ನೂತನ ವರ್ಷಕ್ಕೆ ಹೊಸ ಸ್ಮಾರ್ಟ್ ಫೋನ್ ಗಳು: ಖರೀದಿ ಮಾಡ್ಲಿಕ್ಕೆ ನೀವ್ ರೆಡಿನಾ?

2024ರ ನೂತನ ವರ್ಷಕ್ಕೆ ಇತಿಹಾಸ ವೆಬ್ ಸೈಟ್ ನಿಂದ ಹಾರ್ದಿಕ ಶುಭಾಶಯಗಳು. ಯಾವುದಾದರು ಉಡುಗೊರೆ, ಮೊಬೈಲ್, ಸ್ಕೂಟಿ, ಕಾರು ಹೀಗೆ ಏನನ್ನಾದರು ತೆಗೆದುಕೊಳ್ಳಬೇಕು ಎಂದರೆ ಒಂದು ಸಂದರ್ಭಕ್ಕೆ ಕಾಯುವುದೇ ಹೆಚ್ಚು. ಯಾರಾದರು ಆ ವಸ್ತು ಕುರಿತು ಏನಾದರು ಕೇಳಿದ್ರೆ “ಹೇ! ನಾನು ಈ ವಿಶೇಷ ದಿನದಂದು ತಗೊಂಡಿದ್ದು” ಎಂದು ನೆನಪಿಸಿಕೊಳ್ಳುವುದಕ್ಕಾಗಿ.

ಹಾಗೆಯೇ, ಈ ಹೊಸ ವರ್ಷಕ್ಕೆ ನಿಮ್ಮ ಹೊಸ ಯೋಜನೆಗಳಿಗೆ ತಕ್ಕಹಾಗೆ ಹೊಸ ಹೊಸ ಸ್ಮಾರ್ಟ್ ಫೋನ್ ಗಳನ್ನು ಇದೇ ತಿಂಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಇನ್ನೂ ನೀವು ಹೊಸದಾಗಿ ಖರೀದಿಸಬೇಕೆಂದು ಪ್ಲ್ಯಾನ್ ಮಾಡುತ್ತಿದ್ದಾರೆ, ಈ ಹೊಸ ಸ್ಮಾರ್ಟ್ ಫೋನ್ ಗಳತ್ತ ಗಮನಹರಿಸಿ.

1. ಏಸಸ್ ರಾಗ್ ಫೋನ್ 8:

ಇದೇ ತಿಂಗಳ 8 ರಂದು 512GB/1TB ರೂಪಾಂತರದಲ್ಲಿ ಬಿಡುಗಡೆಯಾಗುವ ಈ ಸ್ಮಾರ್ಟ್ ಫೋನ್ 6.78 ಇಂಚಿನ ಡಿಸ್ ಪ್ಲೇ ಮತ್ತು 50 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಇನ್ನೂ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಜೊತೆಗೆ ಇದು ಕಾರ್ಯನಿರ್ವಹಿಸಲಿದೆ.

2. ಒನ್ ಪ್ಲಸ್ 12 ಸರಣಿ:

ಬಹುನಿರೀಕ್ಷಿತ ಸ್ಮಾರ್ಟ್ಫೋನ್ ಇದಾಗಿದ್ದು, ಇದೇ 23 ರಂದು ಬಿಡುಗಡೆಯಾಗುತ್ತಿದೆ. 6.82 ಇಂಚಿನ HD + LTPEO OLED ಡಿಸ್ ಪ್ಲೇ ಮತ್ತು 64 MP ಹಿಂಬದಿಯ ಕ್ಯಾಮೆರಾ ಹಾಗೂ 32 MP ಮುಂಭಾಗದ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಕ್ವಾಲ್ಕಂ ಸ್ನಾಪ್ಡ್ರಾಗನ್ 8 Gen 3 ಪ್ರೊಸೆಸರ್ನಿಂದ ಈ ಸ್ಮಾರ್ಟ್ ಫೋನ್ ಅನ್ನು ನಡೆಸಲ್ಪಡುತ್ತಿದೆ.

3. ರೆಡ್ ಮಿ ನೋಟ್ 13 ಸರಣಿ:

ಚೀನೀ ಸ್ಮಾರ್ಟ್ಫೋನ್ ಆಗಿದ್ದು, ಈ ಸರಣಿಯಡಿ ನೋಟ್ 13, ನೋಟ್ 13 ಪ್ರೊ ಮತ್ತು ನೋಟ್ 13 ಪ್ರೊ ಪ್ಲಸ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ. ಈ ಫೋನ್ಗಳು 6.67-ಇಂಚಿನ AMOLED ಡಿಸ್ ಪ್ಲೇ ಹೊಂದಿದೆ. ನೋಟ್ 13 ರಲ್ಲಿ 100 ಮೆಗಾ ಪಿಕ್ಸೆಲ್ ಕ್ಯಾಮೆರಾ ಮತ್ತು ನೋಟ್ 13 ಪ್ರೊ ಮಾದರಿಗಳಲ್ಲಿ 200 ಎಂಪಿ ಕ್ಯಾಮೆರಾವನ್ನು ಅಳವಡಿಸಲಾಗಿದೆ ಹಾಗೂ ಈ ಸ್ಮಾರ್ಟ್ ಫೋನ್ 5000 mAh ಬ್ಯಾಟರಿ ಹೊಂದಿದೆ.

4. ವಿವೋ X100 ಸರಣಿ:

ವಿವೋ X100 ಮತ್ತು X100 ಪ್ರೊ ಹೆಸರಿನ ಎರಡು ಫೋನ್ಗಳು ಬಿಡುಗಡೆಯಾಗಲಿದ್ದು, 6.78 ಇಂಚಿನ 8 LTPO AMOLED ಡಿಸ್ ಪ್ಲೇ ಮತ್ತು 50MP ಹಿಂಭಾಗದ ಕ್ಯಾಮೆರಾ ಒಳಗೊಂಡಿದೆ.

5. ಸ್ಯಾಮ್ ಸಂಗ್ ಗ್ಯಾಲಕ್ಸಿ S24:

ಗ್ಯಾಲಕ್ಸಿ S24, S24+ ಮತ್ತು S24 ಅಲ್ಟ್ರಾ ಮಾದರಿಗಳು ಬಿಡುಗಡೆಯಾಗಲಿದ್ದು, ಕ್ವಾಲ್ಕಣ ಸ್ನಾಪ್ಡ್ರಾಗನ್ 8 Gen 3 SoC ಪ್ರೊಸೆಸರ್ ಅನ್ನು ಒಳಗೊಂಡಿರುತ್ತದೆ. IP68 ರೇಟಿಂಗ್ನೊಂದಿಗೆ ನೀರು ಮತ್ತು ಧೂಳು ನಿರೋಧಕ, 8K ಗುಣಮಟ್ಟದ ವಿಡಿಯೋಗಳನ್ನು ರೆಕಾರ್ಡ್ ಮಾಡಬಹುದಾಗಿದೆ.

You might also like
Leave A Reply

Your email address will not be published.