ಮಹಿಳೆ ಅಡುಗೆ ಮನೆಗೆ ಮಾತ್ರ ಸೀಮಿತ : ಶಾಮನೂರು ಹೇಳಿಕೆಗೆ ಸೈನಾ ನೆಹ್ವಾಲ್‌ ತಿರುಗೇಟು

ಲೋಕಸಭಾ ಚುನಾವಣೆ‌ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ತನ್ನ ಎದುರಾಳಿಗಳನ್ನು ಹಣಿಯಲು ತನ್ನ ಹಳೆಯ ತಂತ್ರವಾದ ವೈಯಕ್ತಿಕ ನಿಂದನೆಗೆ ಇಳಿದಿದೆ. ಈಗ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿ ಇರುವುದು ಕಾಂಗ್ರೆಸ್‌ನ ಹಿರಿಯ ನಾಯಕ‌, ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ.‌

ಶುಕ್ರವಾರ ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿಯ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಕುರಿತು ಮಾತನಾಡುತ್ತಾ, ವಿರೋಧ ಪಕ್ಷದವರಿಗೆ ಸಾರ್ವಜನಿಕವಾಗಿ ಮಾತನಾಡಲು ಗೊತ್ತಿಲ್ಲ, ಶಕ್ತಿ ಇಲ್ಲ, ಮಾತನಾಡುವುದು ಬೇರೆಯದೇ ಕಲೆ. ಅವರಿಗೆ ಅಡುಗೆ ಮನೆಯಲ್ಲಿ ಕೆಲಸ ಮಾಡುವುದು ಮಾತ್ರ ಗೊತ್ತು ಎಂದು ಹೇಳುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.

ಸಭೆಯಲ್ಲಿ ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು, ಗಾಯತ್ರಿಯವರು ಚುನಾವಣೆಯಲ್ಲಿ ಗೆಲ್ಲುವ ‌ಮೂಲಕ ಮೋದಿಯವರಿಗೆ ಕಮಲದ ಹೂವನ್ನು ನೀಡ ಬಯಸಿದ್ದರು. ಮೊದಲು ಅವರಿಗೆ ದಾವಣಗೆರೆಯ ಸಮಸ್ಯೆ ಅರ್ಥವಾಗಲಿ. ನಾವು(ಕಾಂಗ್ರೆಸ್) ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇವೆ ಎಂದು ಶಾಮನೂರು ಶಿವಶಂಕರಪ್ಪ ಅವರು ವ್ಯಂಗ್ಯವಾಗಿ ಹೇಳಿದ್ದಾರೆ. ಇನ್ನು 92 ವರ್ಷದ ಶಾಮನೂರು ಶಿವಶಂಕರಪ್ಪ ಅವರು 5 ಬಾರಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದೀಗ, ಲೋಕಸಣಾ ಕಣಕ್ಕೆ ತನ್ನ ಪುತ್ರ ಹಾಗೂ ರಾಜ್ಯ ಸಚಿವರಾಗಿರುವ ಮಲ್ಲಿಕಾರ್ಜುನ ಅವರ ಪತ್ನಿಗೆ ಅಂದರೆ ತನ್ನ ಸೊಸೆಗೆ ದಾವಣಗೆರೆ ಕಾಂಗ್ರೆಸ್‌ ಟಿಕೆಟ್‌ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಜಿ.ಎಮ್.ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರು, ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗಿ ಇರಬೇಕು ಎಂದು ಶಾಮನೂರು ಅವರು ಹೇಳಿದ್ದಾರೆ ಆದರೆ ಇಂದು ಮಹಿಳೆಯರು ಯಾವ ವೃತ್ತಿಯಲ್ಲಿ ಇಲ್ಲ? ನಾವು ಆಕಾಶದಲ್ಲಿಯೂ ಹಾರುತ್ತಿದ್ದೇವೆ. ಮಹಿಳೆಯರು ಎಷ್ಟು ಪ್ರಗತಿ ಸಾಧಿಸಿದ್ದಾರೆಂದು ಮುದುಕನಿಗೆ ತಿಳಿದಿಲ್ಲ. ಎಲ್ಲಾ ಮಹಿಳೆಯರು ಮನೆಯಲ್ಲಿ ಅವರ ಪ್ರೀತಿ ಪಾತ್ರರಿಗೆ ಅಡುಗೆ ಮಾಡಿ ಹಾಕುವ ಪ್ರೀತಿ ಅವರಿಗೆ ತಿಳಿದಿಲ್ಲ ಎಂದು ಲೇವಡಿ ಮಾಡಿದ್ದಾರೆ. ಇದೆಲ್ಲದರ ನಡುವೆ ಬಿಜೆಪಿಯು ಶಾಮನೂರು ಶಿವಶಂಕರಪ್ಪ ಅವರ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.‌ ಕಾಂಗ್ರೆಸ್ ಪಕ್ಷದವರು ಮಹಿಳೆಯರ ಕುರಿತು ಕೇವಲವಾಗಿ ಮಾತನಾಡುತ್ತಿರುವುದು ಇದೇ‌ ಮೊದಲೇನಲ್ಲ ಇತ್ತೀಚೆಗಷ್ಟೇ ಸುಪ್ರಿಯಾ ಶ್ರೀನಾತೆ ಅವರು ನಟಿ ಹಾಗೂ ಬಿಜೆಪಿ ಅಭ್ಯರ್ಥಿ ಕಂಗನಾ ರನಾವತ್ ಬಗ್ಗೆಯೂ ವೇಶ್ಯೆ ಎಂಬ ಅರ್ಥ ಬರುವ ಹಾಗೆ ಟ್ವೀಟ್ ಮಾಡಿ ವಿವಾದಕ್ಕೆ ಗುರಿಯಾಗಿದ್ದರು.

ಶಾಮನೂರು ಶಿವಶಂಕರಪ್ಪನವರ ಈ ಮಹಿಳಾ ವಿರೋಧಿ ಹೇಳಿಕೆಗೆ ಖ್ಯಾತ ಕ್ರೀಡಾ ತಾರೆ, ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಅವರು ಕಿಡಿಕಾರಿದ್ದು, ನಾನು ಅಡುಗೆ ಮನೆ ಬಿಟ್ಟು ಬಂದ ಕಾರಣದಿಂದಾಗಿಯೇ ದೇಶಕ್ಕೆ ಪದಕಗಳನ್ನು ಗೆದ್ದು ತರುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.

You might also like
Leave A Reply

Your email address will not be published.