ಸಂವಿಧಾನ ಜಾಗೃತಿ ಜಾಥಾವೋ ಅಥವಾ ಗ್ಯಾರಂಟಿ ಪ್ರಚಾರ ರಥವೋ?

ಚುನಾವಣೆಗೂ ಮುಂಚೆ ಮತದಾರರಿಗೆ ಗ್ಯಾರಂಟಿಗಳನ್ನು ಘೋಷಿಸಿದ್ದ ಕಾಂಗ್ರೆಸ್, ಸರ್ಕಾರ ರಚನೆಯಾದ ನಂತರ ಗ್ಯಾರಂಟಿಗಳ ಜಾರಿಗೆ ತೊಡಕುಂಟಾಗಿ ಪೇಚಿಗೆ ಸಿಲುಕಿತ್ತು. ಅಧಿಕಾರಿಗಳ ಸಹಾಯದಿಂದ ಹಾಗೋ ಹೀಗೋ ಹೆಣಗಾಡಿ ಗ್ಯಾರಂಟಿ ಯೋಜನೆಗಳಿಗೆ ಒಂದು ರೂಪ‌ ಕೊಟ್ಟು, ರಾಜ್ಯಾದ್ಯಂತ ಅನುಷ್ಠಾನಗೊಳಿಸಿದೆ.

ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪನವರು ತಮ್ಮ ಇಲಾಖೆಯ ಮೂಲಕ ಸಂವಿಧಾನಕ್ಕೆ ಹೆಚ್ಚಿನ ಮಹತ್ವ ನೀಡಿ, ಎಲ್ಲಾ ಕಟ್ಟುಕಟ್ಟಳೆಗಳನ್ನು ಗಾಳಿಗೆ ತೂರಿರುವುದು ಗೊತ್ತೇ ಇದೆ. ಅದರೊಂದಿಗೆ ಸಂವಿಧಾನ ದಿನಾಚರಣೆಗೆ ಕೋಟಿಗಟ್ಟಲೆ ಹಣ ವ್ಯಯಿಸಿ, ಸಂವಿಧಾನ ಪೀಠಿಕೆ ಓದು ಎನ್ನುವ ಕಾರ್ಯಕ್ರಮ ನಡೆಸಿದ್ದು, ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು.

Conduct Constitution Awareness Jatha, Guarantee Scheme
ಈಗ ಮತ್ತೆ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಬೇಕು ಎನ್ನುವ ನೆಪದಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಸಿ, ಗ್ಯಾರಂಟಿ ಯೋಜನೆಗಳಿಗೆ ಇನ್ನಷ್ಟು ಪ್ರಚಾರ ನೀಡಲು ಪ್ರಯತ್ನಿಸುತ್ತಿದೆ.

ಇಡೀ ರಾಜ್ಯದ ಎಲ್ಲಾ ಭಾಗಗಳಲ್ಲಿ, ಗ್ರಾಮಮಟ್ಟದಿಂದ ಆರಂಭಿಸಿ, ಸಂವಿಧಾನದ ಕುರಿತಾದ ಟ್ಯಾಬ್ಲೋಗಳನ್ನ ರಚಿಸಿ, ಬೀದಿಬೀದಿಗಳಲ್ಲಿ ಸಂಚಾರ ನಡೆಸಲು ಆದೇಶ ನೀಡಲಾಗಿದೆ.‌ ಆದರೆ ಸಂವಿಧಾನದ ಕುರಿತಾದ ಟ್ಯಾಬ್ಲೋಗಳೊಂದಿಗೆ, ಸರ್ಕಾರದ ಪಂಚ ಗ್ಯಾರಂಟಿಗಳ ಕುರಿತಾದ ಬ್ಯಾನರ್’ಗಳನ್ನು ಅಂಟಿಸಿ, ವೈಭವದ ಪ್ರಚಾರ ನಡೆಸುತ್ತಿರುವುದು, ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷದ ಪ್ರಚಾರಕ್ಕೆ ಹೂಡಿದ ತಂತ್ರ ಇರಬಹುದೇ ಎನ್ನುವುದು ಹಲವರಲ್ಲಿ ಮೂಡಿದ ಪ್ರಶ್ನೆಯಾಗಿದೆ.

You might also like
Leave A Reply

Your email address will not be published.