ವಾರಾಣಸಿ ಪುರಪತಿಂ ಭಜ ವಿಶ್ವನಾಥಂ

ವಾರಣಾಸಿ ಕೋರ್ಟಿನ ತೀರ್ಪಿನ ಪ್ರಕಾರ ಹಿಂದೂಗಳಿಗೆ ವ್ಯಾಸ ಜೀ ನೆಲಮಾಳಿಗೆಯಲ್ಲಿ ಪೂಜೆ ಮಾಡುವ ಹಕ್ಕನ್ನು ಪ್ರಕಟಿಸುತ್ತಲೇ ತೀರ್ಪಿನ ಕೆಲವೇ ಗಂಟೆಗಳಲ್ಲಿ ವಾರಣಾಸಿ ಪೋಲಿಸ್ ಆಯುಕ್ತರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಆ ಸಂಕೀರ್ಣಕ್ಜೆ ಬೇಟಿನೀಡಿ; ನ್ಯಾಯಾಲಯದ ಆದೇಶದ ಪ್ರಕಾರ ಪೂಜೆಗೆ ಅಲ್ಲಿ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದರು ಹಾಗೂ ಇಂದು ಬೆಳಿಗ್ಗೆ ಕಾಶಿ ವಿಶ್ವನಾಥ ದೇವಸ್ಥಾನದ ಪ್ರಧಾನ ಅರ್ಚಕರಾದ ಓಂ ಮಿಶ್ರಾ ಜೀ ಇವರು ಅಲ್ಲಿ ಪೂಜಾ ವಿಧಿಗಳನ್ನು ನೆರವೇರಿಸಿದರು.

Varanasi

ಏನಿದು ವ್ಯಾಸ ಜಿ ನೆಲಮಾಳಿಗೆ?

ಇಂದು ಹಿಂದೂಗಳಿಗೆ ಕಾಶಿ ವಿಶ್ವನಾಥ ಮೂಲ ದೇವಸ್ಥಾನದಲ್ಲಿ ಪೂಜೆ ಮಾಡುವ ಅವಕಾಶ ದೊರೆತಿದೆ. ಎಂದರೆ ಅದು ಕೇದಾರನಾಥ ವ್ಯಾಸ ಜೀ ಅವರ ಕುಟುಂಬದವರಿಂದ ಮಾತ್ರವೇ. ಜ್ಞಾನ ವ್ಯಾಪಿ ದೇವಸ್ಥಾನದಲ್ಲಿ ನಾಲ್ಕು ನೆಲಮಾಳಿಗೆಗಳಿವೆ. ಅದರಲ್ಲಿ ಒಂದು ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಮಾಡುವ ಅವಕಾಶವನ್ನು ವಾರಣಾಸಿ ನ್ಯಾಯಾಲಯವು ಕಲ್ಪಿಸಿಕೊಟ್ಟಿದೆ.

ಹಿನ್ನೆಲೆ ನೋಡುವುದಾದರೆ, ಕೇದಾರನಾಥ ವ್ಯಾಸ ಜೀ ಅವರ ಕುಟುಂಬವು1580 ರಿಂದಲೂ ಮೂಲ ವಿಶ್ವನಾಥನನ್ನೇ ಪ್ರಾರ್ಥಿಸುತ್ತಾ, ಪೂಜಿಸುತ್ತಾ ಬಂದಿದೆ. ಅವರ ಕುಟುಂಬದವರೇ 1880 ರಲ್ಲಿ ಈ ಪ್ರಕರಣವನ್ನು ದಾಖಲಿಸಿದರು ಹಾಗೂ 1937 ರಲ್ಲಿ ಗೆದ್ದು ಬಂದರು. 1947 ರಲ್ಲಿ ಮತ್ತೆ ಮುಸ್ಲಿಮರು ಆ ಜಾಗವನ್ನು ವಶಪಡಿಸಿಕೊಳ್ಳಲು ಪ್ರಯತ್ತಿಸಿದರೂ ಅದು ವಿಫಲ ಯತ್ನವಾಯಿತು. ಹೀಗೆ 1993 ರ ತನಕವೂ ಅವರೇ ಪೂಜೆ ಸಲ್ಲಿಸುತ್ತಿದ್ದು, 1993 ರಲ್ಲಿ ಮುಲಯಾಂ ಸಿಂಗ್ ಯಾದವ್ ಅವರು ಅಲ್ಲಿ ಪೂಜೆಯನ್ನು ನಿಲ್ಲಿಸಿದರು. ಹಾಗಿದ್ದಾಗಲೂ, ಪೂಜೆಗೆ ಅನುಮತಿ ನೀಡುವಂತೆ ಅವರ ಕುಟುಂಬದ ಸದಸ್ಯರೇ ಪ್ರಕರಣ ದಾಖಲಿಸಿದರು.‌

