ಬಡರಾಜ್ಯಗಳ ಪಟ್ಟಿ ಬಿಡುಗಡೆ: ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ಬಡರಾಜ್ಯಗಳ ಪಟ್ಟಿ ಬಿಡುಗಡೆ: ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ಭಾರತದ ಬಡರಾಜ್ಯಗಳ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ? ಇದರಲ್ಲಿ ಭಾರತದ ಯಾವ ಯಾವ ರಾಜ್ಯಗಳು ಎಷ್ಟು ಬಡತನದಲ್ಲಿವೆ? ದಕ್ಷಿಣ ಭಾರತದಲ್ಲಿ ಬಡತನದ ಪ್ರಮಾಣ ಕಡಿಮೆಯಾಗಿದ್ದರೆ, ಉತ್ತರ ಭಾರತದಲ್ಲಿ ಬಡತನ ಹೆಚ್ಚಾಗಿದೆ ಎಂಬುದು ತಿಳಿದು ಬಂದಿದೆ. ಬಹು ಆಯಾಮದ ಬಡತನದ ಬಗ್ಗೆ ನಡೆದಿರುವ ಅಧ್ಯಯನದ ಪ್ರಕಾರ ಭಾರತದ ಕುರಿತಾದ ವರದಿ ಇಲ್ಲಿದೆ.

ಕಳೆದ ಅಧ್ಯಯನಕ್ಕೆ ಹೋಲಿಸಿದರೆ, ದಕ್ಷಿಣ ಭಾರತದಲ್ಲಿ ಬಡತನದ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. ಆದರೆ, ಉತ್ತರ ಭಾರತದಲ್ಲಿ ಮಾತ್ರ ಬಡತನದ ಪ್ರಮಾಣ ಹೆಚ್ಚಾಗಿದೆ. ದೇಶದ ಬಡತನದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು 18ನೇ ಸ್ಥಾನದಲ್ಲಿದೆ ಎಂದು ತಿಳಿದುಬಂದಿದೆ.

ಭಾರತದಲ್ಲಿ ಅತಿ ಕಡಿಮೆ ಬಡತನ ಇರುವ ರಾಜ್ಯಗಳು:

ದೇಶದ ಒಟ್ಟು ಬಹು ಆಯಾಮದ ಬಡತನವು ಶೇ.14.96 ರಷ್ಟಿದ್ದು, ಕೇರಳ ಅತೀ ಕಡಿಮೆ ಬಡತನ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಇನ್ನೂ ಗೋವಾ (ಶೇ. 0.84), ಪುದುಚೇರಿ (ಶೇ. 0.85) ರಾಜ್ಯಗಳಲ್ಲಿ ಶೇ.1ಕ್ಕಿಂತ ಕಡಿಮೆ ಬಡತನ ಇದೆ ಎಂದು ವರದಿಯಾಗಿದೆ.

ಕರ್ನಾಟಕದಲ್ಲಿ ಶೇ. 7.58 ರಷ್ಟು ಬಡತನ ಇದ್ದು, ಜಾರ್ಖಂಡ್ನಲ್ಲಿ ಶೇ. 28.81, ಮೇಘಾಲಯದಲ್ಲಿ ಶೇ. 27.79, ಉತ್ತರಪ್ರದೇಶದಲ್ಲಿ ಶೇ. 22.93, ಮಧ್ಯಪ್ರದೇಶದಲ್ಲಿ ಶೇ. 20.63, ಅಸ್ಸಾಂನಲ್ಲಿ ಶೇ. 19.35, ಛತ್ತೀಸ್ಗಡದಲ್ಲಿ ಶೇ. 16.37 ಬಡತನದ ಪ್ರಮಾಣವಿದೆ.

ಇನ್ನು ಒಡಿಶಾದಲ್ಲಿ ಶೇ. 15.68, ನಾಗಾಲ್ಯಾಂಡ್ನಲ್ಲಿ ಶೇ. 15.43, ರಾಜಸ್ಥಾನದಲ್ಲಿ ಶೇ. 15.31, ಅರುಣಾಚಲ ಪ್ರದೇಶದಲ್ಲಿ ಶೇ. 13.76, ತ್ರಿಪುರದಲ್ಲಿ ಶೇ. 13.11, ಪಶ್ಚಿಮ ಬಂಗಾಳದಲ್ಲಿ ಶೇ. 11.89, ಗುಜರಾತ್ನಲ್ಲಿ ಶೇ. 11.66, ಉತ್ತರಾಖಂಡ್ನಲ್ಲಿ ಶೇ. 9.67, ಮಣಿಪುರ್ನಲ್ಲಿ ಶೇ. 8.10, ಮಹಾರಾಷ್ಟ್ರದಲ್ಲಿ ಶೇ. 7.81 ಬಡತನವಿದೆ ಎಂಬುದನ್ನು ವರದಿಯಲ್ಲಿ ಹೇಳಲಾಗಿದೆ.

ಹರಿಯಾಣದಲ್ಲಿ ಶೇ. 7.07, ಆಂಧ್ರಪ್ರದೇಶದಲ್ಲಿ ಶೇ. 6.06, ತೆಲಂಗಾಣದಲ್ಲಿ ಶೇ. 5.88, ಮಿಜೋರಾಂನಲ್ಲಿ ಶೇ. 5.30, ಹಿಮಾಚಲಪ್ರದೇಶದಲ್ಲಿ ಶೇ. 4.93, ಪಂಜಾಬ್ನಲ್ಲಿ ಶೇ. 4.75, ಸಿಕ್ಕಿಂನಲ್ಲಿ ಶೇ. 2.60 ಪ್ರಮಾಣದಷ್ಟು ಬಡತನವಿದೆ.

You might also like
Leave A Reply

Your email address will not be published.