ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗಲಿದೆ ಕನ್ನಡಿಗ ಕೆತ್ತಿದ ರಾಮಲಲ್ಲಾ ಮೂರ್ತಿ- ಯಾರವರು ಶಿಲ್ಪಿ?

ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದಲ್ಲಿ ರಾಮ ಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಗೆ ಕೋಟ್ಯಾನುಕೋಟಿ ಭಕ್ತರು ಎದುರು ನೋಡುತ್ತಿದ್ದಾರೆ. ಆದರೆ, ನಮ್ಮ ಕನ್ನಡಿಗರಿಗೆ ಮಾತ್ರ ಡಬಲ್ ಧಮಾಕ ಎಂದರೆ ತಪ್ಪಾಗಲಾರದು! ಅದ್ಯಾಕೆ ಅಂತೀರಾ?

ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪಿತವಾಗುತ್ತಿರುವ ರಾಮ ಲಲ್ಲಾ ಮೂರ್ತಿಯು ಹಿಂದೆ ಶತಮಾನಗಳಿಂದ ಕಂಡ ಕನಸಿದೆ. ಇದಕ್ಕಾಗಿ ವರ್ಷಾನುವರ್ಷಗಳಿಂದ ಕಾನೂನು, ಧಾರ್ಮಿಕ, ರಾಜಕೀಯ ಹೋರಾಟ ಸೇರಿದಂತೆ ಹಲವು ರೀತಿಯಲ್ಲಿ ಹೋರಾಟಗಳು ನಡೆದುಕೊಂಡೆ ಬಂದಿದೆ. ಆದರೂ, ಯಾರಿಗೂ ಜಗ್ಗದ ರಾಮನ ಭಕ್ತರು ಸೆಡ್ಡು ಹೊಡೆದು ಇಂದು ದೇಶದ ಇತಿಹಾಸವನ್ನೇ ಬದಲಿಸಿರುವುದು ಸಾಮಾನ್ಯ ವಿಚಾರವೇ!?

ಇಂತಹದೊಂದು ಐತಿಹಾಸಿಕ ಹೋರಾಟಗಳನ್ನೊಳಗೊಂಡ ಈ ದೇವಾಲಯವು ಮುಂದಿನ ದಿನಗಳಲ್ಲಿ ಹೊಸ ಇತಿಹಾಸ ಬರೆಯಲಿದೆ. ಇಂತಹ ದೇವಾಲಯದಲ್ಲಿ ರಾಮಲಲ್ಲಾನ ಮೂರ್ತಿ ಸ್ಥಾಪನೆ ಮಾಡುತ್ತಿರುವುದು ನಮ್ಮ ಕನ್ನಡಿಗ ಎಂಬುದು ಕರುನಾಡಿನ ಹೆಮ್ಮೆ. ಇದನ್ನು ಕೇಳಲು ನಮ್ಮ ತನುಮನವೆಲ್ಲ ರೋಮಾಂಚನಗೊಳ್ಳುತ್ತಿದೆ ಅಲ್ಲವೇ!?

Idol of Shri Ram Lalla

ರಾಮಲಲ್ಲಾನ ಮೂರ್ತಿ ಕೆತ್ತನೆ ಮಾಡುತ್ತಿರುವ ಶಿಲ್ಪಿ ಯಾರು?

ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗುವ ರಾಮ ಲಲ್ಲಾ ಮೂರ್ತಿಗೆ ಮೂವರು ಶಿಲ್ಪಿಗಳನ್ನು ನೇಮಿಸಲಾಗಿತ್ತು. ಈ ಮೂವರಲ್ಲಿ ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್ ಒಬ್ಬರಾಗಿದ್ದು, ಅವರು ಕೆತ್ತನೆಯ ಮೂರ್ತಿಯೇ ಅಂತಿಮವಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಹೌದು! ಮೈಸೂರಿನ ಅರುಣ್ ಅವರೊಂದಿಗೆ ಬೆಂಗಳೂರಿನ ಜಿ.ಎಲ್.ಭಟ್ ಹಾಗೂ ರಾಜಸ್ಥಾನದ ಸತ್ಯನಾರಾಯಣ ಪಾಂಡೇ ಅವರು ಕೈ ಜೋಡಿಸಿ ರಾಮ ಲಲ್ಲ ಮೂರ್ತಿ ಕೆತ್ತನೆ ಮಾಡಿದ್ದಾರೆ.

ರಾಮಲಲ್ಲಾ ಮೂರ್ತಿಯ ಗಾತ್ರದ ವಿವರ:

51 ಇಂಚು ಎತ್ತರದ ಮೂರ್ತಿ ಇದಾಗಿದ್ದು, 8 ಅಡಿ ಎತ್ತರ, 3 ಅಡಿ ಅಗಲ ಇದೆ. ಇದರಲ್ಲಿ ಪ್ರಭಾವಳಿಯೂ ಒಳಗೊಂಡಿದೆ. ಈ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಅನಾವರಣಗೊಳಿಸಲಿದ್ದಾರೆ.

ಯಾರು ಈ ಅರುಣ್ ಯೋಗಿರಾಜ್?

ಜನವರಿ 22ರಂದು ಆಯೋಧ್ಯೆ ರಾಮ ಮಂದರದಲ್ಲಿ ಆಯೋಜನೆಗೊಂಡಿರುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ 2 ಸಾವಿರ ಆಹ್ವಾನಿತರಲ್ಲಿ ಅರುಣ್ ಸಹ ಒಬ್ಬರು ಎಂಬುದೇ ಸಂತಸದ ವಿಚಾರ.

ಎಂಬಿಎ ಪದವೀಧರರಾಗಿರುವ ಅರುಣ್ ಕಾರ್ಪೋರೇಟ್ ನೌಕರಿಯನ್ನು ತೊರೆದು ಕುಟುಂಬ ನಡೆಸಿಕೊಂಡು ಬಂದ ಶಿಲ್ಪ ಕೆತ್ತನೆ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದರು. 2008 ರಿಂದ ಈವರೆಗೂ ಸುಮಾರು 1 ಸಾವಿರಕ್ಕೂ ಹೆಚ್ಚು ವಿವಿಧ ಪ್ರತಿಮೆಗಳನ್ನು ಕೆತ್ತನೆ ಮಾಡಿದ್ದಾರೆ. ಈ ಮೊದಲು ಕೇದರನಾಥ ದೇಗುಲಕ್ಕೆ ಆದಿ ಶಂಕರಾಚಾರ್ಯರ ಮೂರ್ತಿಯನ್ನು ಕೆತ್ತಿದ್ದರು. ದೆಹಲಿಯ ಇಂಡಿಯಾ ಗೇಟ್ ಬಳಿ ಸ್ಥಾಪಿಸಲಾದ ಸುಭಾಶಚಂದ್ರ ಬೋಸ್ ಅವರ ಪ್ರತಿಮೆಯನ್ನು ಸಹ ಇವರೇ ಕೆತ್ತಿದ್ದರು.

You might also like
Leave A Reply

Your email address will not be published.