Republic Day – 2024ರ ಗಣರಾಜ್ಯೋತ್ಸವಕ್ಕೆ ಅತಿಥಿ ಯಾರು? ಈ ವಿವರ ಓದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು 2024ರ ಗಣರಾಜ್ಯೋತ್ಸವ ಸಮಾರಂಭಕ್ಕೆ ಅತಿಥಿಯಾಗಿ ಫ್ರಾನ್ಸ್‌ನ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರನ್ನು ಆಹ್ವಾನಿಸಿದೆ, ಈ‌ ಮೂಲಕ ಮ್ಯಾಕ್ರೋನ್ ಅವರು ಇಲ್ಲಿಯವರೆಗೆ ಗಣರಾಜ್ಯೋತ್ಸವಗಳಲ್ಲಿ ಫ್ರಾನ್ಸ್ ‌ನಿಂದ ಆಹ್ವಾನಿತಗೊಂಡ ಆರನೆಯ ನಾಯಕ ಎಂದೆನಿಸಿಕೊಂಡಿದ್ದಾರೆ.‌

ಇದೇ ವರ್ಷದ ಜುಲೈನಲ್ಲಿ ಭಾರತ ಮತ್ತು ಫ್ರಾನ್ಸ್ ರಾಷ್ಟ್ರಗಳು ತಮ್ಮ 25ನೇ ವರ್ಷದ ಗೆಳೆತನ (Strategic Partnership) ವನ್ನು ಆಚರಿಸಿದ್ದವು ಹಾಗೂ ಇದೇ ವರ್ಷ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆದ Bastille Day (France ನ ರಾಷ್ಟ್ರೀಯ ದಿನ) ಸಮಾರಂಭಕ್ಕೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗೌರವ ಅತಿಥಿಯಾಗಿ ಭಾಗವಹಿಸಿದ್ದಲ್ಲದೇ ಫ್ರೆಂಚ್ ಪ್ರೆಸಿಡೆಂಟ್ ಮೋದಿಯವರನ್ನು ‘Grand Cross of the Legion of Honor’ ನೀಡಿ ಗೌರವಿಸಿದ್ದರು.

ನರೇಂದ್ರ ಮೋದಿಯವರ ಸರ್ಕಾರ 2015 ರಿಂದ ಬೇರೆ ಬೇರೆ ದೇಶದ ಗಣ್ಯರನ್ನು ಗಣರಾಜ್ಯೋತ್ಸವಕ್ಕೆ ಆಹ್ವಾನಿಸುತ್ತಾ ಬಂದಿದ್ದು ಮ್ಯಾಕ್ರೋನ್ ಅವರು, ಮೋದಿ ಪ್ರಧಾನಮಂತ್ರಿಯಾದ ಬಳಿಕ ಫ್ರಾನ್ಸ್‌ನಿಂದ ಆಹ್ವಾನಿತಗೊಂಡ ಎರಡನೇ ರಾಷ್ಟ್ರಾಧ್ಯಕ್ಷ ಎನಿಸಿಕೊಳ್ಳಲಿದ್ದಾರೆ.

You might also like
Leave A Reply

Your email address will not be published.