ಪ್ರತಿಷ್ಟೆಯ ಕಣವಾದ ಬೆಂಗಳೂರು ಗ್ರಾಮಾಂತರ ಕ್ಷೇತ್ರ – ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಿಷ್ಟು!

ಕಳೆದ ಹತ್ತು ದಿನಗಳಿಂದ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಇಲ್ಲಿಯವರೆಗೂ 8 ವಿಧಾನಸಭೆ ಕ್ಷೇತ್ರಗಳಲ್ಲಿ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿರುವುದು ಸಂತಸ ತಂದಿದೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಸರಣಿ ಸಭೆಗಳನ್ನು ಮಾಡುತ್ತಿದ್ದು, ಈ ಬಾರಿ ನಮ್ಮ ಗೆಲುವು ಶೇ. 100 ರಷ್ಟು ಪಕ್ಕಾ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.

ಧರ್ಮ ಮತ್ತು ಅಧರ್ಮದ ನಡುವೆ ಚುನಾವಣೆ ವಿಚಾರವಾಗಿ ವ್ಯಂಗ್ಯವಾಡೋದು ವೈಯುಕ್ತಿವಾಗಿ ನನ್ಗೆ ಇಷ್ಟವಾಗಲ್ಲ. ಅದರ ಕುರಿತು ಮಾತನಾಡುವುದೂ ಇಲ್ಲ. ಪ್ರತಿಯೊಂದು ಚುನಾವಣೆ ಆರೋಗ್ಯಕರ ಸ್ಫರ್ಧೆಯಾಗಿರಬೇಕು. ಮತದಾರರನ್ನ ಯಾವುದೇ ರೀತಿಯ ಅಡ್ಡ ದಾರಿಗೆ ಎಳೆಯಬಾರದು ಅಷ್ಟೇ ಎಂದು ತಿಳಿಸಿದ್ದಾರೆ.

ಇನ್ನು, “ಕುಟುಂಬ ರಾಜಕಾರಣಕ್ಕಾಗಿ ಇದೀಗ ಅಳಿಯನನ್ನು ಕಣಕ್ಕೆ ಇಳಿಸಿದ್ದಾರೆ, ಸ್ಥಳೀಯರು ಯಾರೂ ಇರಲಿಲ್ವಾ?” ಎಂಬ ಸಂಸದ ಡಿ.ಕೆ.ಸುರೇಶ್ ಹೇಳಿಕೆ ವಿಚಾರವಾಗಿ ಟಾಂಗ್ ನೀಡಿದ ಡಾ.ಮಂಜುನಾಥ್, “ಕುಟುಂಬ ರಾಜಕಾರಣ ಅನ್ನೋದು ರಾಜ್ಯ, ದೇಶದಲ್ಲಿ ಅಪ್ರಸ್ತುತ. ಈಗ ಅಭ್ಯರ್ಥಿಗಳ ಲಿಸ್ಟ್ ನೋಡಿದ್ರೆ ಗೊತ್ತಾಗುತ್ತೆ. ಮಗ, ಮಗಳು ಇದ್ದಾರೆ. ಸೊಸೆ, ಅಣ್ಣ ಎಲ್ಲರೂ ಇದ್ದಾರೆ. ಅದೆಲ್ಲವೂ ಅಪ್ರಸ್ತುತ” ಎಂದರು.

ಪಾರದರ್ಶಕ ಚುನಾವಣೆಗೆ ಪ್ಯಾರಾ ಮಿಲಿಟರಿ ಬೇಕು ಎಂಬ ಮಾಜಿ ಸಚಿವ ಮುನಿರತ್ನ ಹೇಳಿಕೆ ವಿಚಾರವಾಗಿ ಮಾತನಾಡಿ, ಈ ಕುರಿತು ನಮ್ಮ‌ ವರಿಷ್ಟರು ಗಮನಹರಿಸಿದ್ದಾರೆ. ಮುಂದೆ ಏನಾಗುತ್ತೆ ಅನ್ನೋದನ್ನ ಕಾದು ನೋಡೋಣ ಎಂದಿದ್ದಾರೆ.

What did BJP Candidate Dr. C.N.Manjunath said about his ticket for Bengaluru Rural Constituency

ಇನ್ಮು ತಮ್ಮನ ಗೆಲುವಿಗಾಗಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರಚಾರ ಎಂಟ್ರಿ ವಿಚಾರವಾಗಿ ಮಾತನಾಡಿ, ಯಾವುದೇ ವ್ಯಕ್ತಿ ಅಥವಾ ಪಕ್ಷ ಆಗಲಿ ಅವರ ಅಭ್ಯರ್ಥಿ ಗೆಲ್ಲಬೇಕು ಅಂತ ಪ್ರಚಾರ ಮಾಡುವುದು ಕಾಮನ್. ಅದು ರಾಜಕೀಯ ಅಲ್ಲದೇ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಅವರ ಆತ್ಮೀಯರನ್ನು ಗೆಲ್ಲಿಸಲು ಪ್ರಚಾರ ಮಾಡ್ತಾರೆ ಅದು ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದರು.

ನಾಮಪತ್ರ ಸಲ್ಲಿಕೆಗೆ ಎರಡು ದಿನಾಂಕ ನಿಗದಿಯಾಗಿದೆ ಇನ್ನೂ ಫೈನಲ್ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಪ್ರಚಾರಕ್ಕಾಗಿ ಬರುವ ಸಾಧ್ಯತೆಯಿದೆ. ಮೋದಿಯವರು, ಅಮಿತ್ ಶಾ ಪ್ರಚಾರ ಬಗ್ಗೆ ಸಭೆಯಾಗುತ್ತೆ. ನಿಜವಾದ ಪ್ರಚಾರದ ಗಣ್ಯ ಅತಿಥಿಗಳು ಅಂದ್ರೆ ಕಾರ್ಯಕರ್ತರು. ಚುನಾವಣೆಯಲ್ಲಿ ಗೆದ್ದರೆ ಕೇಂದ್ರ ಆರೋಗ್ಯ ಮಂತ್ರಿ ಆಗ್ತಾರೆ ಎಂಬ ವಿಚಾರವಾಗಿ ಆ ರೀತಿಯ ಯಾವುದೇ ಷರತ್ತುಗಳನ್ನ ಹಾಕಿಲ್ಲ. ಮೊದಲು ಸಂಸದರಾಗಬೇಕು, ಪ್ರಚಂಡ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬರಬೇಕು ಆಮೇಲೆ ನೋಡೋಣ ಎಂದು ಡಾ.ಮಂಜುನಾಥ್ ನುಡಿದಿದ್ದಾರೆ.

You might also like
Leave A Reply

Your email address will not be published.