ದೇವಸ್ಥಾನ ಪಿಕ್ನಿಕ್ ಜಾಗವಲ್ಲ, ಅನ್ಯಧರ್ಮೀಯರಿಗೆ ಹಿಂದೂ ದೇವಾಲಯಕ್ಕೆ ಪ್ರವೇಶವಿಲ್ಲ – ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು

ಮದ್ರಾಸ್ ಹೈಕೋರ್ಟಿನ ಮಧುರೈ ಪೀಠವು ಮಹತ್ವದ ತೀರ್ಪೊಂದನ್ನು ನೀಡಿದ್ದು, ಹಿಂದೂ ಧರ್ಮವನ್ನು ಪಾಲಿಸದ ವ್ಯಕ್ತಿಗಳು ಕಾರ್ತಿಕೇಯ ಸ್ವಾಮಿಗೆ ಅರ್ಪಿತವಾಗಿರುವ ‘ಪಳನಿ ಮುರುಗನ್’ ದೇವಾಲಯ ಪ್ರವೇಶವನ್ನು ನಿರ್ಬಂಧಿಸಬೇಕೆಂದು ಕಡ್ಡಾಯಗೊಳಿಸಿದೆ. ಯಾರು ದೇವರು, ದೇವಸ್ಥಾನವನ್ನು ನಂಬುವುದಿಲ್ಲವೋ ಅವರು ದೇವಸ್ಥಾನದ ‘ಕೊಡಿಮಾರಂ’ (ದೇವಸ್ಥಾನದ ಧ್ವಜ ಸ್ತಂಭ) ಆಚೆಗೆ ಹೋಗುವುದನ್ನು ನಿಷೇಧಿಸಲಾಗಿದೆ ಎಂದು ತೀರ್ಪಿನಲ್ಲಿ ಹೇಳಿದೆ.

Important judgment of Madras High Court

ದೇವಸ್ಥಾನದ ಆವರಣದಲ್ಲಿ ಈ ತೀರ್ಪಿನ ಪ್ರತಿ ಅಥವಾ ನಿಷೇಧಿಸಿದ ವಿಷಯದ ಕುರಿತು ಫಲಕಗಳನ್ನು ಪ್ರದರ್ಶಿಸುವಂತೆ ದೇಗುಲಕ್ಕೂ ಸೂಚನೆ ನೀಡಿದೆ. ದೇವಸ್ಥಾನದ ಧ್ವಜ ಸ್ತಂಭದ ಆಚೆಗೆ ಹಿಂದೂಯೇತರರಿಗೆ ಪ್ರವೇಶವಿಲ್ಲ ಎನ್ನುವ ಬೋರ್ಡ್‌ಗಳನ್ನು ಅಳವಡಿಸುವಂತೆ ಎಲ್ಲಾ ದೇವಸ್ಥಾನಗಳಿಗೂ ಸೂಚನೆ ನೀಡಲು ‌ಮದ್ರಾಸ್ ಹೈಕೋರ್ಟ್ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದೆ. ‌ಈ ಸೂಚನಾ ಫಲಕಗಳನ್ನು ದೇವಸ್ಥಾನದ ಆವರಣದೊಳಗೆ ಹಾಗೂ ಧ್ವಜ ಸ್ತಂಭದ ಬಳಿ ಇರಿಸಬೇಕೆಂದು ನ್ಯಾಯಾಲಯವು ಸೂಚನೆ ನೀಡಿದೆ.

ಹಿಂದೂ ಅಲ್ಲದ ಯಾವುದೇ ವ್ಯಕ್ತಿ ಆ ದೇಗುಲಕ್ಕೆ ಬಂದು ನಿರ್ಧಿಷ್ಠ ದೇವರ ದರ್ಶನ ಪಡೆಯಲು ಬಯಸಿದರೆ, ದೇಗುಲಕ್ಕೆ ಸಂಬಂಧಿಸಿದವರು ಹಿಂದೂ ಅಲ್ಲದವರಿಂದ ತನಗೆ ದೇಗುಲದ ಮೇಲೆ, ದೇವರ ಮೇಲೆ ಹಾಗೂ ಹಿಂದೂ ಧರ್ಮದ ಆಚರಣೆಗಳ ಮೇಲೆ ನಂಬಿಕೆ ಇದೆ, ಹಿಂದೂ ಧರ್ಮದ ಪದ್ಧತಿ ಮತ್ತು ಆಚರಣೆಗಳನ್ನು ಅನುಸರಿಸುತ್ತೇನೆ ಅಲ್ಲದೇ ದೇವಾಲಯದ ಸಂಪ್ರದಾಯಗಳನ್ನು ಪಾಲಿಸುತ್ತೇನೆ ಎಂದು ಪ್ರತಿಜ್ಞೆ ತೆಗೆದುಕೊಂಡ ಬಳಿಕವೇ ಹಿಂದೂಯೇತರರು ದೇವಾಲಕ್ಕೆ ಭೇಟಿ ನೀಡಲು ಅನುಮತಿ ನೀಡಬಹುದು ಎಂದು ನ್ಯಾಯಮೂರ್ತಿ ಎಸ್.‌ ಶ್ರೀಮತಿ ತೀರ್ಪು ನೀಡಿದ್ದಾರೆ.

ಅರ್ಜಿ ಸಲ್ಲಿಸಿದವರು ಈ ವಿಷಯವನ್ನು ಫಳನಿ ಮುರುಗನ್ ದೇವಾಲಯವನ್ನು ಗಮನದಲ್ಲಿರಿಸಿ ಕೇಳಿದ್ದರೂ ನ್ಯಾಯಲಯವು ವಿಷಯದ ಗಂಭೀರತೆಯನ್ನು ಅರ್ಥೈಸಿಕೊಂಡು ಎತ್ತಿರುವ ವಿಷಯವು ದೊಡ್ಡದಾಗಿದೆ ಹಾಗಾಗಿ ಈ ತೀರ್ಪು ಕೇವಲ ಫಳನಿ ಮುರುಗನ್‌ ದೇವಸ್ಥಾನಕ್ಕೆ ಸೀಮಿತವಾಗಿರದೆ ರಾಜ್ಯದ ಎಲ್ಲಾ ಹಿಂದೂ ದೇವಾಲಯಗಳಿಗೂ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದೆ‌.

Important judgment of Madras High Court

You might also like
Leave A Reply

Your email address will not be published.