Lokasabha Election 2024 : ರಾಜ್ಯದಲ್ಲಿ ಮೂರೂ ಪಕ್ಷಗಳ ಬಲಾಬಲಗಳೇನು? ಕಾರ್ಯತಂತ್ರಗಳೇನು? ಇಲ್ಲಿದೆ ವಿವರ

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯು ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತಗಳಲ್ಲಿ ಮತದಾನ ನಡೆಯುವುದರಿಂದ ಮೂರೂ ಪಕ್ಷಗಳು ತಮ್ಮ ಚುನಾವಣಾ ತಂತ್ರವನ್ನು ಹೆಣೆಯುತ್ತಿವೆ. ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸುತ್ತಿದ್ದರೆ, ಕಾಂಗ್ರೆಸ್ ಏಕಾಂಗಿಯಾಗಿ 28 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಹಾಗಾದರೆ ಈ ಚುನಾವಣೆಯಲ್ಲಿ ಮೂರು ಪಕ್ಷಗಳ ಆದ್ಯತಾ ವಿಷಯಗಳೇನು? ಅವುಗಳನ್ನು ಹೇಗೆ ಜಾರಿಗೆ ತರುತ್ತವೆ? ಆ ಕಾರ್ಯತಂತ್ರಗಳ ಸಂಭಾವ್ಯ ಪರಿಣಾಮಗಳು ಏನು ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.

ಬಿಜೆಪಿಯ ಕಾರ್ಯತಂತ್ರ!

Lokasabha Election 2024 : What are the strengths of the three parties in the state? What are the strategies? Here is the detail

1. ಮೋದಿ ಕೀ ಗ್ಯಾರಂಟಿ: ಕರ್ನಾಟಕ ಬಿಜೆಪಿಯ ಪ್ರಮುಖ ಚುನಾವಣಾ ಕಾರ್ಯತಂತ್ರವೆಂದರೆ ಪ್ರಧಾನಿ ನರೇಂದ್ರ ಮೋದಿ. ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಕಳೆದ 10 ವರ್ಷಗಳ ಆಡಳಿತವನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ತನ್ನ ಚುನಾವಣಾ ಕಾರ್ಯತಂತ್ರ ಹೆಣೆಯುತ್ತಿದೆ. ಮೋದಿಯವರ ಪ್ರಬಲ ವ್ಯಕ್ತಿತ್ವ ಮತ್ತು ವಿವಿಧ ಕ್ಷೇತ್ರಗಳಲ್ಲಿ ಮೋದಿ ಸರ್ಕಾರ ಮಾಡಿದ ಸಾಧನೆಯನ್ನು ಜನರ ಬಳಿ ತೆಗೆದುಕೊಂಡು ಹೋಗಲು ಹಾಗೂ ಮತದಾರರನ್ನು ಸೆಳೆಯಲು ನಿರ್ಧಾರ ಮಾಡಿದೆ.

2. ರಾಮ ಮಂದಿರ: ಬಿಜೆಪಿ ಹಿಂದುತ್ವದ ಅಜೆಂಡಾ ಇಟ್ಟುಕೊಂಡಿರುವ ಪಕ್ಷವಾಗಿರುವುದರಿಂದ ಹಿಂದೂ ರಾಷ್ಟ್ರೀಯವಾದಿ ಮತದಾರರನ್ನು ಸೆಳೆಯಲು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ವಿಷಯವನ್ನು ಖಂಡಿತ ಪ್ರಸ್ತಾಪಿಸುತ್ತದೆ. ಇದು ಪಕ್ಷದ ಸೈದ್ಧಾಂತಿಕ ಅಂಶವನ್ನು ಪ್ರತಿಧ್ವನಿಸುತ್ತದೆ. ಅದಲ್ಲದೇ ರಾಮ ಮಂದಿರ ಲೋಕಾರ್ಪಣೆ ವಿಷಯ ಚುನಾವಣೆಗೆ ಮುಂಚಿತವಾಗಿಯೇ ಬಿಜೆಪಿ ಪರ ವೇದಿಕೆಯನ್ನು ಸಿದ್ಧಪಡಿಸಿದ್ದು, ಅದನ್ನು ಬಿಜೆಪಿ ಎನ್’ಕ್ಯಾಶ್ ಮಾಡಿಕೊಳ್ಳಲಿದೆ.