ಕೇದಾರನಾಥ ವ್ಯಾಸ ಜಿ

ಭಾರತಕ್ಕೆ ಸ್ವಾತಂತ್ರ್ಯವೇನೋ 1947 ರಲ್ಲಿ ಸಿಕ್ಕಿರಬಹುದು. ಆದರೆ ಇಲ್ಲಿ ವಾಸಿಸುವ ಹಿಂದೂಗಳಿಗೆ ಮಾತ್ರ ಇನ್ನೂ ಸಿಗಲಿಲ್ಲ. ವಾರಣಾಸಿ, ಮಥುರಾದಂತ ಸಾವಿರಾರು ದೇವಸ್ಥಾನಗಳು ಇಸ್ಲಾಂ ದಾಳಿಗೆ ಸಿಕ್ಕಿ ನಲುಗಿವೆ. ಆದರೆ ಛಲ‌ಬಿಡದೆ ಎದ್ದು ನಿಂತು ನಾವು ನಮ್ಮ ಸಂಸ್ಕೃತಿಯನ್ನು, ನಾಗರಿಕತೆಯ ಪ್ರತಿಬಿಂಬ ಎನ್ನುವಂತೆ ಹನ್ನೆರಡು ಜ್ಯೋತಿರ್ಲಿಂಗ ಗಳಲ್ಲಿ ಪ್ರಥಮ ಜ್ಯೋತಿರ್ಲಿಂಗ ಹಾಗೂ ಚಾರ್ ಧಾಮ್ ಗಳಲ್ಲಿ ಒಂದಾದ ಸೋಮನಾಥ ಹಾಗೂ ಸಪ್ತಪುರಿಗಳಲ್ಲಿ ಮೊದಲನೇ ಪುರಿ ಅಯೋಧ್ಯೆಯೇ ಸಾಕ್ಷಿ. ಇನ್ನೂ ಸಾವಿರಾರು ಜನ ಹೀರೋಗಳು ಈ ವಿಷಯಗಳ ಕುರಿತು ಬೆಳಕು ಚೆಲ್ಲುತ್ತಿದ್ದಾರೆ, ಹೇಳದ ಕಥೆಗಳು ಸಾವಿರಾರಿವೆ. ಎಲ್ಲದಕ್ಕೂ ಉತ್ತರ ಸಿಗುವ ಸಮಯ ಖಂಡಿತಾ ಬರಲಿದೆ ಅದಕ್ಕಾಗಿ ನಾವು ಶಿವನ ಮುಂದೆ ಮಂಡಿಯೂರಿ ಕುಳಿತ ನಂದಿಯಾಗಬೇಕು ಅಷ್ಟೇ.

ಮೊಹಮ್ಮದ್ ಘಜ್ನಿಯು ಹದಿನೇಳು ಬಾರಿ ಆಕ್ರಮಣ ಮಾಡಿ ನಾಶ ಮಾಡಿದರೂ ಹದಿನೆಂಟನೇ ಬಾರಿ ಮತ್ತೆ ಎದ್ದುನಿಂತ ಸೋಮನಾಥ ಜ್ಯೋತಿರ್ಲಿಂಗ ಮಂದಿರ.

ಗಂಗಾತರಂಗ ರಮಣೀಯ ಜಟಾ ಕಲಾಪಂ, ಗೌರೀ ನಿರಂತರ ವಿಭೂಷಿತ ವಾಮಭಾಗಂ, ನಾರಾಯಣಪ್ರಿಯಭೂಷಿತ ಮನಂಗಮದಾ ಪಹಾರಂ, ವಾರಾಣಸಿ ಪುರಪತಿಂ ಭಜ ವಿಶ್ವನಾಥಂ.

You might also like
Leave A Reply

Your email address will not be published.