Pakistan : ಪ್ರಧಾನಮಂತ್ರಿ ಆಯ್ಕೆ ಚುನಾವಣೆಗೆ ವೇಳಾ ಪಟ್ಟಿ ಬಿಡುಗಡೆ

ಪಾಕಿಸ್ತಾನದ ARY ನ್ಯೂಸ್ ವರದಿ ಮಾಡಿದಂತೆ ಪಾಕಿಸ್ತಾನದಲ್ಲಿ ನಡೆಯಲಿರುವ ಪ್ರಧಾನಮಂತ್ರಿ ಚುನಾವಣಾ ವೇಳಾಪಟ್ಟಿಯನ್ನು ರಾಷ್ಟ್ರೀಯ ಅಸ್ಸೆಂಬ್ಲಿ (NA) ಸೆಕ್ರಟರಿಯೇಟ್ ಬಿಡುಗಡೆ ಮಾಡಿದೆ.‌ ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ ಎಂ.ಎನ್‌‌.ಎ ಗಳು ಭಾನುವಾರ ನಡೆಯಲಿರುವ ಪ್ರಧಾನಮಂತ್ರಿ‌ ಆಯ್ಕೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

ಫೆಬ್ರವರಿ 20ರಂದು ಪಿಟಿಐ ಬೆಂಬಲಿತ ಸ್ವತಂತ್ರ ಸದಸ್ಯರ ಬೆಂಬಲದೊಂದಿಗೆ SIC ಅಧ್ಯಕ್ಷ ಸಾಹಿಬ್ಜಾದಾ ಹಮೀದ್ ರಝಾ ತನ್ನ ಪ್ರಧಾನಮಂತ್ರಿ ನಾಮನಿರ್ದೇಶನ ಮಾಡುವ ಪಕ್ಷದ ಉದ್ದೇಶವನ್ನು ಘೋಷಣೆ ಮಾಡಿದರು ಇದಕ್ಕೂ ಮೊದಲು ಫೆಬ್ರವರಿ 13 ರಂದು ಪಿಎಂಎಲ್‌ಎನ್ ಮುಖ್ಯಸ್ಥ ನವಾಜ್ ಷರೀಫ್ ಅವರು ತಮ್ಮ ಕಿರಿಯ ಸಹೋದರ ಮತ್ತು ಪಕ್ಷದ ಅಧ್ಯಕ್ಷ ಶೆಹಬಾಜ್ ಷರೀಫ್ ಅವರನ್ನು ಪ್ರಧಾನಿ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ್ದರು.

ಮುಂಬರುವ ಪ್ರಧಾನಮಂತ್ರಿ ಚುನಾವಣೆಯು ಪಾಕಿಸ್ತಾನದ ಮಟ್ಟಿಗೆ ನಿರ್ಣಾಯಕ ಘಟ್ಟವನ್ನು ಸೂಚಿಸಲಿದ್ದು ದೇಶದ ಆಡಳಿತದಲ್ಲಿ ತಮ್ಮ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಎಲ್ಲಾ ಪಕ್ಷಗಳೂ ತಮ್ಮದೇ ಆದ ರೀತಿಯಲ್ಲಿ ಕಸರತ್ತು ನಡೆಸುತ್ತಿವೆ.

You might also like
Leave A Reply

Your email address will not be published.