ಮುಂದಿನ ಮೂರು ದಿನ ಈ ರಾಜ್ಯಗಳಲ್ಲಿ ಭಾರೀ ಮಳೆ, ಹಿಮಪಾತ – ಭಾರತೀಯ ಹವಾಮಾನ ಇಲಾಖೆ

ಭಾರತೀಯ ಹವಾಮಾನ ಇಲಾಖೆಯು ಜಮ್ಮು ಕಾಶ್ಮೀರದ, ಗಿಲ್ಗಿಟ್-ಬಲ್ಟಿಸ್ಥಾನ್, ಮುಜಾಫರ ಬಾದ್, ಲಡಾಖ್, ಹಿಮಾಚಲ ಪ್ರದೇಶ ‌ಮತ್ತು ಉತ್ತರ ಖಾಂಡ ರಾಜ್ಯಗಳಲ್ಲಿ ಭಾರೀ ಹಿಮಪಾತ ಮತ್ತು ಮಳೆಯಾಗುವ ಸಂಭವವಿದೆ ಎಂದು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಹಾಗಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ‌ ಮೂರು ತಿಂಗಳ ನಂತರ ತೆರೆಯಲಿದ್ದ ಶಾಲೆಗಳ ರಜೆಯನ್ನು ಮೂರು ದಿನಗಳ ಕಾಲ ಮತ್ತೆ ವಿಸ್ತರಿಸಲಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಉತ್ತರಾಖಂಡ ರಾಜ್ಯದ ಉತ್ತರ ಕಾಶಿ, ರುದ್ರಪ್ರಯಾಗ, ಚಮೋಲಿ, ಭಾಗೇಶ್ವರ ಮತ್ತು ಪಿಥೋರಗಢ ಜಿಲ್ಲೆಗಳಲ್ಲಿ ಮಾರ್ಚ್ 1 ಮತ್ತು 2 ರಂದು ಭಾರೀ ಮಳೆ ಮತ್ತು ಹಿಮಪಾತವಾಗುವ ಬಗ್ಗೆ ಅಂದಾಜಿಸಿದೆ ಹಾಗೂ ಉಳಿದಿರುವ ಗುಡ್ಡ ಗಾಡು ಜಿಲ್ಲಾ ಪ್ರದೇಶದಲ್ಲೂ ಹಗುರ ‌ಮಳೆ ಬೀಳುವ ಸಾಧ್ಯತೆ ಇದೆ.

ಇನ್ನು ಈಶಾನ್ಯ ಭಾರತದ ಭಾಗಗಳಾದ ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ ಮಿಜೋರಾಂ‌ ಮತ್ತು ತ್ರಿಪುರಾದಲ್ಲೂ ಮಾರ್ಚ್ 3 ರಿಂದ 6 ರ ತನಕ ಲಘುವಾದ ಮತ್ತು ಕೊಂಚ ಮಟ್ಟಿನ ಮಳೆ ಬೀಳುವ ಮುನ್ಸೂಚನೆ ಇದೆ ಎನ್ನಲಾಗಿದೆ. ಮುಂದಿನ ಆರು ದಿನಗಳಲ್ಲಿ ಅರುಣಾಚಲದ‌ ಮೇಲೆ ಪ್ರತ್ಯೇಕವಾದ ಭಾರೀ ಮಳೆ ಹಾಗೂ ಮಾರ್ಚ್ 6 ರಂದು ಹಿಮಪಾತವಾಗುವ ಬಗ್ಗೆಯೂ ಹೇಳಲಾಗಿದೆ.

Heavy rain, snowfall in these states for the next three days - Indian Meteorological Department

ಮಾರ್ಚ್ 1 ಮತ್ತು 2 ರಂದು ಪಂಜಾಬ್, ಹರಿಯಾಣ, ದೆಹಲಿ, ಚಂಡೀಗಡ, ದೆಹಲಿ, ರಾಜಸ್ಥಾನ , ಮತ್ತು ಮಧ್ಯಪ್ರದೇಶದ ಕೆಲ ಜಾಗ, ಮಹಾರಾಷ್ಟ್ರದ ವಿದರ್ಭ, ಮರಾಠವಾಡ ಪ್ರದೇಶದಲ್ಲಿ ಲಘುವಾದ ಆಲಿಕಲ್ಲು ಸಹಿತ ಮಳೆ ಬೀಳಲಿದ್ದು ಛತ್ತೀಸ್‌ಗಡದಲ್ಲೂ ಲಘುವಾದ ಮಳೆಯ ಮುನ್ಸೂಚನೆ ಇದೆ.

ಉತ್ತರಭಾರತದಲ್ಲಿ ಹಿಮಪಾತ ಮತ್ತು ಮಳೆಯ ಸೂಚನೆಯಾದರೆ ದಕ್ಷಿಣದ ಕೇರಳದಲ್ಲಿ ಇನ್ನು ಮುಂದಿನ ಎರಡು ದಿನ ಅತಿಯಾದ ಬಿಸಿಲಿನ ಜಳದ ಮುನ್ಸೂಚನೆ ನೀಡಲಾಗಿದ್ದು ಮಾರ್ಚ್ ಎರಡನೇ ವಾರದ ನಂತರ ಕೇರಳ ರಾಜ್ಯದಲ್ಲಿ ಗುಡುಗು ಸಹಿಯ ಮಳೆ ಬೀಳುತ್ತದೆ ಎಂದು ಅಂದಾಜಿಸಲಾಗಿದೆ.

You might also like
Leave A Reply

Your email address will not be published.