ಡೊನೇಟ್ ಫಾರ್ ದೇಶ್ ಅಭಿಯಾನ – ಕಾಂಗ್ರೆಸ್ ಈವರೆಗೆ ಸಂಗ್ರಹಿಸಿದ ಹಣವೆಷ್ಟು?

2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್‌ ಪಕ್ಷವು ‘ಡೊನೇಟ್ ಫಾರ್ ದೇಶ್’ ಎಂಬ ಹೆಸರಿನಲ್ಲಿ ದೇಶದಾದ್ಯಂತ ಹಣ ಸಂಗ್ರಹಿಸುವ ಅಭಿಯಾನಕ್ಕೆ ಮುಂದಾಗಿದ್ದು, ಕಳೆದ ವಾರವಷ್ಟೇ ನವದೆಹಲಿಯಲ್ಲಿ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆಯವರು ಚಾಲನೆ ನೀಡಿದ್ದರು.

‘ಡೊನೇಟ್ ಫಾರ್ ದೇಶ್’ ಅಭಿಯಾನದಲ್ಲಿ ಈ ವರೆಗೆ ಸಂಗ್ರಹಿಸಿದ ಹಣದ ಕುರಿತು ಕಾಂಗ್ರೆಸ್ ಪಕ್ಷದ ಖಜಾಂಚಿ ಅಜಯ್ ಮಾಕೇನ್ ಅವರು ಟ್ವೀಟ್ ಮಾಡಿದ್ದು, ಈ ಅಭಿಯಾನವು ಇಲ್ಲಿಯವರೆಗೆ 2 ಲಕ್ಷ ಜನರ ಭಾಗವಹಿಸುವಿಕೆಯಿಂದ 5.35 ಕೋಟಿ ಹಣ ಸಂಗ್ರಹಿಸಿರುವುದಾಗಿ ಉಲ್ಲೇಖಿಸಿದ್ದಾರೆ. ರಾಜ್ಯವಾರು ಸಂಗ್ರಹಿಸಿದ ಮೊತ್ತದಲ್ಲಿ ಕರ್ನಾಟಕವು 32,56,199 ರೂಪಾಯಿಯೊಂದಿಗೆ ಆರನೇ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ (82,48,222), ರಾಜಸ್ಥಾನ (57,73,149), ಉತ್ತರಪ್ರದೇಶ ( 47,07,165), ಹರ್ಯಾಣ (46,84,072), ನವದೆಹಲಿ (38,93,181) ಮೊತ್ತದೊಂದಿಗೆ ಟಾಪ್ 5 ರಾಜ್ಯಗಳು ಎನಿಸಿಕೊಂಡಿವೆ. ಇನ್ನು ದೇಣಿಗೆ ನೀಡಿದವರ ರಾಜ್ಯಗಳ ಶೇಕಡಾವಾರು ನೋಡುವುದಾದರೆ ಕರ್ನಾಟಕವು 4.34% ನೊಂದಿಗೆ 9ನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ 15.85%, ಮಹಾರಾಷ್ಟ್ರ 13.15%, ಉತ್ತರ ಪ್ರದೇಶ 11.88%, ತೆಲಂಗಾಣ 6.45%, ಮಧ್ಯಪ್ರದೇಶ 6.28% ಗಳು ಟಾಪ್ 5 ರಾಜ್ಯಗಳಾಗಿವೆ.

ಕಾಂಗ್ರೆಸ್ ಪಕ್ಷವು ಆರಂಭವಾಗಿ 138 ವರ್ಷಗಳಾದ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷರು 1.38 ಲಕ್ಷ ದೇಣಿಗೆ‌ ನೀಡುವ ಮೂಲಕ ಆರಂಭಗೊಂಡ ಈ ಅಭಿಯಾನಕ್ಕೆ ತನ್ನ ಬೆಂಬಲಿಗರಿಗೆ ಕನಿಷ್ಠ 138 ರೂಪಾಯಿ ಹಾಗೂ ರಾಜ್ಯ ಮತ್ತು ಜಿಲ್ಲಾ ಮಟ್ಟದ ಕಾರ್ಯಕರ್ತರಿಗೆ 1,380 ರುಪಾಯಿ ದೇಣಿಗೆ ನೀಡುವ ಮೂಲಕ ಬೆಂಬಲಿಸುವಂತೆ ಕೇಳಿಕೊಂಡಿತ್ತು.

ಕಾಂಗ್ರೆಸ್‌ ಪಕ್ಷವು ತನ್ನ ಡಿಜಿಟಲ್ ಪ್ರೆಸೆನ್ಸ್ ತೋರಿಸುವಲ್ಲಿ ವಿಫಲವಾಗಿದ್ದು, Donate for desh Top Level Domains (TLDs) ಅನ್ನು ಲಾಕ್ ಮಾಡಲು ಮರೆತದ್ದರ ಪರಿಣಾಮ ಅದರ TLDs ಗಳು ಬಿಜೆಪಿ ಪಕ್ಷ ಮತ್ತು ಖಾಸಗಿ ಪತ್ರಿಕೆಯೊಂದಕ್ಕೆ redirect ಹೊಂದುತ್ತದೆ. ಒಂದು ವೇಳೆ ಅಲ್ಲಿ ಯಾರಾದರೂ ದೇಣಿಗೆ ನೀಡಿದ್ದರೆ, ಪಕ್ಷಕ್ಕೆ ಈ ವಿಚಾರದಲ್ಲಿ ಹಿನ್ನಡೆಯಾಗಿ ಸ್ವಲ್ಪ ಮೊತ್ತ ಕಳೆದುಕೊಂಡಿರಬಹುದು ಎಂದು ಕೂಡಾ ಹಲವರ ಅಭಿಪ್ರಾಯವಾಗಿದೆ.

You might also like
Leave A Reply

Your email address will not be published.