವಟಿಕೆಗಳನ್ನೇ ಗಮನದಲ್ಲಿಟ್ಟುಕೊಂಡು, ಯಾವುದೇ ರೀತಿಯಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಲು ವಿವಿಧ ಕ್ರಮಗಳನ್ನು ಚಾ.ವಿ.ಸ.ನಿ.ನಿ ಈಗಾಗಲೇ ಕೈಗೊಂಡಿದೆ. ಅವುಗಳು ಈ ಕೆಳಗಿನಂತಿವೆ:

1. ಕೃಷಿ ನೀರಾವರಿಗಾಗಿ ನಿರಂತರ 7 ಗಂಟೆಗಳ 3 ಫೇಸ್ ವಿದ್ಯುತ್ ಪೂರೈಕೆ.
2. ಆಯಾ ಪ್ರದೇಶಗಳಲ್ಲಿ ಇರುವ ಕೃಷಿ ಪಂಪ್’ಸೆಟ್’ಗಳ ಸಂಖ್ಯೆಯನ್ನಾಧರಿಸಿ, ವಿದ್ಯುತ್ ಮಾರ್ಗಗಳ ವಿಸ್ತರಣೆ ಹಾಗೂ ಹೆಚ್ಚುವರಿ ವಿದ್ಯುತ್ ಪರಿವರ್ತಕಗಳ ಸ್ಥಾಪನೆ.
3. ಪಿಎಂ ಕುಸುಮ್ ಯೋಜನೆಯ ಕಾಂಪೋನೆಂಟ್- ಬಿ ಮತ್ತು ಕಾಂಪೋನೆಂಟ್- ಸಿ ಅನುಷ್ಠಾನದ ಮೂಲಕ ಕೃಷಿ ಪಂಪ್’ಸೆಟ್ ಮತ್ತು ಕೃಷಿ ಫೀಡರ್’ಗಳಿಗೆ ಸೌರವಿದ್ಯುತ್ ಪೂರೈಕೆ.
4. ಕೃಷಿ ಪಂಪ್’ಸೆಟ್’ಗಳನ್ನು ನಿಬಂಧನೆ -23 ರ ಪ್ರಕಾರ ಸ್ಥಾಪಿಸಿದಲ್ಲಿ, ರೈತರಿಗೆ ಆಕರ್ಷಕ ಮೊತ್ತದ ರಿಯಾಯಿತಿ.

ಈ ಎಲ್ಲಾ ಯೋಜನೆ ಹಾಗೂ ಉಪಕ್ರಮಗಳ ಮೂಲಕ ರೈತರ ಕೃಷಿ ಪಂಪ್’ಸೆಟ್’ಗಳಿಗೆ ನಿರಂತರ ವಿದ್ಯುತ್ ಪೂರೈಕೆ ನೀಡುವುದರೊಂದಿಗೆ ಉತ್ತಮ ನೀರಾವರಿ ಹಾಗೂ ಉತ್ತಮ ಇಳುವರಿಗೆ ಚಾ.ವಿ.ಸ.ನಿ.ನಿ ಸಹಕರಿಸುತ್ತಿದೆ.

You might also like
Leave A Reply

Your email address will not be published.