ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ನೂತನ ವರ್ಷಕ್ಕೆ ತಯರಾಯ್ತು 56 ಬಗೆಯ ಸಿಹಿಭಕ್ಷ್ಯಗಳು

2024ರ ನೂತನ ವರ್ಷದಂದು ಅಯೋಧ್ಯೆಯಲ್ಲಿರುವ ರಾಮ ಮಂದಿರದ ರಾಮ ಲಲ್ಲಾ ದೇವರಿಗೆ ರಸಗುಲ್ಲಾ, ಲಡ್ಡು, ಬರ್ಫಿ ಸೇರಿದಂತೆ ವಿವಿಧ ಬಗೆಯ ‘ಭೋಗ್ ಪ್ರಸಾದ’ವನ್ನು ಅರ್ಪಿಸಲಿದ್ದೇವೆ ಎಂದು ರಾಮ ಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ತಿಳಿಸಿದರು.

ಹೊಸ ವರ್ಷದಲ್ಲಿ ರಾಮ ಮಂದಿರದ ದೇವರಿಗೆ 56 ಬಗೆಯ ನೈವೇದ್ಯ ಅರ್ಪಿಸುವುದು ಹಳೆಯ ಸಂಪ್ರದಾಯವಾಗಿದೆ. ಎಂದಿನಂತೆ ಈ ಭಾರಿಯು ಲಕ್ನೋದ ಪ್ರಸಿದ್ಧ ಅಂಗಡಿಯಾದ ‘ಮಧುರಿಮಾ’ ದಿಂದ 56 ಬಗೆಯ ಸಿಹಿಭಕ್ಷ್ಯವನ್ನು ಆರ್ಡರ್ ಮಾಡಲಾಗಿದೆ ಎಂದರು.

ಇನ್ನೂ ಮಧುರಿಮಾ ಸ್ವೀಟ್ ಅಂಗಡಿಯ ಮಾಲೀಕ ಸಜಲ್ ಗುಪ್ತಾ ಮಾತನಾಡಿ, ರಾಮಲಲ್ಲಾ ಮಂದಿರ ನಿರ್ಮಾಣವಾಗುವಾಗ 56 ಬಗೆಯ ನೈವೇದ್ಯಗಳನ್ನು ಅರ್ಪಿಸಬೇಕು ಎಂಬುದು ನಮ್ಮ ಸಂಕಲ್ಪವಾಗಿದ್ದು, ಕಳೆದ 4 ವರ್ಷಗಳಿಂದಲ್ಲೂ ನೈವೇಧ್ಯಕ್ಕಾಗಿ ಸಿಹಿ ಅರ್ಪಿಸುತ್ತಿದ್ದೇವೆ. ಬರುವ ಜನವರಿ 22 ರಂದು ರಾಮಲಲ್ಲಾಗಾಗಿ ಮತ್ತೆ 56 ಬಗೆಯ ಭೋಗ್ ಪ್ರಸಾದವನ್ನು ತರಲಾಗುವುದು ಎಂದು ತಿಳಿಸಿದರು.

Acharya Satyendra Dasಇದೇ ವೇಳೆ ವಿಶ್ವ ಹಿಂದೂ ಪರಿಷತ್ ಮುಖಂಡ ವಿನೋದ್ ಬನ್ಸಾಲ್ ಅವರು ರಾಮ ಮಂದಿರದ ಶಂಕುಸ್ಥಾಪನೆಗಾಗಿ ಯಾಗ ನಡೆಸಿದರು

You might also like
Leave A Reply

Your email address will not be published.