ಕುಟುಂಬ ರಾಜಕಾರಣ : ರಾಹುಲ್‌ ಗಾಂಧಿ ವಿರುದ್ಧ ಹರಿಹಾಯ್ದ ನಟಿ ಕಂಗನಾ ರಣಾವತ್

ಈವರೆಗೂ ಬಾಲಿವುಡ್ ನಲ್ಲಿನ ನೆಪೋಟಿಸಂ ಬಗ್ಗೆ ಮಾತನಾಡಿ ಸಾಕಷ್ಟು ಕಷ್ಟವನ್ನೇ ಎದುರಿಸುತ್ತ ಬಂದ ನಟಿ ಕಂಗನಾ ರಣಾವತ್, ಇದೀಗ ರಾಜಕಾರಣಕ್ಕೂ ಎಂಟ್ರಿ ಕೊಟ್ಟಿದ್ದು ಇಲ್ಲಿನ ನೆಪೋಟಿಸಂ ಬಗ್ಗೆ ಟೀಕಿಸಿದ್ದಾರೆ.

ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ಮಿಂಚಿನ ಸಂಚಾರವನ್ನೂ ಕೈಗೊಂಡ ಕಂಗನಾ, ಸಖತ್ ಚುರುಕಾಗಿ ಕೆಲಸ ಮಾಡುತ್ತಿದ್ದಾರೆ. ನಿನ್ನೆ (ಗುರುವಾರ) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ತಮ್ಮ ಕ್ಷೇತ್ರದ ಬಗ್ಗೆ ಹಾಗೂ ರಾಜಕೀಯ ನಡೆಯ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಮಾಹಿತಿಯನ್ನು ಸ್ವತಃ ಅವರೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಕೂಡ ಮಾಡಿಕೊಂಡಿದ್ದಾರೆ.

ಬಿಜೆಪಿ ತನ್ನ ಲೋಕಸಭಾ ಚುನಾವಣೆಯ 5ನೇ ಪಟ್ಟಿ ಘೋಷಣೆ ಮಾಡಿದ್ದು, ಈ ಪಟ್ಟಿಯಲ್ಲಿ ಬಾಲಿವುಡ್‌ ನಟಿ ಕಂಗನಾ ರಣಾವತ್‌’ಗೆ ತವರು ರಾಜ್ಯ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ಕಂಗನಾ ಮಂಡಿ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿನ ಸ್ಥಳೀಯ ಮುಖಂಡರೊಂದಿಗೆ ಮಾತುಕತೆ ಕೂಡ ಆಡುತ್ತಿದ್ದಾರೆ.

ನೆಪೋಟಿಸಂ, ಕುಟುಂಬ ರಾಜಕಾರಣ ಅಂತ್ಯವಾಗಬೇಕಾದರೆ ಕಾಂಗ್ರೆಸ್ ತೊಲಗಬೇಕು: ನಟಿ ಕಂಗಾನ

ಇನ್ನೂ ನೆಪೋಟಿಸಂ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಕಂಗನಾ, ಮೊದಲಿನಿಂದಲೂ ನಾನು ಕಾಂಗ್ರೆಸ್ ಅನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಅದಕ್ಕೆ ಕಾರಣ ಕುಟುಂಬ ರಾಜಕಾರಣ. ರಾಹುಲ್ ಗಾಂಧಿ ಹೆಸರನ್ನು ನೇರವಾಗಿಯೇ ತಗೆದುಕೊಳ್ಳುತ್ತೇನೆ. ಈ ನೆಪೋಟಿಸಂ ಅಂತ್ಯವಾಗಬೇಕು. ಎಲ್ಲರಿಗೂ ಅವಕಾಶ ಸಿಗಬೇಕು ಎಂದು ಕಂಗನಾ ರಣಾವತ್ ಕಟು ನುಡಿಯಲ್ಲೇ ಟೀಕೆ ಮಾಡಿದ್ದಾರೆ.

Family politics: Actress Kangana Ranaut lashed out at Rahul Gandhi

ನಾನು ಮತ್ತು ಶಾರುಖ್ ಈ ಯುಗದ ಕೊನೆಯ ಸೂಪರ್ ಸ್ಟಾರ್ಸ್: ಕಂಗನಾ

ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ಸೂಪರ್ ಸ್ಟಾರ್ ಅನಿಸಿಕೊಂಡ ಶಾರುಖ್ ಕೂಡ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಸೋಲುಂಡಿದ್ದಾರೆ. ನಾನು ಮತ್ತು ಶಾರುಖ್ ಈ ಯುಗದ ಕೊನೆಯ ಸೂಪರ್ ಸ್ಟಾರ್ಸ್ ಎಂದು ಬಣ್ಣಿಸಿಕೊಂಡಿದ್ದಾರೆ.

You might also like
Leave A Reply

Your email address will not be published.