ಪಾಕಿಸ್ತಾನಕ್ಕೆ ಜಯಘೋಷ : ಕಾಂಗ್ರೆಸ್‌ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸ್ತಿದೆ – ವಿಪಕ್ಷ ನಾಯಕ ಆರ್.‌ ಅಶೋಕ್‌

ವಿಪಕ್ಷಗಳು ದೇಶದ್ರೋಗಿಗಳ ಬಂಧನ ಮಾಡಿ ಎಂದು ಧರಣಿ ಮಾಡಿದರು, ಸರ್ಕಾರ ಇದುವರೆಗೂ ಯಾರನ್ನು ಬಂಧನ ಮಾಡಿಲ್ಲ. ನಮ್ಮ ಈ ಹೋರಾಟ ದೇಶದ ಬದುಕಿಗಾಗಿ. ಪಾಕ್ ಭಯೋತ್ಪಾದಕರ ಗುಂಡಿಗೆ ನಮ್ಮ ಸೈನಿಕರು ಬಲಿಯಾಗುತ್ತಿರುವುದು ಎಲ್ಲೆಡೆ ತಿಳಿದಿರುವ ಸತ್ಯವೇ. ನಮ್ಮ ಸರ್ಕಾರ ಇದ್ದಿದ್ರೆ ಪಾಕ್ ಪರ ಘೋಷಣೆ ಕೂಗಿದವರನ್ನ ಅಲ್ಲೇ ಗುಂಡಿಟ್ಟು ಸಾಯಿಸ್ತಿತ್ತು. ಇವರು ಬಂಧನ ಕೂಡಾ ಮಾಡದೇ ರಕ್ಷಿಸುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶದ ಯೋಧರು ಪಾಕಿಸ್ತಾನದ ಭಯೋತ್ಪಾದಕರ ಗುಂಡಿಗೆ ಎದೆಯೊಡ್ಡಿ ನಿಂತಿದ್ರೆ, ಇಲ್ಲಿ ವಿಧಾನಸೌಧದೊಳಗೆ ಪಾಕಿಸ್ತಾನಕ್ಕೆ ಜೈಕಾರ ಹಾಕುವವರ ಪರ ಕಾಂಗ್ರೆಸ್ ನಿಲ್ಲುತ್ತೆ. ಅಲ್ಲದೇ ಕಾಂಗ್ರೆಸ್ ನವರು ಈ ಕೇಸ್ ಮುಚ್ಚಲು ಕ್ಯಾಸೆಟ್ ರೆಡಿ ಮಾಡುತ್ತಿರುವುದು ದುರಂತ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್’ನವರು ಈ ಕೇಸ್ ಮುಚ್ಚಿ ಹಾಕುವ ಕ್ಯಾಸೆಟ್ ರೆಡಿ ಮಾಡ್ತಿದ್ದಾರೆ. ಈ ಕುರಿತು ಈಗಾಗಲೇ ಪ್ರಿಯಾಂಕಾ ಖರ್ಗೆ ಹೇಳಿದಂತೆ, ದೇಶದ್ರೋಹಿಗಳನ್ನ ಸೇಫ್ ಮಾಡೋ ಕೆಲಸ ಮಾಡುತ್ತಿದ್ದಾರೆ. ನೋಡ್ತಿರಿ ಎಫ್ ಎಸ್ ಎಲ್ ವರದಿ ಹೇಗೆ ಬರುತ್ತೆ ಎಂದು. ಎಫ್ಎಸ್ಎಲ್ ಮೂಲಕ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ಮಾಡ್ತಿದ್ದಾರೆ ಎಂದು ತಿಳಿಸಿದರು.

ಇನ್ನೂ ನಾಸೀರ್ ಹುಸೇನ್ ಅವರನ್ನ ಬಂಧಿಸಿ ವಿಚಾರಣೆ ಮಾಡಬೇಕಿತ್ತು. ಅಂದು ಪ್ರತಾಪ್ ಸಿಂಹರನ್ನ ಕಟಕಟೆಯಲ್ಲಿ ನಿಲ್ಸಿದ್ರು, ಅವರೇನೂ ಇವರ ಹಾಗೆ ದೇಶದ್ರೋಹದ ಕೆಲಸ ಮಾಡಿರಲಿಲ್ಲ. ಈ ಕುರಿತು ವಿಧಾನಸೌಧದಲ್ಲಿ ಎಮರ್ಜೆನ್ಸಿ ತಂದಿದ್ದಾರೆ. ನಾವು ಸದನದಲ್ಲಿ ಧರಣಿ ಮಾಡಿದರೂ ಸೆನ್ಸಾರ್ ಹಾಕಿದ್ದಾರೆ ಎಂದು ಸಿಡಿಮಿಡಿಗೊಂಡರು.

You might also like
Leave A Reply

Your email address will not be published.