3. ಲಿಂಗಾಯತರ ಬೆಂಬಲ: ಬಿಜೆಪಿ ತನ್ನ ಚುನಾವಣಾ ಲೆಕ್ಕಾಚಾರದಲ್ಲಿ ಪ್ರಮುಖವಾಗಿ ಲಿಂಗಾಯತ ಸಮುದಾಯದ ಬೆಂಬಲವನ್ನು ಮತ್ತಷ್ಟು ಹಿಗ್ಗಿಸಿಕೊಳ್ಳುವ ಕಡೆ ಗಮನ ಹರಿಸಿದೆ. ಈಗಾಗಲೇ ಲಿಂಗಾಯತ ಸಮುದಾಯದ ಮಹತ್ವ ಬಿಜೆಪಿಗೆ ಅರ್ಥ ಆಗಿದ್ದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಲಿಂಗಾಯತರನ್ನು ತನ್ನತ್ತ ಸೆಳೆಯಲು ಬಿಜೆಪಿ ಮುಂದಾಗಿದೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಪ್ರಭಾವಿ ಸಮುದಾಯವಾಗಿರುವ ಲಿಂಗಾಯತರ ವಿಶ್ವಾಸ ಪಡೆಯಲು ಬಿಜೆಪಿ ಪ್ರಯತ್ನ ಮಾಡುತ್ತಿದೆ.

ಕಾಂಗ್ರೆಸ್‌ ಪಕ್ಷದ ಕಾರ್ಯತಂತ್ರ ಏನು?

Lokasabha Election 2024 : What are the strengths of the three parties in the state? What are the strategies? Here is the detail

1. ಪಂಚ ಗ್ಯಾರಂಟಿಗಳು: ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಪಂಚ ಗ್ಯಾರಂಟಿಗಳನ್ನು ನೆಚ್ಚಿಕೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಿದ್ದ ಪಂಚ ಗ್ಯಾರಂಟಿಗಳು ಭಾರೀ ಪ್ರಮಾಣದ ಮತಗಳನ್ನು ಕಾಂಗ್ರೆಸ್’ಗೆ ತಂದುಕೊಟ್ಟಿದ್ದವು. ಈಗ ಅವುಗಳನ್ನು ಕಾಂಗ್ರೆಸ್ ಜಾರಿ ಮಾಡಿದ್ದು, ಹೆಚ್ಚಿನ ಮತಗಳನ್ನು ಪಡೆಯುವ ವಿಶ್ವಾಸ ಹೊಂದಿದೆ. ಈಗಾಗಲೇ ಗ್ಯಾರಂಟಿ ಸಮಾವೇಶಗಳನ್ನು ಮಾಡಿ ಚುನಾವಣೆಗೆ ಕಾಂಗ್ರೆಸ್ ವೇದಿಕೆಯನ್ನು ಸಿದ್ಧಗೊಳಿಸಿದೆ. ವಿಧಾನಸಭಾ ಚುನಾವಣೆ ಟ್ರೆಂಡ್ ಪುನರಾವರ್ತನೆಯಾದರೆ, ಕಾಂಗ್ರೆಸ್ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಬಹುದು.

2. ಅಹಿಂದ ಬೆಂಬಲ: ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರನ್ನು ಒಳಗೊಂಡಿರುವ ಅಹಿಂದ ಒಕ್ಕೂಟದ ಬೆಂಬಲವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಶತಪ್ರಯತ್ನ ನಡೆಸುತ್ತಿದೆ. ಅಹಿಂದ ಸಮುದಾಯಗಳ ನಿರ್ದಿಷ್ಟ ಅಗತ್ಯತೆಗಳು ಮತ್ತು ಆಕಾಂಕ್ಷೆಗಳನ್ನು ಪರಿಹರಿಸುವ ಮೂಲಕ, ಪಕ್ಷವು ತನ್ನ ಚುನಾವಣಾ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳಲು ಮುಂದಾಗಿದೆ. ಸಿದ್ದರಾಮಯ್ಯ ಅಹಿಂದ ಸಮುದಾಯದ ನಾಯಕರಾಗಿರುವುದರಿಂದ ಅಹಿಂದ ಮತಗಳು ಕಾಂಗ್ರೆಸ್ ಅನ್ನು ಬಿಟ್ಟು ಹೋಗುವುದಿಲ್ಲ ಎಂಬುದು ಕೈ ನಾಯಕರ ವಿಶ್ವಾಸ.

