ಅಯೋದ್ಯೆ – ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ!

ರಾಮ ಮಂದಿರ ಸಾವಿರಾರು ಹಿಂದೂಗಳ‌ ಕನಸು ಮಾತ್ರವಲ್ಲ ಕೋಟ್ಯಂತರ ಹಿಂದೂಗಳ ಪರಿಶ್ರಮದ ಫಲ. ಇದೇ ಬರುವ ಜನವರಿ 22 ರಂದು ಉದ್ಘಾಟನೆಗೊಳ್ಳಲು ಪುಣ್ಯಭೂಮಿ ಅಯೋಧ್ಯೆಯಲ್ಲಿ ಭರದಿಂದ ಎಲ್ಲಾ ಕಾರ್ಯಗಳು ಸಾಗುತ್ತಿವೆ.

ಅಯೋಧ್ಯೆಯಲ್ಲಿ ಮಂದಿರ ಮಾತ್ರವಲ್ಲ ಸಂಪೂರ್ಣ ನಗರವೇ ಶ್ರೀ ರಾಮ ಲಲ್ಲಾನನ್ನು ಆಲಂಗಿಸಿಕೊಳ್ಳಲು ಕಾತುರದಿಂದ ಕಾಯುತ್ತಿದೆ. ಇನ್ನು ದೇಶದ ನಾನಾ ಕಡೆಯಿಂದ ಆಗಮಿಸುವ ಭಕ್ತಾದಿಗಳನ್ನು ಗಮನದಲ್ಲಿರಿಸಿಕೊಂಡು ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಾಣಗೊಂಡ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡಿರುವ ವಿಮಾನನಿಲ್ದಾಣಕ್ಕೆ ‘ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಹೆಸರಿಸುವ ಮೂಲಕ ಸಂಪೂರ್ಣ ಶ್ರೀ ರಾಮಯಣವನ್ನು ಬರೆದಂತಹ ಮಹರ್ಷಿ ವಾಲ್ಮೀಕಿಯವರಿಗೆ ಗೌರವ ಸೂಚಿಸಲಾಗಿದೆ.

ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣವು ಇನ್ಸುಲೇಟೆಡ್ ರೂಫಿಂಗ್ ಸಿಸ್ಟಮ್, ಎಲ್ಇಡಿ ಲೈಟಿಂಗ್, ಮಳೆ-ನೀರು ಕೊಯ್ಲು, ಕಾರಂಜಿಗಳೊಂದಿಗೆ ಭೂದೃಶ್ಯ, ನೀರು ಸಂಸ್ಕರಣಾ ಘಟಕ, ಒಳಚರಂಡಿ ಸಂಸ್ಕರಣಾ ಘಟಕ, ಸೌರ ವಿದ್ಯುತ್ ಸ್ಥಾವರ ಮತ್ತು ಇತರ ಹಲವು ಸೌಲಭ್ಯಗಳಂತಹ ವಿವಿಧ ಸಮರ್ಥನೀಯ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇನ್ನು ವಿಮಾನ ನಿಲ್ದಾಣದ ಗೋಡೆಯಲ್ಲಿ ಪ್ರಭು ಶ್ರೀ ರಾಮನ ಜೀವನದ ಬಗೆಗೆ ಸಾರುವ ಕತೆಗಳ, ಚಿತ್ರಗಳು, ಸ್ಥಳೀಯ ಕಲೆಗಳನ್ನು ಕಾಣಬಹುದಾಗಿದೆ.

ಅಯೋಧ್ಯೆಯಲ್ಲಿರುವ ರೈಲ್ವೆಯ ಜಂಕ್ಷನ್ ಹೆಸರನ್ನೂ ಸಹ ಮರುನಾಮಕರಣ ಗೊಳಿಸಲಾಗಿದ್ದು ‘ಅಯೋಧ್ಯಾ ಜಂಕ್ಷನ್‌’ ನಿಂದ ‘ಅಯೋಧ್ಯಾ ಧಾಮ್ ಜಂಕ್ಷನ್’ ಎಂದು ಬದಲಿಸಲಾಗಿದೆ.

You might also like
Leave A Reply

Your email address will not be published.