ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ – ಮುನ್ನುಡಿ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆಗೆ ಹೋಗುವುದಕ್ಕೂ ಮುನ್ನ ಮಂಡಿಸಲಿರುವ ಕೊನೆಯ ಆಯವ್ಯಯವನ್ನು ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಮಂಡಿಸುತ್ತಿದ್ದು, ಅದರಲ್ಲಿ ಮತದಾರರಿಗೆ ಭರ್ಜರಿ ಕೊಡುಗೆಗಳು ಇರಲಿದೆಯೇ? ದೇಶದ ಆರ್ಥಿಕಾಭಿವೃದ್ಧಿಯನ್ನು ಮಾತ್ರ ಗಮನದಲ್ಲಿರಿಸಿಕೊಂಡು ಬಜೆಟ್ ಮಂಡನೆಯಾಗುತ್ತಿದೆಯೇ? ಜನಪ್ರಿಯ ಹಾಗೂ ಅಭಿವೃದ್ಧಿಪರ ಉಪಕ್ರಮಗಳ ಮಿಶ್ರಣವಾದ ಬಜೆಟ್ ಆಗಿರಲಿದೆಯೇ ಎಂಬಿತ್ಯಾದಿ ಕುರಿತು ಜನರಲ್ಲಿ ಕುತೂಹಲ ಮನೆಮಾಡಿದೆ. ಇನ್ನೂ ಬಜೆಟ್ ಮಂಡನೆ ಕುರಿತು ಈ ಕ್ಷಣದವರೆಗೆ ಏನೆಲ್ಲ ಬೆಳವಣಿಗೆಯಾಗಿದೆ ಎಂಬುದರ ಕುರಿತಾದ ಮಾಹಿತಿ ಈ ವರದಿಯಲ್ಲಿದೆ.

Interim budget

ಸಿಹಿ ತಿನ್ನಿಸುವ ಮುನ್ನ ಹಾರೈಸಿದ ಮುರ್ಮು:

ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆಗೆ ಹೋಗುವುದ್ದಕ್ಕೂ ಮುಂಚಿನ ಕೊನೆಯ ಆಯವ್ಯಯವನ್ನು ವಿತ್ತ ಮಂತ್ರಿ ನಿರ್ಮಲಾ ಸೀತರಾಮನ್ ಮಂಡಿಸುವ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಿಹಿ ತಿನ್ನಿಸಿ ಶುಭ ಹಾರೈಸಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಿಹಿ ತಿನ್ನಿಸಿ ಶುಭ ಹಾರೈಸಿದರು.

ಗಡಿ ದಾಟಿದ ಜಿ.ಎಸ್.ಟಿ ಕಲೆಕ್ಷನ್:

ಪ್ರಸಕ್ತ ವರ್ಷದಲ್ಲಿ ನಮ್ಮ ಭಾರತ ಜಿ.ಎಸ್.ಟಿ ಕಲೆಕ್ಷನ್ ಅನ್ನು ಅದ್ಭುತವಾಗಿ ಆರಂಭಿಸಿದೆ. ಜನವರಿ ತಿಂಗಳಲ್ಲಿ 1.72ಲಕ್ಷ ಕೋಟಿ ಜಿ.ಎಸ್.ಟಿ ಸಂಗ್ರಹವಾಗಿದ್ದು, 2023-24 ನೇ ಹಣಕಾಸು ವರ್ಷದಲ್ಲಿ ಮೂರನೇ ಬಾರಿಗೆ ಜಿ.ಎಸ್.ಟಿ ಕಲೆಕ್ಷನ್ 1.70 ಲಕ್ಷ ಕೋಟಿ ಗಡಿ ದಾಟಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಲೇಖಾನುದಾನ ಎಂದರೆ ಏನು?

ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳ ಅವಧೀಗೆ ಸರ್ಕಾರಿ ಖರ್ಚುವೆಚ್ಚ ಹಾಗೂ ನೌಕರರ ಸಂಬಳ ಪಾವತಿಗೆ ಬೇಕಾದ ಹಣವನ್ನು ಬೊಕ್ಕಸದಿಂದ ಖರ್ಚು ಮಾಡಲು ಶಾಸನಸಭೆಯಿಂದ ಪಡೆಯುವ ಅನುಮತಿಯೇ ಲೇಖಾನುದಾನ. ಇದೊಂದು ಸಂಕ್ಷಿಪ್ತ ಹಣಕಾಸು ದಾಖಲೆಯಾಗಿದ್ದು, ಅದರಲ್ಲಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಅಂಕಿ-ಅಂಶಗಳಷ್ಟೇ ಇರುತ್ತದೆ. ಅದರಲ್ಲಿ ತೆರಿಗೆ ದರಗಳನ್ನು ಬದಲಿಸಲು ಅಥವಾ ಹೊಸ ಯೋಜನೆಗಳನ್ನು ಪ್ರಕಟಿಸಲು ಸಾಧ್ಯವಿಲ್ಲ. ಅಗತ್ಯಬಿದ್ದರೆ ಲೇಖಾನುದಾನವನ್ನು ಇನ್ನೆರೆಡು ತಿಂಗಳು ವಿಸ್ತರಿಸಬಹುದಾಗಿದೆ.

ನಿರ್ಮಲಾ ಸೀತಾರಾಮನ್ ಅವರ ಸೀರೆಯ ಮೇಲೆ ಬಿತ್ತು ಜನರ ಕಣ್ಣು:

6ನೇ ಬಾರಿ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತರಾಮನ್ ಉಡುವ ಸೀರೆ ಕೂಡ ಚರ್ಚೆಗೆ ಎಡೆಮಾಡಿಕೊಡುತ್ತದೆ. ಭಾರತೀಯ ಕೈ ಮಗ್ಗ ಸೀರೆಗಳನ್ನು ಉತ್ತೇಜಿಸುವ ಚೆನ್ನೈ ಮೂಲದ ಕರ್ನಾಟಕದ ರಾಜ್ಯಸಭಾ ಸದಸ್ಯೆಯಾಗಿರುವ ನಿರ್ಮಲಾ ಸೀತರಾಮನ್ ಅವರು ಬಜೆಟ್ ಮಂಡನೆಗೆ ಉಡುವ ಸೀರೆ ಕುರಿತು ಪ್ರತಿಬಾರಿಯು ಚರ್ಚೆಯಲ್ಲಿರುತ್ತದೆ. ಅಲ್ಲದೇ ಸೀರೆ ಕುರಿತೆ ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲಕಾರಿಯಿಂದ ಕಾಯುತ್ತಲಿರುತ್ತಾರೆ. ಅಂದ ಹಾಗೆ ಈ ಬಾರಿ ಸೀತಾರಾಮನ್ ಅವರು ನೀಲಿ ಸೀರೆ ಹಾಗೂ ಕ್ರಿಮ್ ಬಣ್ಣದ ಕೈ ಮಗ್ಗದ ಸೀರೆಯಲ್ಲಿಯೇ ಮಿಂಚುತ್ತಿದ್ದು, ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರ ಸೀರೆಯ ಮೇಲೆ ಬಿತ್ತು ಜನರ ಕಣ್ಣು

You might also like
Leave A Reply

Your email address will not be published.