3. ಪ್ರಬಲ, ಸರಿಯಾದ ಅಭ್ಯರ್ಥಿಗಳು ಕಣಕ್ಕೆ: ಇನ್ನು, ಈ ಸಲ ಗೆಲುವನ್ನೇ ಮಾನದಂಡವನ್ನಾಗಿ ಇಟ್ಟುಕೊಂಡಿರುವ ಕಾಂಗ್ರೆಸ್ ಪ್ರಬಲ ಮತ್ತು ಸಮರ್ಥ ಅಭ್ಯರ್ಥಿಗಳನ್ನು ಲೋಕಸಭಾ ಚುನಾವಣೆಗೆ ಕಣಕ್ಕಿಳಿಸಿದೆ. ಕುಟುಂಬ ರಾಜಕಾರಣದ ಆರೋಪಗಳಿದ್ದರೂ ಅವುಗಳಿಗೆ ಕ್ಯಾರೆ ಎನ್ನದೇ ಹಲವು ಸಚಿವರ ಮಕ್ಕಳಿಗೆ ಟಿಕೆಟ್ ಅನ್ನು ನೀಡಿದೆ. ಆಯಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಅಗತ್ಯವಾದ ಜನಪ್ರಿಯತೆ ಮತ್ತು ತಳಮಟ್ಟದಲ್ಲಿ ಬೆಂಬಲವನ್ನು ಹೊಂದಿರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸುವತ್ತ ಗಮನಹರಿಸಿದೆ.

Lokasabha Election 2024 : What are the strengths of the three parties in the state? What are the strategies? Here is the detail

ಜೆಡಿಎಸ್’ನದ್ದು ಭಿನ್ನ ಸ್ಟ್ರಾಟಜಿ!

1. ಒಕ್ಕಲಿಗ ಮತಗಳ ಬಲವರ್ಧನೆ: ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗ ಸಮುದಾಯವು ಗಣನೀಯ ಪ್ರಭಾವವನ್ನು ಹೊಂದಿದೆ. ಈ ನಿರ್ಣಾಯಕ ವೋಟ್ ಬ್ಯಾಂಕ್ ಅನ್ನು ತನ್ನತ್ತ ಮತ್ತೆ ಸೆಳೆದುಕೊಳ್ಳಲು ಜೆಡಿಎಸ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಒಕ್ಕಲಿಗ ಸಮುದಾಯದ ನಿರ್ದಿಷ್ಟ ಸಮಸ್ಯೆಗಳು ಮತ್ತ ಪರಿಹಾರಗಳ ಬಗ್ಗೆ ಮಾತನಾಡುತ್ತಿರುವ ಜೆಡಿಎಸ್ ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳಲ್ಲಿ ತನ್ನ ರಾಜಕೀಯ ಭವಿಷ್ಯವನ್ನು ಉತ್ತಮಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.

2. ಬಿಜೆಪಿ ಮತಗಳ ವರ್ಗಾವಣೆ: ಬಿಜೆಪಿಯೊಂದಿಗಿನ ಮೈತ್ರಿಯ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿರುವ ಜೆಡಿಎಸ್, ಹಳೇ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಮರ್ಥ ಪರ್ಯಾಯವಾಗಿ ನಿಲ್ಲಲು ಮುಂದಾಗಿದೆ. ಇದಕ್ಕಾಗಿ ಬಿಜೆಪಿಯ ಮತಗಳನ್ನು ಬಳಸಿಕೊಳ್ಳಲು ಜೆಡಿಎಸ್ ತಂತ್ರ ಹೆಣೆದಿದೆ. ಈ ಮೂಲಕ ಹಳೇ ಮೈಸೂರು ಪ್ರಾಂತ್ಯದಲ್ಲಿ ಬದಲಾಗುತ್ತಿರುವ ರಾಜಕೀಯ ಡೈನಾಮಿಕ್ಸ್ ಅನ್ನು ಬಳಸಿಕೊಳ್ಳುವ ಗುರಿಯನ್ನು ಜೆಡಿಎಸ್ ಹೊಂದಿದೆ.

You might also like
Leave A Reply

Your email address will not be published.